ಮಲಪ್ಪುರಂ (ಕೇರಳ) ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳ ಸಾಗಾಣಿಕೆಯಲ್ಲಿ ಸಿಕ್ಕಿರುವ ಹೆಚ್ಚಿನ ಆರೋಪಿಗಳು ಮುಸಲ್ಮಾನರು ! – ಕೆ.ಟಿ . ಜಲಿಲ್

  • ಕೇರಳದಲ್ಲಿನ ಆಡಳಿತಾರೂಢ ಪಕ್ಷದಲ್ಲಿನ ಶಾಸಕ ಕೆ.ಟಿ . ಜಲಿಲ್ ಇವರ ಹೇಳಿಕೆ

  • ಮುಸಲ್ಮಾನ ಧರ್ಮ ಗುರುಗಳು ಇಂತಹ ಅಪರಾಧಿ ಕೃತ್ಯಗಳಿಂದ ದೂರ ಉಳಿಯುವುದಕ್ಕಾಗಿ ಫತ್ವಾ ಹೊರಡಿಸಿ ಸಲಹೆ ನೀಡುವಂತೆ ಕರೆ ನೀಡಿದರು

ತಿರುವನಂತಪುರಂ (ಕೇರಳ) – ಕ್ರೈಸ್ತರಿಂದ ನಡೆಯುತ್ತಿರುವ ಕೆಲವು ತಪ್ಪು ಕೃತಿಗಳ ವಿರುದ್ಧ ಕ್ರೈಸ್ತರು ಮುಂದೆ ಬರಬೇಕು ಮತ್ತು ಮುಸಲ್ಮಾನರಿಂದ ನಡೆಯುವ ಅಪರಾಧಕ್ಕಾಗಿ ಮುಸಲ್ಮಾನ ಜನಾಂಗದವರು ಗಮನ ನೀಡಬೇಕು. ಹಿಂದುಗಳ ಅವರ ಜನಾಂಗದಲ್ಲಿನ ತಪ್ಪು ಪದ್ದತಿಯ ಕಡೆಗೆ ಗಮನ ನೀಡಬೇಕು. ಕಾರೀಪುರ್ (ಮಲಪ್ಪುರಂ) ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಕ್ಕಪಕ್ಕ ಚಿನ್ನದ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಸಿಕ್ಕಿರುವ ಬಹುತೇಕ ಜನರು ಮುಸಲ್ಮಾನ ಜನಾಂಗದವರಾಗಿದ್ದಾರೆ. ಮುಸಲ್ಮಾನ ಧರ್ಮ ಗುರುಗಳು ಜನರಿಗೆ ಚಿನ್ನದ ಕಳ್ಳ ಸಾಗಾಣಿಕೆ ಮತ್ತು ಹವಾಲ (ಹಣದ ಹಸ್ತ ಅಂತರಕ್ಕಾಗಿ ಉಪಯೋಗಿಸುವ ಪ್ರಣಾಳಿ) ವ್ಯವಹಾರದಿಂದ ದೂರ ಇರಲು ಸಲಹೆ ನೀಡುವುದಕ್ಕಾಗಿ ಫತ್ವಾ ಹೊರಡಿಸಬೇಕು, ಎಂದು ಆಡಳಿತಾರೂಢ ಕಮ್ಯುನಿಸ್ಟ್ ಪ್ರಜಾಪ್ರಭುತ್ವ ಮೈತ್ರಿಕೂಟದ ಶಾಸಕ ಕೆ.ಟಿ. ಜಲೀಲ ಇವರು ಹೇಳಿಕೆ ನೀಡಿದರು. ಇದರಿಂದ ವಿವಾದ ನಿರ್ಮಾಣವಾಯಿತು.

೧. ಜಲೀಲ ಇವರು, ಕೋಳಿಕೋಡ ವಿಮಾನ ನಿಲ್ದಾಣದಲ್ಲಿ ಸಿಕ್ಕಿರುವ ಕಳ್ಳಸಾಗಾಣಿಕೆದಾರರ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದರು. ಇದರಲ್ಲಿ ಬಹಳಷ್ಟು ಕಳ್ಳ ಸಾಗಾಣಿಕೆದಾರರು ಮುಸಲ್ಮಾನರಾಗಿದ್ದಾರೆ. ಜಲೀಲ ಇವರು ಓರ್ವ ಮೌಲ್ವಿಯ ಮೇಲೆ (ಇಸ್ಲಾಂನ ಧಾರ್ಮಿಕ ನಾಯಕನ ಮೇಲೆ) ಚಿನ್ನದ ಕಳ್ಳ ಸಾಗಾಣಿಕೆಯ ಆರೋಪ ಮಾಡುವಾಗ, ಹಜ ಯಾತ್ರೆಯಿಂದ ಹಿಂತಿರುಗಿ ಬರುವಾಗ ಅವರು ಕುರಾನಿನಲ್ಲಿ ಬಚ್ಚಿಟ್ಟು ಚಿನ್ನವನ್ನು ತಂದಿದ್ದನು; ಆದರೆ ಅವನ ಹೆಸರು ಬಹಿರಂಗಪಡಿಸಲಿಲ್ಲ.

೨. ಜಲೀಲ್ ಮೇಲೆ ಇಂಡಿಯನ್ ಮುಸ್ಲಿಂ ನ ಹಿರಿಯ ನಾಯಕ ಪಿ.ಎಮ್.ಎ. ಸಲಾಂ ಇವರು ವಾಗ್ದಾಳಿ ನಡೆಸಿ, ಜಲೀಲ್ ಹೇಳಿರುವುದು, ಮುಸಲ್ಮಾನ ಜನಾಂಗದಲ್ಲಿನ ಜನರು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ, ಅವರಿಗೆ ಈ ಮಾಹಿತಿ ಎಲ್ಲಿಂದ ದೊರೆತಿದೆ ? ಅವರು ಇದು ಯಾವ ಆಧಾರದಲ್ಲಿ ಮಾತನಾಡುತ್ತಿದ್ದಾರೆ ? ಈ ಹೇಳಿಕೆಯ ಕುರಿತು ಜಲೀಲ್ ಇವರು ತಕ್ಷಣ ಕ್ಷಮೆ ಕೇಳಬೇಕು ಎಂದರು.

೩. ಶಾಸಕ ಅನ್ವರ್ ಇವರು ಕೂಡ ಜಲೀಲ್ ಇವರ ಹೇಳಿಕೆಯ ಕುರಿತು ಟೀಕೆಸಿದರು ಮತ್ತು ಅವರು, ಜಲೀಲ್ ಇವರು ಹೀಗೆ ಹೇಳಿಕೆ ನೀಡಿದರೆ, ಆಗ ಅದು ಅವರ ಸಾರ್ವಜನಿಕ ಜೀವನದಲ್ಲಿನ ಎಲ್ಲಕ್ಕಿಂತ ಕೆಟ್ಟ ವಿಷಯವಾಗಿದೆ ಎಂದು ಹೇಳಿದರು.

೪. ಕೇರಳದಲ್ಲಿ ಚಿನ್ನದ ಕಳ್ಳ ಸಾಗಾಣಿಕೆಯ ಘಟನೆ ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತದೆ. ವಿಶೇಷವಾಗಿ ಮಲಪ್ಪುರಂ ಜಿಲ್ಲೆಯಲ್ಲಿನ ಕೋಳಿಕೋಡ ವಿಮಾನ ನಿಲ್ದಾಣದ ಪರಿಸರದಲ್ಲಿ ಈ ಘಟನೆಗಳು ಘಟಿಸುತ್ತಿವೆ. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಪೀನರಾಯಿ ವಿಜಯನ್ ಇವರು ಒಂದು ಪತ್ರಕರ್ತರ ಸಭೆಯಲ್ಲಿ ಈ ಹಿಂದೆ, ಮಲಪ್ಪುರಂ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಹವಾಲಾದ ಮಾಧ್ಯಮದಿಂದ ಹಣ ಹರಿದು ಬರುತ್ತಿರವ ಅಂಕಿ ಸಂಖ್ಯೆಯ ಮೂಲಕ ಕಂಡು ಬರುತ್ತಿದೆ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಓರ್ವ ಮುಸಲ್ಮಾನ ಶಾಸಕ ನೆರವಾಗಿ ಈ ರೀತಿಯ ಹೇಳಿಕೆ ನೀಡುತ್ತಾರೆ, ಇದು ಆಶ್ಚರ್ಯವೇ ಆಗಿದೆ ! ದೇಶದಲ್ಲಿ ಮುಸಲ್ಮಾನ ಅಲ್ಪಸಂಖ್ಯಾತವಾಗಿದ್ದರು, ಅಪರಾಧದಲ್ಲಿ ಮಾತ್ರ ಅವರು ಬಹುಸಂಖ್ಯಾತರೇ ಆಗಿರುವ ಚಿತ್ರ ಕಂಡು ಬರುತ್ತದೆ, ಇದನ್ನು ಅವರು ಈ ರೀತಿಯಾಗಿ ಹೇಳಿದ್ದಾರೆ !

ನಾನು ಇಸ್ಲಾಂನ ವಿರೋಧದಲ್ಲಿ ಮಾತನಾಡುತ್ತಿಲ್ಲ ! – ಜಲೀಲ್ ಇವರಿಂದ ಸ್ಪಷ್ಟನೆ

ಜಲೀಲ್ ಇವರ ಹೇಳಿಕೆಯಿಂದ ನಿರ್ಮಾಣವಾಗಿರುವ ವಿವಾದದ ಕುರಿತು ಸ್ಪಷ್ಟನೆ ನೀಡಿದರು. ಜಲೀಲ್ ಇವರು, ನಾನು ಇಸ್ಲಾಂನ ವಿರುದ್ಧ ಏನನ್ನು ಕೂಡ ಮಾತನಾಡಿಲ್ಲ, ಚಿನ್ನದ ಕಳ್ಳ ಸಾಗಾಣಿಕೆ ಮತ್ತು ಹವಾಲಾ ವ್ಯವಹಾರ ಇದು ಧರ್ಮದ ವಿರುದ್ಧವಾಗಿರುವುದರ ಅರಿವು ಧಾರ್ಮಿಕ ನಾಯಕರು ಜನರಲ್ಲಿ ಮುಡಿಸಬೇಕು, ಇದೇ ಇದರ ಉದ್ದೇಶವಾಗಿತ್ತು. ಸಿಕ್ಕಿರುವ ಬಹಳಷ್ಟು ಜನರು ಮುಸಲ್ಮಾನರಾಗಿದ್ದಾರೆ. ಇದು ಸಂಪೂರ್ಣ ಜನಾಂಗದ ಮೇಲಿನ ಆರೋಪವಲ್ಲ. ಈ ಕೃತ್ಯಗಳು ಧರ್ಮದ ವಿರುದ್ಧವಾಗಿವೆ ಎಂಬುದು ಮುಸಲ್ಮಾನ ಜನಾಂಗದವರು ತಿಳಿದುಕೊಳ್ಳಬೇಕು. ಜನಜಾಗೃತಿಗಾಗಿ ಧರ್ಮ ಗುರುಗಳು ಫತ್ವಾ ಹೊರಡಿಸಬೇಕು, ಎಂದು ನಾನು ಹೇಳಿರುವೆ. ಈ ಆಗ್ರಹ ಇಸ್ಲಾಂ ದ್ವೇಷಿ ಅಲ್ಲ ಎಂದು ಹೇಳಿದರು.

ಭಾಜಪ ಮತ್ತು ಕಾಂಗ್ರೆಸ್ ನಿಂದ ಜಲೀಲ್ ಹೇಳಿಕೆಗೆ ವಿರೋಧ

ಭಾಜಪದ ನಾಯಕ ವಿ. ಮುರಳಿಧರನ್ ಇವರು, ದೇಶದಲ್ಲಿ ಅಪರಾಧದ ವಿರುದ್ಧ ಕಾನೂನು ಇದೆ ಮತ್ತು ಈ ಕಾನೂನಿಗೆ ಆಧಾರ ಸಂವಿಧಾನವಿದೆ. ಜಲೀಲ್ ಇವರ ಹೇಳಿಕೆ ಸಂವಿಧಾನದ ಮೂಲ ಭಾವನೆಗೆ ವಿರುದ್ಧವಾಗಿದ್ದು ಅವರು ಈ ಪ್ರಕರಣದಲ್ಲಿ ಯೋಚನೆ ಮಾಡಿ ಮಾತನಾಡಬೇಕು ಎಂದು ಹೇಳಿದರು. ಕಾಂಗ್ರೆಸ್ ನಾಯಕ ಶಫಿ ಪಾರಂಬಿಲ್ ಇವರು, ಭಾರತ ಪ್ರಜಾಪ್ರಭುತ್ವ ದೇಶವಾಗಿದೆ ಮತ್ತು ಇಲ್ಲಿ ಯಾವುದೇ ಅಕ್ರಮ ಕೃತಿಗಳು ಫತ್ವಾದ ಮೂಲಕ ಅಲ್ಲ, ಕಾನೂನಿನ ಪ್ರಕಾರ ಪರಿಹರಿಸಬೇಕು. ಜಲೀಲೆ ಇವರ ಹೇಳಿಕೆಯಿಂದ ಸಮಾಜದಲ್ಲಿ ತಪ್ಪಾದ ಸಂದೇಶ ಹೋಗುತ್ತಿದೆ ಅದು ದೇಶದ ಪ್ರಜಾಪ್ರಭುತ್ವ ರಚನೆಯ ವಿರುದ್ಧವಾಗಿದೆ ಎಂದು ಹೇಳಿದರು.

ಜಲೀಲ್ ಇವರ ವಿಚಾರಣೆ ಕೂಡ ನಡೆದಿತ್ತು.

೨೦೨೦ ರಲ್ಲಿ ಶಾಸಕ ಜಲೀಲ್ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿರುವಾಗ ಸಯುಕ್ತ ಅರಬ್ ಅಮಿರಾತದ ವಾಣಿಜ್ಯ ರಾಯಭಾರ ಕಚೇರಿಯಿಂದ ಕಳ್ಳ ಸಾಗಾಣಿಕೆ ಮಾಡಿರುವ ಆರೋಪ ಇರುವ ಒಂದು ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆಯಿಂದ ಇವರ ವಿಚಾರಣೆ ನಡೆದಿತ್ತು. ಅವರ ಮೇಲೆ ಚಿನ್ನ ಕಳ್ಳ ಸಾಗಾಣಿಕೆಯ ಆರೋಪ ಕೂಡ ದಾಖಲಿಸಲಾಗಿತ್ತು. ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ. ಇಂದ) ಅವರ ವಿಚಾರಣೆಗಾಗಿ ಕರೆಸಲಾಗಿತ್ತು.