ರೋಗನಿರೋಧಕ ಶಕ್ತಿಯು ಉತ್ತಮವಾಗಿರಲು ‘ಆಯುಷ್’ ಸಚಿವಾಲಯವು ಸೂಚಿಸಿದ ‘ಆಯುರ್ವೇದದ ಕಷಾಯ’

ವೈದ್ಯ ಪರೀಕ್ಷಿತ ಶೆವಡೆ
  • ಒಬ್ಬ ವ್ಯಕ್ತಿಗಾಗಿ ಕಷಾಯವನ್ನು ತಯಾರಿಸುವ ಪ್ರಮಾಣ – ನೀರು ೧೦೦ ಮಿ.ಲೀ. (ಸಾಧಾರಣ ೨ ಕಪ್)

  • ತುಳಸಿಯ ೫-೬ ಎಲೆಗಳು (ಒಣಗಿದ / ತಾಜಾ)

  • ದಾಲ್ಚಿನಿ (ಪುಡಿ ಮಾಡುವುದು) ೧ ಚಿಟಿಕೆ ಪುಡಿ

  • ಶುಂಠಿ ೧ ಚಿಟಿಕೆ ಪುಡಿ

  • ಕರಿಮೆಣಸಿನ ೧/೨ ಚಿಟಿಕೆ ಪುಡಿ (ಪಿತ್ತದ ತೊಂದರೆ ಇದ್ದರೆ ಹಾಕಬಾರದು)

ಮೇಲಿನ ಎಲ್ಲ ವಸ್ತುಗಳನ್ನು ಒಟ್ಟು ಮಾಡಿ ಮಂದ ಬೆಂಕಿಯಲ್ಲಿ ಕುದಿಸಿ ಆವಿ ಮಾಡಬೇಕು. ಸುಮಾರು ಕಾಲು ಭಾಗದಿಂದ ಅರ್ಧ ಭಾಗವೆಂದರೆ ೩೦ ರಿಂದ ೫೦ ಮಿ.ಲೀ. ಕಷಾಯವನ್ನು ಉಳಿಸಬೇಕು ಹಾಗೂ ಸೋಸಬೇಕು.

ಅದರಲ್ಲಿ ಮುಂದಿನ ಘಟಕಗಳನ್ನು ರುಚಿಗಾಗಿ ಅಥವಾ ರೂಢಿ ಹಾಗೂ ಉಪಯುಕ್ತತೆಗನುಸಾರ ಸೇರಿಸಿ ತೆಗೆದುಕೊಳ್ಳಬೇಕು.

  • ಒಣದ್ರಾಕ್ಷಿಗಳು ೪-೫ (ಪಿತ್ತ ರೋಗಕ್ಕೆ ಉಪಯುಕ್ತ, ಕಷಾಯ ಮಾಡುವಾಗಲೇ ಕುಟ್ಟಿ ಹಾಕಬೇಕು. ಯಾರಿಗಾದರೂ ಮಧುಮೇಹವಿದ್ದರೆ ಅದನ್ನು ಹಾಕಬಾರದು.)
  • ಬೆಲ್ಲದ ಪುಡಿ ರುಚಿಗನುಸಾರ (ಮಧುಮೇಹವಿದ್ದರೆ ವರ್ಜ್ಯ)
  • ಲಿಂಬೆ ಹಣ್ಣಿನ ರಸ ಅರ್ಧ ಚಮಚ (ರುಚಿಗಾಗಿ ಹಾಗೂ ಅಭ್ಯಾಸಕ್ಕನುಸಾರ, ತೊಂದರೆಯಾಗದಿದ್ದರೆ ತೆಗೆದುಕೊಳ್ಳಬೇಕು)

ಇಂತಹ ಕಷಾಯವನ್ನು ಬೆಳಗ್ಗೆ-ಸಾಯಂಕಾಲ ಪ್ರತಿದಿನ ಸೇವಿಸಬೇಕು.

– ವೈದ್ಯ ಪರೀಕ್ಷಿತ ಶೆವಡೆ, ಎಮ್.ಡಿ. (ಆಯುರ್ವೇದ), ಡೊಂಬಿವಲಿ.