ಮನೋರೋಗ ತಜ್ಞರೇ, ಡಾಕ್ಟರರೇ (ಅಲೋಪಥಿ) ಮತ್ತು ವೈದ್ಯರೇ (ಆಯುರ್ವೇದಿಕ್), ಮನೋರೋಗಿಗಳಿಗೆ ಸ್ವಯಂ-ಸೂಚನೆಯ ಉಪಚಾರ ಪದ್ಧತಿ ಮತ್ತು ನಾಮಜಪ ಮಾಡಲು ಕಲಿಸಿ ಆಪತ್ಕಾಲ ಎದುರಿಸುವ ಸಿದ್ಧತೆ ಮಾಡಿಸಿಕೊಳ್ಳಿ ಮತ್ತು ಮನೋರೋಗಿಗಳು ಸಹ ಇದಕ್ಕಾಗಿ ಮನಃಪೂರ್ವಕವಾಗಿ ಪ್ರಯತ್ನಿಸಬೇಕು !
ತೀವ್ರ ಸ್ವಭಾವದೋಷ ಮತ್ತು ತೀವ್ರ ಪ್ರಾರಬ್ಧವೇ ಹೆಚ್ಚು ಕಡಿಮೆ ಎಲ್ಲ ಮಧ್ಯಮ ಮತ್ತು ತೀವ್ರ ಮನೋರೋಗಗಳಿಗೆ ಕಾರಣವಾಗಿವೆ. ಆಪತ್ಕಾಲದಲ್ಲಿ ಚಿಂತೆಯನ್ನು ಕಡಿಮೆ ಮಾಡಲು, ನಿರಾಶೆಯನ್ನು ಕಡಿಮೆ ಮಾಡಲು, ನಿದ್ರೆ ಬರಲು ಇತ್ಯಾದಿಗಳಿಗೆ ವಿವಿಧ ರೀತಿಯ ಮಾತ್ರೆಗಳು ಸಿಗುವುದಿಲ್ಲ. ರೋಗಿಗಳ ತೀವ್ರ ಸ್ವಭಾವದೋಷ ಮತ್ತು ತೀವ್ರ ಪ್ರಾರಬ್ಧ ಈ ಎರಡು ಕಾರಣಗಳಿಗಾಗಿ ಮುಂದಿನ ಎರಡು ಚಿಕಿತ್ಸಾ ಪದ್ಧತಿಗಳನ್ನು ಇಂದಿನಿಂದಲೇ ಕಲಿಸಿದರೆ, ಅವರಿಗೆ ಆಪತ್ಕಾಲದಲ್ಲಿ ಮನೋರೋಗವನ್ನು ಸಹಿಸಲು ಸಾಧ್ಯವಾಗುವುದು ಅಥವಾ ಅವರು ಗುಣಮುಖ ಸಹ ಆಗುವರು.
೧. ಸ್ವಭಾವದೋಷ ನಿರ್ಮೂಲನೆಗಾಗಿ ಸ್ವಯಂಸೂಚನಾ ಚಿಕಿತ್ಸಾ ಪದ್ಧತಿ
ಮನೋರೋಗ ತಜ್ಞರು ಇಂದಿನಿಂದಲೇ ಸ್ವಭಾವದೋಷ ನಿರ್ಮೂಲನೆಗಾಗಿ ಸ್ವಯಂಸೂಚನಾ ಚಿಕಿತ್ಸಾ ಪದ್ಧತಿಯನ್ನು ಕಲಿತು ರೋಗಿಗಳಿಗೆ ಕಲಿಸಬೇಕು.
೨. ಪ್ರಾರಬ್ಧ
ಪ್ರಾರಬ್ಧವನ್ನು ಕಡಿಮೆ ಮಾಡುವ ಏಕೈಕ ಮಾರ್ಗವೆಂದರೆ ಸಾಧನೆ. ಪ್ರತಿದಿನ ಕುಲದೇವ ಅಥವಾ ಕುಲದೇವಿಯ ಜಪವನ್ನು ೧ ಗಂಟೆ ಮಾಡುವುದು ಅತ್ಯಂತ ಮಹತ್ವದ ಸಾಧನೆಯಾಗಿದೆ.
೩. ಕೆಟ್ಟ ಶಕ್ತಿಗಳ ತೊಂದರೆ
ಈ ತೊಂದರೆಯನ್ನು ಕಡಿಮೆ ಮಾಡಲು, ಪ್ರತಿದಿನ ೨ ಗಂಟೆ ‘ಶ್ರೀ ಗುರುದೇವ ದತ್ತ ಜಪವನ್ನು ಮಾಡುವುದು.
ಎಷ್ಟು ಏಕಾಗ್ರತೆಯಿಂದ ಮತ್ತು ಭಾವಪೂರ್ಣವಾಗಿ ಮೇಲಿನ ಎರಡೂ ಜಪಗಳಾಗುತ್ತವೆಯೋ, ಅಷ್ಟು ಬೇಗ ಅವುಗಳಿಂದ ಲಾಭವಾಗುತ್ತದೆ. ಸರ್ವಸಾಮಾನ್ಯ ವ್ಯಕ್ತಿಗೂ ಜಪವನ್ನು ಏಕಾಗ್ರತೆಯಿಂದ ಮತ್ತು ಭಾವಪೂರ್ಣವಾಗಿ ಮಾಡಲು ಅಸಾಧ್ಯವಿರುತ್ತದೆ. ಮನೋರೋಗಿಗಳಿಗಂತೂ, ಇದು ತುಂಬಾ ಕಷ್ಟವಿದೆ; ಆದ್ದರಿಂದ ಅವರು ಕೇವಲ ೧-೨ ಗಂಟೆ ಮಾತ್ರ ಮಾಡದೇ ದಿನದಲ್ಲಿ ಹೆಚ್ಚೆಚ್ಚು ಸಮಯ ಜಪ ಮಾಡಬೇಕು, ಅಂದರೆ ಅವರಿಗೆ ೫-೬ ತಿಂಗಳಲ್ಲಿ ವ್ಯತ್ಯಾಸವು ಅರಿವಾಗತೊಡಗುವುದು.
ಡಾಕ್ಟರರು ಮತ್ತು ವೈದ್ಯರಲ್ಲಿ ವಿನಂತಿ !
ಆಪತ್ಕಾಲದಲ್ಲಿ ಕೀವು ಆದ ಭಾಗದಿಂದ ಕೀವು ತೆಗೆಯುವುದು, ಅಲುಗಾಡುವ ಹಲ್ಲನ್ನು ಕೀಳುವುದು ಇತ್ಯಾದಿಗಳನ್ನು ಮಾಡುವ ಶಸ್ತ್ರಚಿಕಿತ್ಸಾತಜ್ಞರು ಅಥವಾ ದಂತವೈದ್ಯರು ಲಭ್ಯರಿರುವುದಿಲ್ಲ. ಇದಕ್ಕಾಗಿ, ನೀವು ಇಂದಿನಿಂದಲೇ ಇಂತಹ ಕೃತಿಗಳನ್ನು ಕಲಿಯಿರಿ ಮತ್ತು ರೋಗಿಗಳ ಮುಂದಿನ ಆಪತ್ಕಾಲದಲ್ಲಿನ ಜೀವನವು ಸುಸಹ್ಯವಾಗಲು ಸಹಾಯ ಮಾಡಿರಿ.
ಈ ಚಿಕಿತ್ಸಾ ಪದ್ಧತಿಯನ್ನು ಕಲಿಯಲು ಇಚ್ಛಿಸುವವರು, ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬೇಕು.
ಸೌ. ಭಾಗ್ಯಶ್ರೀ ಸಾವಂತ – ಸಂಚಾರವಾಣಿ ಸಂಖ್ಯೆ 7058885610
ವಿ-ಅಂಚೆ ವಿಳಾಸ : sanatan.sanstha2025@gmail.com
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧