ಬಿಹಾರದಲ್ಲಿನ ಮುಸಲ್ಮಾನ ಶಿಕ್ಷಕನಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ
ಬೇಗುಸರಾಯ (ಬಿಹಾರ ) – ಬಛವಾಡ ತಾಲೂಕಿನ ಕಾದರಾಬಾದ್ ಇಲ್ಲಿಯ ಒಂದು ಶಾಲೆಯ ಮುಸಲ್ಮಾನ ಶಿಕ್ಷಕ ಜಿಯಾಉದ್ದೀನ್ ಇವನು ತರಗತಿಯಲ್ಲಿನ ಮಕ್ಕಳಿಗೆ ಕಲಿಸುವಾಗ ಭಗವಾನ್ ಶ್ರೀರಾಮ ಮತ್ತು ಶ್ರೀಹನುಮಂತ ಇವರು ಮುಸಲ್ಮಾನರೆಂದು ಹೇಳಿದನು. ಅವರು ನಮಾಜ ಪಠಣೆ ಮಾಡುತ್ತಿದ್ದರು ಎಂದು ಕೂಡ ಈ ಶಿಕ್ಷಕ ಹೇಳಿದನು. ಮಕ್ಕಳು ಈ ವಿಷಯದ ಕುರಿತು ಪೋಷಕರಿಗೆ ಮಾಹಿತಿ ನೀಡಿದಾಗ ಗ್ರಾಮಸ್ಥರಲ್ಲಿ ಅಸಮಾಧಾನದ ವಾತಾವರಣ ನಿರ್ಮಾಣವಾಯಿತು. ಗ್ರಾಮಸ್ಥರ ವಿರೋಧದ ನಂತರ ಶಿಕ್ಷಕನು ಕ್ಷಮೆ ಯಾಚಿಸಿದನು.
(ಈ ರೀತಿಯಾಗಿ ಸುಳ್ಳು ಮಾಹಿತಿ ಮಕ್ಕಳಿಗೆ ನೀಡುವ ಮುಸಲ್ಮಾನ ಶಿಕ್ಷಕನ ಬಗ್ಗೆ ಸಾಮ್ಯವಾದಿ ಪ್ರಸಾರ ಮಾಧ್ಯಮಗಳು , ಜಾತ್ಯಾತೀತರು, ಕಥಿತ ವಿಚಾರವಾದಿಗಳು, ಅರ್ಬನ್ ನಕ್ಸಲವಾದಿಗಳು ಬಾಯಿ ತೆರೆಯುವುದಿಲ್ಲ ; ತದ್ವಿರುದ್ಧ ಯಾವುದಾದರೂ ಹಿಂದೂ ಶಿಕ್ಷಕನು ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ್ದರೆ, ಆಗ ಎಲ್ಲರೂ ಸೇರಿ ಅವನ ಮೇಲೆ ಹರಿಹಾಯುತ್ತಿದ್ದರು, ಇದನ್ನು ತಿಳಿದುಕೊಳ್ಳಿ ! -ಸಂಪಾದಕರು)
ಹಿಂದೂ ಹುಡುಗರ ಪೋಷಕರು ಶಾಲೆಗೆ ತಲುಪಿ ತಪ್ಪಾದ ಮಾಹಿತಿ ನೀಡುವ ಪ್ರ ಶಿಕ್ಷಕನಿಗೆ ಪ್ರಶ್ನಿಸಿದರು ಅದರ ನಂತರ ಮುಖ್ಯೋಪಾಧ್ಯಾಯರ ಮುಂದಾಳತ್ವದಲ್ಲಿ ಶಿಕ್ಷಕ ಜಿಯಾಉದ್ದೀನ್ ಇವನು ಗ್ರಾಮಸ್ಥರ ಎದುರು ತನ್ನು ತಪ್ಪು ಒಪ್ಪಿಕೊಂಡನು ಮತ್ತು ಭವಿಷ್ಯದಲ್ಲಿ ಹೀಗೆ ಏನು ಮಾಡದೆ ಇರುವ ಆಶ್ವಾಸನೆ ನೀಡಿದನು.
ಹಿಂದುಗಳ ದೇವತೆಗಳನ್ನು ಮುಸಲ್ಮಾನ ಎಂದು ಹೇಳುವುದು ಇದು ಒಂದು ಷಡ್ಯಂತ್ರ ! – ಕೇಂದ್ರ ಸಚಿವ ಗಿರಿರಾಜ ಸಿಂಹ
ಈ ಪ್ರಕರಣದಲ್ಲಿ ಬೇಗುಸರಾಯದ ಸಂಸದ ಮತ್ತು ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ಮುಖ್ಯಮಂತ್ರಿಯ ಬಳಿ ಈ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಗಿರಿರಾಜ ಸಿಂಹ ಇವರು, ಹಿಂದೂಗಳ ದೇವತೆಗಳನ್ನು ಮುಸಲ್ಮಾನರೆಂದು ಹೇಳುವುದು ಇದು ಒಂದು ಷಡ್ಯಂತ್ರವಾಗಿದೆ, ಹೀಗೆ ಮುಂದುವರೆದರೆ ಸಮಾಜದಲ್ಲಿ ವೈಮನಸ್ಯ ನಿರ್ಮಾಣವಾಗುವುದು.
ಸಂಪಾದಕೀಯ ನಿಲುವು
ಹಿಂದೂಗಳ ದೇವತೆಗಳನ್ನು ಮುಸಲ್ಮಾನ್ ಎಂದು ಹೇಳುವ ಮತಾಂಧ ಮುಸಲ್ಮಾನರು ಹಿಂದುಗಳ ಬುದ್ಧಿ ಭ್ರಮಣೆ ಮಾಡಲು ನೋಡುತ್ತಿದ್ದಾರೆ, ಇದೇ ಇದರಿಂದ ತಿಳಿದು ಬರುತ್ತದೆ. ಇಂತಹ ಷಡ್ಯಂತ್ರ ವಿಫಲಗೊಳಿಸುವುದಕ್ಕಾಗಿ ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಅಗತ್ಯವಿದೆ. |