ಮಹಮ್ಮದ ಅಲಿ ಜಿನ್ನಾರವರು ಭಾರತದ ವಿಭಜನೆಯನ್ನು ಬಯಸಿದ್ದರು ! – ಪಾಕಿಸ್ತಾನಿ ಮೂಲದ ಲೇಖಕನ ಹೇಳಿಕೆ

ಜಿನ್ನಾನೇ ಭಾರತದ ವಿಭಜನೆಯನ್ನು ಬಯಸಿದ್ದರೇ, ಗಾಂಧಿ, ನೆಹರು ಹಾಗೂ ಕಾಂಗ್ರೇಸ್ ಇವರು ಅದನ್ನು ವಿರೋಧಿಸುತ್ತಾ ಏಕೆ ನಿರಾಕರಿಸಲಿಲ್ಲ ? ಇದಕ್ಕೆ ಉತ್ತರಿಸುತ್ತಿಲ್ಲ ?

ಇಸ್ಲಾಮಾಬಾದ್(ಪಾಕಿಸ್ತಾನ) – ಜಿನ್ನಾರವರ ಮೊಂಡುತನದ ಕಾರಣದಿಂದಲೇ ಭಾರತದ ವಿಭಜನೆ ಆಯಿತು, ಎಂದು ಪಾಕಿಸ್ತಾನ ಮೂಲದ ರಾಜ್ಯಶಾಸ್ತ್ರದ ಸಂಶೋಧಕ ಇಶ್ತಿಯಾಕ್ ಅಹಮದ ಇವರು ಹೇಳಿದ್ದಾರೆ. ಇಶ್ತಿಯಾಕ್ ಅಹಮದ ಇವರು ತಮ್ಮ ‘ಜಿನ್ನಾ : ಹಿಸ್ ಸಕ್ಸೆಸ್, ಫೆಲ್ಯೂರ್ ಆಂಡ್ ರೋಲ್ ಇನ್ ಹಿಸ್ಟರಿ’ ಈ ಪುಸ್ತಕದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಈ ಪುಸ್ತಕದಲ್ಲಿ ಅಹಮದ ಇವರು,

೧. ಭಾರತದ ವಿಭಜನೆಯಾಗಬಾರದು, ಅದಕ್ಕಾಗಿ ಮ.ಗಾಂಧಿ, ನೆಹರು ಹಾಗೂ ಅವರ ನೇತೃತ್ವದ ಕಾಂಗ್ರೇಸ್ ಪಕ್ಷ ಒತ್ತಾಯಿಸಿದ್ದರು; ಆದರೆ ಮುಸ್ಲೀಮ್ ಲೀಗ್‌ನ ನಾಯಕ ಮಹಮ್ಮದ ಅಲಿ ಜಿನ್ನಾ ಇವರು ವಿಭಜನೆಗೆ ಪಟ್ಟು ಹಿಡಿದಿದ್ದರು. ಜಿನ್ನಾ ಇವರು ಕಾಂಗ್ರೆಸ್‌ಗೆ ಹಿಂದೂಗಳ ಪಕ್ಷ ಹಾಗೂ ಮ. ಗಾಂಧಿ ಇವರನ್ನು ‘ಸರ್ವಾಧಿಕಾರಿ’ ಎಂಬುದನ್ನು ಸಾಬೀತು ಪಡಿಸಲು ಒಂದೇ ಒಂದು ಅವಕಾಶವನ್ನೂ ಬಿಡಲಿಲ್ಲ.

೨. ೨೨ ಮಾರ್ಚ್ ೧೯೪೦ ರಲ್ಲಿ ಲಾಹೋರ್‌ನಲ್ಲಿ ಜಿನ್ನಾರವರು ಅಧ್ಯಕ್ಷರಾಗಿ ಭಾಷಣವನ್ನು ಮಾಡಿದ್ದರು. ನಂತರ ಮಾರ್ಚ್ ೨೩ ರಂದು ಠರಾವಿಗೆ ಒಪ್ಪಿಗೆ ನೀಡಿದ್ದರು. ಅಂದಿನಿಂದ ಜಿನ್ನಾ ಅಥವಾ ಮುಸ್ಲೀಮ್ ಲೀಗ್ ಇವರು ಒಬ್ಬರೂ ಕೂಡ ‘ಅಖಂಡ ಭಾರತ’ಅನ್ನು ಸ್ವೀಕಾರ ಮಾಡುv ಇಚ್ಛೆಯನ್ನು ವ್ಯಕ್ತಪಡಿಸಲಿಲ್ಲ.

೩. ಜಿನ್ನಾರವರ ಹಲವಾರು ಭಾಷಣಗಳು, ಹೇಳಿಕೆಗಳು ಹಾಗೂ ಮನವಿಗಳಲ್ಲಿ ಭಾರತದ ವಿಭಜನೆ ಮಾಡಿ ಪಾಕಿಸ್ತಾನವನ್ನು ನಿರ್ಮಿಸಲು ಒತ್ತಾಯಿಸುತ್ತಿದ್ದರು, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬ್ರಿಟನ್ ಕೂಡ ಈ ವಿಭಜನೆಗೆ ಒಪ್ಪಿಗೆ ನೀಡಿತ್ತು, ಈ ಹಿಂದೆ ಅದರ ಸ್ವಾರ್ಥವಿತ್ತು. ಕಾಂಗ್ರೆಸ್ ನೇತೃತ್ವದ ‘ಅಖಂಡ ಭಾರತ’ ಇದು ಬ್ರಿಟಿಶರ ಧೋರಣೆಯನ್ನು ಪೂರ್ಣಗೊಳಿಸಲು ಆಗುತ್ತಿರಲಿಲ್ಲ; ಆದರೆ ಮುಸ್ಲೀಮ್ ಲೀಗ್‌ನ ನೇತೃತ್ವದಲ್ಲಿ ಪಾಕಿಸ್ತಾನ ನಿರ್ಮಾಣವಾದರೆ ಬ್ರಿಟಿಶರಿಗೆ ಅದರ ಲಾಭವಾಗುವುದಿತ್ತು. ಅಖಂಡ ಭಾರತ ಇದು ಸೋವಿಯತ್ ಯೂನಿಯನ್ ನೇತೃತ್ವದ ಗುಂಪಿನಲ್ಲಿ ಸಹಭಾಗಿ ಆಗಬಹುದು, ಎಂಬ ಭಯ ಬ್ರಿಟಿಶ್‌ಗೆ ಇತ್ತು. ಜಿನ್ನಾ ಕೇವಲ ಮುಸಲ್ಮಾನರಿಗಾಗಿ ಪಾಕಿಸ್ತಾನವನ್ನು ನಿರ್ಮಾಣಕ್ಕಾಗಿ ಆಗ್ರಹಿಸಿರಲಿಲ್ಲ ಬದಲಾಗಿ ಸಿಖ ಹಾಗೂ ದ್ರಾವಿಡರಿಗೂ ಬೇರೆ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಅವರ ಇಚ್ಛೆಯಾಗಿತ್ತು. ಮಹಮ್ಮಮದ ಅಲಿ ಜಿನ್ನಾ ಇವರು ಜಾತ್ಯತೀತ ಪಾಕಿಸ್ತಾನವನ್ನು ನಿರ್ಮಾಣ ಮಾಡಲು ಬಯಸಿದ್ದರು, ಎಂಬುದು ಸುಳ್ಳಾಗಿದೆ.

೪. ಎರಡೂ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತರು ಇರುವ ಬಗ್ಗೆ ಮುಸ್ಲೀಮ್ ಲೀಗ್‌ಗೆ ಅರಿವಿತ್ತು. ಭಾರತದಲ್ಲಿ ಮುಸಲ್ಮಾನರಿಗೆ ತೊಂದರೆ ಕೊಟ್ಟರೆ ಪಾಕಿಸ್ತಾನದಲ್ಲಿಯೂ ಹಿಂದೂಗಳಿಗೆ ತೊಂದರೆ ಕೊಡಬಹುದು ಎಂಬ ವಿಚಾರ ಅವರದ್ದಾಗಿತ್ತು. ೩೦ ಮಾರ್ಚ್ ೧೯೪೧ ರಂದು ಭಾರತದಲ್ಲಿಯ ಮುಸಲ್ಮಾನರ ಬಗ್ಗೆ ಜಿನ್ನಾರವರಲ್ಲಿ ವಿಚಾರಿಸಿದಾಗ ಅವರು, ೭ ಕೋಟಿ ಮುಸಲ್ಮಾನರನ್ನು ಸ್ವತಂತ್ರ ಮಾಡಲು ೨ ಕೋಟಿ ಮುಸಲ್ಮಾನರಿಗೆ ‘ಶಹೀದ್’ ಮಾಡಲು ಸಿದ್ಧರಿದ್ದೇವೆ ಎಂದು ಉತ್ತರಿಸಿದ್ದರು. ಆ ಸಮಯದಲ್ಲಿ ಭಾರತದಲ್ಲಿ ಮೂರುವರೆ ಕೋಟಿ ಮುಸಲ್ಮಾನರಿದ್ದರು.