ಪುರಿ (ಒಡಿಶಾ) – ಕೊರೋನಾದ ಹಾವಳಿಯಿಂದಾಗಿ ಸರ್ವೋಚ್ಚ ನ್ಯಾಯಾಲಯವು ಜೂನ್ ೨೩ ರಿಂದ ಆರಂಭವಾಗಲಿರುವ ಭಗವಾನ ಶ್ರೀ ಜಗನ್ನಾಥನ ರಥಯಾತ್ರೆಗೆ ಅನುಮತಿಯನ್ನು ನಿರಾಕರಿಸಿದೆ. ಇದರ ಬಗ್ಗೆ ಮರುವಿಚಾರಣೆ ಮಾಡುವಂತೆ ರಾಜ್ಯದ ಆಫತಾಬ ಹುಸೈನ್ ಇವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಹುಸೇನನು, ‘ಪುರಿ ನಗರವನ್ನು ಸಂಪೂರ್ಣವಾಗಿ ಬಂದ್ ಮಾಡಿ ಕೇವಲ ದೇವಸ್ಥಾನದ ಅರ್ಚಕರು ಹಾಗೂ ಸೇವಕರ ಮಾಧ್ಯಮದಿಂದ ರಥಯಾತ್ರೆಯನ್ನು ನಡೆಸಲು ಅನುಮತಿಯನ್ನು ನೀಡಬೇಕು, ಇದರಿಂದ ರಥಯಾತ್ರೆಯ ಪ್ರಾಚೀನ ಪರಂಪರೆ ಮುಂದುವರೆಯಲಿ’, ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ೨೧ ಅಥವಾ ೨೨ ಜೂನ್‌ನಲ್ಲಿ ಆಲಿಕೆ ಆಗಬಹುದು.
ಈ ಅರ್ಜಿಯಲ್ಲಿ, ‘ದೇವಸ್ಥಾನದಲ್ಲಿ ೧ ಸಾವಿರದ ೧೭೨ ಸೇವಕರಿದ್ದು ಅವರೆಲ್ಲರ ಕೊರೋನಾದ ಪರೀಕ್ಷಣೆಯನ್ನು ಮಾಡಲಾಗಿದೆ. ರಥವನ್ನು ಎಳೆಯಲು ೭೫೦ ಜನರ ಅಗತ್ಯವಿರುತ್ತದೆ. ಆದ್ದರಿಂದ ಈ ಸೇವಕರು ರಥವನ್ನು ಎಳೆಯಬಹುದು. ಅದಕ್ಕಾಗಿ ಹೊರಗಿನ ಯಾರಿಗೂ ಅನುಮತಿ ನೀಡುವ ಅವಶ್ಯಕತೆ ಇರುವುದಿಲ್ಲ.’ ಎಂದು ಹೇಳಲಾಗಿದೆ.
ಸರ್ವೋಚ್ಚ ನ್ಯಾಯಾಲಯವು ಮರುವಿಚಾರಣೆ ಮಾಡಬೇಕು ! – ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ
ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ವಲಾನಂದ ಸರಸ್ವತಿಯವರೂ “ಸರ್ವೋಚ್ಚ ನ್ಯಾಯಾಲಯವು ತಮ್ಮ ನಿರ್ಣಯದ ಬಗ್ಗೆ ಮರುವಿಚಾರಣೆ ಮಾಡಬೇಕು”, ಎಂದು ಹೇಳಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರೆಸುತ್ತ, “ಜನರ ಆರೋಗ್ಯವನ್ನು ಪರಿಗಣಿಸಿ ಅವರ ಮೇಲೆ ನಿರ್ಬಂಧ ಹೇರುವುದು ಯೋಗ್ಯವಾಗಿದ್ದರೂ, ಅದರಲ್ಲಿಯೂ ಬೇರೆ ಮಾರ್ಗವನ್ನು ನೋಡಬಹುದು, ಇದರಿಂದ ದೇವಸ್ಥಾನದ ಪರಂಪರೆಗೆ ಭಂಗವಾಗುವುದಿಲ್ಲ” ಎಂದು ಹೇಳಿದ್ದಾರೆ.