ಪಂಜಾಬನಲ್ಲಿ ವಿದೇಶಿ ಶಸ್ತ್ರ ಸಂಗ್ರಹಗಳೊಂದಿಗೆ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಇಂತಹವರನ್ನು ಪೋಷಿಸುವ ಬದಲು ಅವರ ವಿರುದ್ಧ ತ್ವರಿತಗತಿ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಅವರನ್ನು ಗಲ್ಲೆಗೇರಿಸಲು ಸರಕಾರ ಪ್ರಯತ್ನಿಸಬೇಕಾಗಿದೆ.

ಅಮೃತಸರ (ಪಂಜಾಬ) – ಪಂಜಾಬ ಪೊಲೀಸರು ಇಲ್ಲಿಯ ಗುರುಮಿತ ಸಿಂಗ್ ಹಾಗೂ ಬಿಕ್ರಮ ಸಿಂಗ್ ಈ ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ವಿದೇಶಿ ಶಸ್ತ್ರಸಂಗ್ರಹ ಸಹಿತ ಬಂಧಿಸಲಾಗಿದೆ. ಇವರಿಬ್ಬರು ಪಂಜಾಬನಲ್ಲಿ ದೊಡ್ಡಪ್ರಮಾಣದಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸುತ್ತಿದ್ದರು. ಅವರಿಗೆ ಪಾಕ್‌ನ ಗುಪ್ತಚರ ಸಂಸ್ಥೆ ಐ.ಎಸ್.ಐ.ನಿಂದ ಸಹಾಯ ಸಿಗುತ್ತಿತ್ತು. ಅಲ್ಲಿಂದಲೇ ಅವರ ತನಕ ಶಸ್ತ್ರ ಸಂಗ್ರಹಗಳನ್ನು ಪೂರೈಸಲಾಗುತ್ತಿತ್ತು ಗುರಮಿತ್ ೩ ವರ್ಷಗಳ ಹಿಂದೆ ಪಾಕಿಸ್ತಾನಕ್ಕೂ ಹೋಗಿ ಬಂದಿದ್ದಾನೆ. ಪೊಲೀಸರು ಇವರಿಬ್ಬರ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿದ್ದಾರೆ.