ಗಾಝಿಯಾಬಾದ (ಉತ್ತರ ಪ್ರದೇಶ) – ಇಲ್ಲಿನ ಶ್ರೀ ಡಾಸನಾದೇವಿ ದೇವಸ್ಥಾನದ ಮಹಂತ ಮತ್ತು ಜುನಾ ಅಖಾಡಾದ ಮಹಾಮಂಡಳೇಶ್ವರ ಯತಿ ನರಸಿಂಹಾನಂದರ ಶಿಷ್ಯ ಅನಿಲ ಯಾದವ ಅಲಿಯಾಸ್ ಛೋಟಾ ನರಸಿಂಹಾನಂದ ಅವರನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಮರು ಯತಿ ನರಸಿಂಹಾನಂದರ ಪುತ್ಥಳಿ ದಹಿಸಿದ್ದರಿಂದ ಅನಿಲ ಯಾದವ ಇವರು ಪುಸಲ್ಮಾನರ ಪೂಜಾ ಸ್ಥಳವಾದ ಮಹಮ್ಮದ್ ಅಲಿ ಮತ್ತು ಅಬು ಬಕರ್ ಅವರ ಪ್ರತಿಕೃತಿ ದಹಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಅನಿಲ ಯಾದವ ಎಚ್ಚರಿಕೆ ನೀಡಿದ ಬಳಿಕ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಅಕ್ಟೋಬರ್ 10 ರಂದು ತಡರಾತ್ರಿ ಪೊಲೀಸರು ಅನಿಲ ಯಾದವ ಅವರನ್ನು ಶಾಂತಿ ಭಂಗ ಕಲಂ ಅಡಿಯಲ್ಲಿ ಬಂಧಿಸಿದರು. ಮಹಂತ ಯತಿ ನರಸಿಂಹಾನಂದರನ್ನು ಪ್ರವಾದಿ ಮಹಮ್ಮದ ಪೈಗಂಬರ ಇವರನ್ನು ತಥಾಕಥಿತ ಅವಮಾನಿಸಿದ್ದಾರೆಂದು ಆರೋಪಿಸಿ ಪೋಲೀಸರು ವಶಕ್ಕೆ ಪಡೆದಿದ್ದರು; ಆದರೆ ತದನಂತರ ಯತಿ ನರಸಿಂಹಾನಂದರು ಎಲ್ಲಿದ್ದಾರೆ ಎಂಬ ಬಗ್ಗೆ ಪೊಲೀಸರಿಂದ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿಲ್ಲ.