ಗೌರಿ ಲಂಕೇಶ್ ಪ್ರಕರಣದ ಆರೋಪಿಗಳಿಗೆ ಕೋರೋನಾದಿಂದ ಸುರಕ್ಷೆಯತ್ತ ದುರ್ಲಕ್ಷಿಸಿದ ಪ್ರಕರಣ

ಗೌರಿ ಲಂಕೇಶ ಹತ್ಯೆಯ ಆರೋಪದ ಮೇಲೆ ಮೈಸೂರಿನ ಜೈಲಿನಲ್ಲಿ ಇರಿಸಲಾದ ವಿಚಾರಣಾಧೀನ ಕೈದಿಗಳ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ. ಅಮೃತೇಶ ಎನ್. ಪಿ. ಮತ್ತು ವಕೀಲೆ ಸೌ. ದಿವ್ಯಾ ಇವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದರು.

ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ (Shraddh Rituals) ಆಪ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನೂತನ ಸ್ವರೂಪದ ‘ಅಂಡ್ರಾಯ್ಡ್ ಆಪ್ನ ಲೋಕಾರ್ಪಣೆ

ಸನಾತನ ಸಂಸ್ಥೆಯ ನೂತನ ‘ಶ್ರಾದ್ಧ ರಿಚ್ಯುವಲ್ಸ್ (Shraddh Rituals) ಆಪ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನೂತನರೂಪದ ‘ಅಂಡ್ರೈಡ್ ಆಪನ್ನು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಇವರ ಹಸ್ತದಿಂದ ಸೆಪ್ಟೆಂಬರ್ ೨ ರಂದು ಲೋಕಾರ್ಪಣೆಯನ್ನು ಮಾಡಲಾಯಿತು. ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ ಈ ‘ಆಪ್ ಶ್ರಾದ್ಧ ವಿಧಿಗೆ ಸಂಬಂಧಿಸಿದ್ದು ಇದು ಕನ್ನಡ, ಮರಾಠಿ, ಹಿಂದಿ ಹಾಗೂ ಆಂಗ್ಲ ಈ ೪ ಭಾಷೆಗಳಲ್ಲಿ ಲಭ್ಯವಿದೆ.

ಇಸ್ಲಾಮಿ ಜಿಹಾದಿ ಭಯೋತ್ಪಾದಕರಿಂದ ‘ಹಿಂದೂ ಹೆಲ್ಪಲೈನ್’ನ ನ್ಯಾಯವಾದಿ ಪ್ರದೀಶ ವಿಶ್ವನಾಥ ಹಾಗೂ ಕೇರಳದ ಭಾಜಪ ಅಧ್ಯಕ್ಷ ಕೆ. ಸುರೇಂದ್ರನ್ ಇವರಿಗೆ ಅಪಾಯ

ಸಯ್ಯದ ಮಹಮ್ಮದ ಸಲಾಹುದ್ದೀನ್ ಈ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (‘ಪಿ.ಎಫ್.ಐ.’ನ) ಕಾರ್ಯಕರ್ತನನ್ನು ಸಪ್ಟೆಂಬರ್ ೮ ರಂದು ಕೇರಳದ ಕಣ್ಣೂರ ಜಿಲ್ಲೆಯ ಕೊಥೂಪಾರಂಬು ಹತ್ತಿರದ ಕನ್ನವಮ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ಸನಾತನ ಸಂಸ್ಥೆಯ ಫೇಸ್‌ಬುಕ್ ಪೇಜ್ ಬಂದ್ ಹಿನ್ನೆಲೆ !

ಕೆಲವು ದಿನಗಳ ಹಿಂದೆ ನಿಯಮಿತವಾಗಿ ಧರ್ಮಶಾಸ್ತ್ರ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿದ್ದ ಸನಾತನ ಸಂಸ್ಥೆಯ ೫ ‘ಫೇಸ್‌ಬುಕ್ ಪುಟ’ಗಳನ್ನು ‘ಫೇಸ್‌ಬುಕ್’ ಏಕಾಏಕಿ ಬಂದ್ ಮಾಡಿತ್ತು. ಬೆಂಗಳೂರಿನಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ‘ಸ್ಟ್ಯಾಂಡಿಂಗ್ ಕಮಿಟಿ’ಯ ಸದಸ್ಯರು ಮತ್ತು ಸಂಸದರಾದ ತೇಜಸ್ವಿ ಸೂರ್ಯ ಇವರಿಗೆ ‘ಹೀಗೆ ಏಕಾಏಕಿ ಮಾಡಿದ ಬಂದ್ ಹಿಂಪಡೆಯಲು ಪ್ರಯತ್ನಿಸಬೇಕು’ ಎಂದು ಮನವಿಯನ್ನು ನೀಡಲಾಯಿತು.

ಮಹಮ್ಮದ ಅಲಿ ಜಿನ್ನಾರವರು ಭಾರತದ ವಿಭಜನೆಯನ್ನು ಬಯಸಿದ್ದರು ! – ಪಾಕಿಸ್ತಾನಿ ಮೂಲದ ಲೇಖಕನ ಹೇಳಿಕೆ

ಜಿನ್ನಾರವರ ಮೊಂಡುತನದ ಕಾರಣದಿಂದಲೇ ಭಾರತದ ವಿಭಜನೆ ಆಯಿತು, ಎಂದು ಪಾಕಿಸ್ತಾನ ಮೂಲದ ರಾಜ್ಯಶಾಸ್ತ್ರದ ಸಂಶೋಧಕ ಇಶ್ತಿಯಾಕ್ ಅಹಮದ ಇವರು ಹೇಳಿದ್ದಾರೆ. ಇಶ್ತಿಯಾಕ್ ಅಹಮದ ಇವರು ತಮ್ಮ ‘ಜಿನ್ನಾ : ಹಿಸ್ ಸಕ್ಸೆಸ್, ಫೆಲ್ಯೂರ್ ಆಂಡ್ ರೋಲ್ ಇನ್ ಹಿಸ್ಟರಿ’ ಈ ಪುಸ್ತಕದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ದೋಷಾರೋಪಟ್ಟಿಯಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಆಪ್‌ನ ಮಾಜಿ ನಾಯಕ ಯೋಗೇಂದ್ರ ಯಾದವ ಸಹಿತ ಅನೇಕರ ಹೆಸರುಗಳ ಉಲ್ಲೇಖ

ಪೊಲೀಸರು ಫೆಬ್ರವರಿ ೨೦೨೦ ರ ದೆಹಲಿ ಗಲಭೆಯ ಪ್ರಕರಣದಲ್ಲಿ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಆಪ್‌ನ ಮಾಜಿ ಹಾಗೂ ಸ್ವರಾಜ್ಯ ಅಭಿಯಾನದ ಇಂದಿನ ಮುಖಂಡ ಯೊಗೇಂದ್ರ ಯಾದವ ಮುಂತಾದವರು ಇದ್ದಾರೆ.

ಗೌತಮ ಬುದ್ಧ ನಗರ(ಉತ್ತರಪ್ರದೇಶ)ದ ದೇವಸ್ಥಾನದಲ್ಲಿ ಧ್ವನಿವರ್ಧಕ ಹಚ್ಚಿದ್ದರೆಂದು ಹಿಂದೂ ವ್ಯಕ್ತಿಯ ಮೇಲೆ ಹಲ್ಲೆಗೈದ ಮತಾಂಧರು

ದೇವಸ್ಥಾನದಲ್ಲಿ ಧ್ವನಿವರ್ಧಕ ಹಾಕಿದ ಕಾರಣವನ್ನು ನೀಡುತ್ತಾ ಮತಾಂಧರು ಸ್ವರಾಜ ಸಿಂಹ ಎಂಬ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರು. ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಅಚ್ಛೆಜಾ ಎಂಬ ಗ್ರಾಮದಲ್ಲಿ ಈ ಘಟನೆ ಇತ್ತೀಚೆಗೆ ಸಂಭವಿಸಿದೆ. ಈ ಪ್ರಕರಣದ ಬಗ್ಗೆ ಸ್ವರಾಜ ಸಿಂಹ ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಫಝಲ್, ಶರಾಫ್ ಹಾಗೂ ಗುಲಜಾರನನ್ನು ಬಂಧಿಸಿದ್ದಾರೆ.

‘ಸೂಪರ ಶಕ್ತಿ ಮೆಟಾಲಿಕ್ಸ್’ ಸಂಸ್ಥೆಯಿಂದ ದೇವತೆಗಳ ಅವಮಾನವನ್ನು ಮಾಡುವ ಜಾಹೀರಾತು ಜಾಲತಾಣದಲ್ಲಿ ಪ್ರಸಾರ

‘ಸೂಪರ್ ಶಕ್ತಿ ಮೆಟಾಲಿಕ್ಸ್’ ಈ ಸಂಸ್ಥೆಯು ಶ್ರೀ ಇಂದ್ರದೇವ, ಶ್ರೀ ವಿಶ್ವಕರ್ಮ ದೇವ ಹಾಗೂ ಶ್ರೀ ನಾರದಮುನಿಯರ ವಿಡಂಬನೆಯನ್ನು ಮಾಡುವ ಜಾಹೀರಾತು ಈಗ ಜಾಲತಾಣದಲ್ಲಿ ಪ್ರಸಾರ ಮಾಡಲಾಗುತ್ತಿದೆ. ‘ಸೂಪರ ಶಕ್ತಿ ಮೆಟಾಲಿಕ್ಸ್’ ಇದು ಗೃಹನಿರ್ಮಾಣಕ್ಕಾಗಿ ಬೇಕಾಗಿರುವ ‘ಟಿ.ಎಮ್.ಟಿ. ಬಾರ‍್ಸ್’ಗಳನ್ನು ಉತ್ಪಾದನೆ ಹಾಗೂ ಮಾರಾಟ ಮಾಡುವ ಸಂಸ್ಥೆಯಾಗಿದೆ.

ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿದ್ದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾದ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿರುವುದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾಗಳ ಮುಖಂಡರು ಹಾಗೂ ಅನೇಕ ಸಾವಿರಾರು ಕಾರ್ಯಕರ್ತರು ಸಪ್ಟೆಂಬರ್ ೧೦ ರಂದು ಸಂಪೂರ್ಣ ಆಂಧ್ರಪ್ರದೇಶದಲ್ಲಿ ೧೧ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದರು.

‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನ ಅವಹೇಳನೆ ನಡೆಯುತ್ತಲೇ ಇದೆ !

ಕರ್ಪೂರದ ಉತ್ಪಾದನೆ ಹಾಗೂ ಮಾರಾಟ ಮಾಡುವ ರಾಯಗಡ ಜಿಲ್ಲೆಯ ಕುಂಭಿವಲಿಯಲ್ಲಿನ ‘ಮಂಗಲಮ್ ಆರಗ್ಯಾನಿಕ್ಸ್ ಲಿಮಿಟೆಡ್’ ಈ ಸಂಸ್ಥೆಯು ತನ್ನ ‘ಮಂಗಲಮ್ ಕರ್ಪೂರ’ದ ಉತ್ಪಾದನೆಯ ಜಾಹೀರಾತಿನಲ್ಲಿ ಪ್ರಭು ಶ್ರೀರಾಮನು ಸೆಲ್ಫೀ (ಸಂಚಾರವಾಣಿಯಲ್ಲಿ ಸ್ವಂತದ ಫೋಟೊವನ್ನು ಸ್ವತಃ ತೆಗೆಯುವುದು) ತೆಗೆದುಕೊಳ್ಳುತ್ತಿರುವಂತೆ ತೋರಿಸಿ ಪ್ರಭು ಶ್ರೀರಾಮನ ಘೋರ ಅವಹೇಳನೆಯು ಇಂದಿಗೂ ಮುಂದುವರೆದಿದೆ.