ನವ ದೆಹಲಿ – ಕಾಂಗ್ರೆಸ್ಸಿಗೆ ಸಾಮಾಜಿಕ ನ್ಯಾಯದ ಕಾಳಜಿಯಿದ್ದರೆ, ಅವರು ಮುಸಲ್ಮಾನರ ಜಾತಿಯ ಉಲ್ಲೇಖವನ್ನು ಏಕೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ಸನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರು ಕಾಂಗ್ರೆಸ್ ಮೇಲೆ ಹಿಂದೂಗಳ ಜಾತಿಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಮರಳಿ ಬರಲು ಹಿಂದೂ ಸಮುದಾಯದಲ್ಲಿ ವಿಷವನ್ನು ಬಿತ್ತುತ್ತಿದ್ದಾರೆಂದು ಆರೋಪಿಸಿದರು. ಮಹಾರಾಷ್ಟ್ರದಲ್ಲಿ 76 ಅಬ್ಜ ರೂಪಾಯಿಗಳ ವಿವಿಧ ಯೋಜನೆಗಳ ಅಡಿಪಾಯ ಸಮಾರಂಭಕ್ಕೆ ‘ವೀಡಿಯೋ ಕಾನ್ಫರೆನ್ಸಿಂಗ್’ ಮೂಲಕ ಸಂಬೋಧಿಸಿ ಮಾತನಾಡಿದ ಮೋದಿಯವರು ಕಾಂಗ್ರೆಸ್ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಮಾತನ್ನು ಮುಂದುವರಿಸಿ,
1. ಕಾಂಗ್ರೆಸ್ ಹಿಂದೂಗಳ ಒಂದು ಜಾತಿಯನ್ನು ಇನ್ನೊಂದು ಜಾತಿಯ ನಡುವೆ ವೈಷಮ್ಯ ಬಿತ್ತಿ, ಗೆಲ್ಲಲು ಸಂಚು ರೂಪಿಸಿದೆ. ಕಾಂಗ್ರೆಸ್‌ನ ಹಿಂದೂ ದ್ವೇಷಿ ಕುತಂತ್ರವನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಪಾಠ ಕಲಿಸುತ್ತಿದ್ದಾರೆ.
2. ಕಾಂಗ್ರೆಸ್ ಯಾವಾಗಲೂ ‘ಒಡೆದು ಆಳುವ’ (ಒಡೆಯಿರಿ ಮತ್ತು ಅಧಿಕಾರ ಪಡೆಯಿರಿ) ಸೂತ್ರವನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಈಗಲೂ ದೇಶವನ್ನು ವಿಭಜಿಸಲು ಹೊಸ ಹೊಸ ಕಥೆಗಳನ್ನು ಸೃಷ್ಟಿಸುತ್ತಿದೆ.
3. ಮುಸಲ್ಮಾನರ ಜಾತಿಯ ಪ್ರಶ್ನೆ ಬಂದ ಕೂಡಲೇ, ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುತ್ತಾರೆ; ಆದರೆ ಯಾವಾಗ ಹಿಂದೂ ಸಮಾಜದ ಪ್ರಶ್ನೆ ಬರುತ್ತದೆಯೋ, ಆಗ ಕಾಂಗ್ರೆಸ್ ಜಾತಿಯ ಆಧಾರದ ಮೇಲೆ ಚರ್ಚೆಯನ್ನು ಪ್ರಾರಂಭಿಸುತ್ತದೆ.
4. ಹಿಂದೂಗಳು ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಹೋರಾಡುವಂತೆ ಮಾಡುವುದು ಕಾಂಗ್ರೆಸ್ಸಿನ ನೀತಿಯಾಗಿದೆ. ಎಷ್ಟು ಹಿಂದೂಗಳು ವಿಭಜಿಸಲ್ಪಡುತ್ತಾರೆಯೋ, ಅಷ್ಟು ಲಾಭವಾಗುತ್ತದೆ. ಇದು ಕಾಂಗ್ರೆಸ್ಸಿಗೆ ತಿಳಿದಿದೆ ಎಂದು ಹೇಳಿದರು.