ಉತ್ತರ ಪ್ರದೇಶ ಪೊಲೀಸರ ಶ್ಲಾಘನೀಯ ನಿರ್ಧಾರ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಮಾಂಸ ಸೇವಿಸುವ ಪೊಲೀಸರನ್ನು ಸೇವೆಗೆ ನೇಮಿಸುವುದಿಲ್ಲ ಎಂದು ಪೊಲೀಸ್ ಪಡೆ ನಿರ್ಧರಿಸಿದೆ. ಮಹಾಕುಂಭದ ವೇಳೆ ಪ್ರಯಾಗ್‌ರಾಜ್‌ಗೆ ಪೊಲೀಸ್ ಬೆಂಗಾವಲು ಪಡೆಯನ್ನು ಕಳುಹಿಸುವಾಗ ವಿಶೇಷ ಗಮನ ಹರಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಂಜಯ ಸಿಂಘಾರ್ ತಿಳಿಸಿದ್ದಾರೆ. ಇದರೊಂದಿಗೆ ‘ಪೊಲೀಸರು ಉತ್ತಮ ನಡತೆ, ನಿಷ್ಠೆಯಿಂದ ನಡೆದುಕೊಳ್ಳಬೇಕು, ಉತ್ತಮ ಘನತೆ ಹೊಂದಿರಬೇಕು’ ಎಂಬ ಷರತ್ತು ಕೂಡ ಕಚೇರಿ ಹಾಕಿದೆ. (ಅಂತಹ ಷರತ್ತನ್ನು ಏಕೆ ಸೇರಿಸಬೇಕು? ಪೊಲೀಸರು ಏಕೆ ಈ ರೀತಿ ವರ್ತಿಸುವುದಿಲ್ಲ? – ಸಂಪಾದಕರು) ಮಹಾಕುಂಭ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಮಹಾನಿರ್ದೇಶನಾಲಯವು 15 ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹೊರಡಿಸಿದ ಮಾರ್ಗಸೂಚಿಗಳು
1. ಪೊಲೀಸ್ ಪೇದೆಯ ವಯಸ್ಸು ಸಾಮಾನ್ಯವಾಗಿ 40 ವರ್ಷವಾಗಿರಬೇಕು. ಅಲ್ಲದೆ ಹೆಡ್ ಕಾನ್ ಸ್ಟೇಬಲ್ ವಯಸ್ಸು 50 ವರ್ಷ ಮೀರಿರಬಾರದು ಮತ್ತು ಸಬ್ ಇನ್ಸ್ ಪೆಕ್ಟರ್ ಮತ್ತು ಇನ್ಸ್ ಪೆಕ್ಟರ್ ಗಳ ವಯಸ್ಸು 55 ವರ್ಷ ಮೀರಿರಬಾರದು.
2. ಪ್ರಯಾಗರಾಜ್ ಮೂಲದ ಅಂತಹ ಯಾವುದೇ ಪೊಲೀಸ್ ಅಧಿಕಾರಿಯನ್ನು ಮಹಾಕುಂಭದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುವುದಿಲ್ಲ. ಅಲ್ಲದೆ, ಅವನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ಆರೋಗ್ಯವಂತನಾಗಿರಬೇಕು, ಜಾಗರೂಕರಾಗಿರಬೇಕು ಮತ್ತು ಉತ್ತಮ ನಡವಳಿಕೆಯನ್ನು ಹೊಂದಿರಬೇಕು. (ಹೀಗೆಲ್ಲದವರನ್ನು ಪೋಲೀಸ್ ಪಡೆಗಳಿಂದ ಏಕೆ ತೆಗೆದುಹಾಕುವುದಿಲ್ಲ? – ಸಂಪಾದಕರು)