Legendary Industrialist Ratan Tata : ಉದ್ಯೋಗ ಮಹರ್ಷಿ ಪದ್ಮವಿಭೂಷಣ ರತನ ಟಾಟಾ ಪಂಚಮಹಾಭುತದಲ್ಲಿ ವಿಲೀನ !

ಮುಂಬಯಿ – ದೇಶದಲ್ಲಿನ ಹೆಸರಾಂತ ಉದ್ಯಮಿ ಪದ್ಮವಿಭೂಷಣ ರತನ ಟಾಟಾ ಇವರು ಅಕ್ಟೋಬರ್ ೯, ರಾತ್ರಿ ೧೧.೩೦ ಕ್ಕೇ ತಮ್ಮ ೮೬ ನೇ ವಯಸ್ಸಿನಲ್ಲಿ ನಿಧನರಾದರು. ಮುಂಬಯಿಯ ಬ್ರಿಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಕೊನೆ ಉಸಿರೆಳೆದರು. ಕಳೆದ ಕೆಲವು ದಿನದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಚಿಕಿತ್ಸೆಗಾಗಿ ಐಸಿಯುನಲ್ಲಿ ಇಡಲಾಗಿತ್ತು. ರತನ ಟಾಟಾ ಇವರ ನಿಧನದಿಂದ ಓರ್ವ ಹೆಸರಾಂತ ಉದ್ಯಮಿಯ ಸಹಿತ ಒಂದು ಒಳ್ಳೆಯ ವ್ಯಕ್ತಿತ್ವ ಕಳೆದುಕೊಂಡಿದ್ದೇವೆ ಎಂದು ಸಮಾಜದಲ್ಲಿನ ಎಲ್ಲರಲ್ಲಿಯು ದುಖಃ ವ್ಯಕ್ತವಾಗುತ್ತಿದೆ. ರತನ ಟಾಟಾ ಇವರ ನಿಧನದಿಂದ ಮಹಾರಾಷ್ಟ್ರದಲ್ಲಿ ಅಕ್ಟೋಬರ್ ೧೦ ಒಂದು ದಿನದ ಶೋಕಾಚರಣೆ ಆಚರಿಸಿದರೆ. ರತನ ಟಾಟಾ ಇವರ ಪಾರ್ಥಿವ ಶರೀರ ಕುಲಾಬಾ ಇಲ್ಲಿಯ ಅವರ ನಿವಾಸದಲ್ಲಿ ಇಡಲಾಗಿತ್ತು. ಅಂತಿಮ ದರ್ಶನಕ್ಕಾಗಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೪ ಗಂಟೆಯವರೆಗೆ ದಕ್ಷಿಣ ಮುಂಬಯಿನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್.ಸಿ.ಪಿ.ಎ.) ಇಲ್ಲಿ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ರತನ ಟಾಟಾ ಇವರ ನಿಧನದಿಂದ ಮಹಾರಾಷ್ಟ್ರ ಸಹಿತ ಇತರ ಕೆಲವರು ರಾಜ್ಯಗಳಲ್ಲಿ ಕೂಡ ಅಕ್ಟೋಬರ್ ೧೦ ರಂದು ಶೋಕಾಚರಣೆ ಘೋಷಿಸಲಾಗಿತ್ತು.

ರತನ ಟಾಟಾ ಇವರ ಪರಿಚಯ !

ರತನ ಟಾಟಾ ಇವರು ಡಿಸೆಂಬರ್ ೨೮, ೧೯೩೭ ಜನಿಸಿದರು. ಅವರು ಅಮೆರಿಕಾದಲ್ಲಿನ ಕಾರ್ನಲ್ ಯೂನಿವರ್ಸಿಟಿಯಿಂದ ಆರ್ಕಿಟೆಕ್ಚರ್ ಮತ್ತು ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ‘ಯೂನಿವರ್ಸಿಟಿ ಆಫ್ ಹಾರ್ವರ್ಡ್’ನಲ್ಲಿ ‘ಅಡ್ವಾನ್ಸ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್’ ಕಲಿತು ಅವರು ತಮ್ಮ ವ್ಯವಹಾರಿಕ ಕೌಶಲ್ಯ ಹೆಚ್ಚಿಸಿಕೊಂಡರು. ೧೯೬೨ ರಲ್ಲಿ ಅವರು ಟಾಟಾ ಗ್ರೂಪ್‌ನಲ್ಲಿ ತರಬೇತಿ ಎಂದು ಪ್ರವೇಶ ಪಡೆದರು. ೧೯೯೧ ರಲ್ಲಿ ಜೆ.ಆರ್.ಡಿ. ಟಾಟಾ ಇವರ ನಿಧನದ ನಂತರ ಅವರಿಗೆ ಟಾಟಾ ಗ್ರೂಪ್ ನ ನೇತೃತ್ವ ದೊರೆಯಿತು. ರತನ ಟಾಟಾ ಇವರ ನೇತೃತ್ವದಲ್ಲಿ ಟಾಟಾ ಗ್ರೂಪ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಗುರುತು ನಿರ್ಮಾಣ ಮಾಡಿತು. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಟಾಟಾ ಟೆಲಿಸರ್ವಿಸಸ್ ಈ ಕ್ಷೇತ್ರಗಳಲ್ಲಿ ಅದು ಕ್ರಾಂತಿಕಾರಿ ಬದಲಾವಣೆ ಮಾಡಿತು.

ಅವರು ಆದರ್ಶ ಸಮಾಜಸೇವಕರಾಗಿದ್ದರು. ಅವರು ಅವರ ಆಸ್ತಿಯ ಬಹುದೊಡ್ಡ ಪಾಲು ಸಮಾಜ ಕಲ್ಯಾಣಕ್ಕಾಗಿ ನೀಡಿದರು. ಅವರ ಕಾರ್ಯದಿಂದ ಅವರಿಗೆ ಭಾರತ ಸರಕಾರದಿಂದ ಪದ್ಮಭೂಷಣ (೨೦೦೦ ನೇ ಇಸ್ವಿಯಲ್ಲಿ) ಮತ್ತು ಪದ್ಮವಿಭೂಷಣ (೨೦೦೮ ನೇ ಇಸ್ವಿಯಲ್ಲಿ) ಈ ದೇಶದ ಸರ್ವೋಚ್ಚ ನಾಗರಿಕ ಪ್ರಶಸ್ತಿಯಿಂದ ಗೌರವಿಸಲಾಯಿತು. ಅಮೇರಿಕಾ, ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಕೂಡ ಅವರಿಗೆ ವಿವಿಧ ಪ್ರಶಸ್ತಿಗಳು ದೊರೆತಿವೆ .

ಪ್ರಧಾನಮಂತ್ರಿ ಮೋದಿ ಇವರಿಂದ ಶ್ರದ್ಧಾಂಜಲಿ

ಅಚಲ ಬದ್ಧತೆಯಿಂದ ಸಮಾಜವನ್ನು ಉತ್ತಮಗೊಳಿಸುವುದಕ್ಕಾಗಿ ರತನ ಟಾಟಾ ಜನಪ್ರಿಯರಾಗಿದ್ದರು ! – ಪ್ರದಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ರತನ ಟಾಟಾ ಇವರಿಗೆ ಶ್ರದ್ಧಾಂಜಲಿ ಅರ್ಪಿಸುವಾಗ, ರತನ ಟಾಟಾ ಇವರು ಓರ್ವ ದೂರದರ್ಶಿ ನೇತೃತ್ವ, ದಯಾವಂತ ವ್ಯಕ್ತಿತ್ವ ಮತ್ತು ವಿಲಕ್ಷಣ ವ್ಯಕ್ತಿಯಾಗಿದ್ದರು. ಅವರು ಭಾರತದಲ್ಲಿನ ಎಲ್ಲಕ್ಕಿಂತ ಪ್ರಾಚೀನ ಮತ್ತು ಪ್ರತಿಷ್ಠಿತ ಉದ್ಯಮಿಯ ಮನೆತನದ ಸ್ಥಿರವಾದ ನೇತೃತ್ವ ನೀಡಿದರು. ನಮ್ರತೆ, ದಯಾವಂತಿಕೆ ಮತ್ತು ಸಮಾಜಕ್ಕೆ ಹೆಚ್ಚು ಒಳ್ಳೆಯ ರೀತಿಯಲ್ಲಿ ರೂಪಿಸುವ ಶಾಶ್ವತ ಬದ್ಧತೆಯಿಂದ ಅವರು ಜನಪ್ರಿಯರಾಗಿದ್ದರು. ರತನ ಟಾಟಾ ಇವರುರಲ್ಲಿನ ಮಿಗಿಲಾದ ಅಂಶಗಳಲ್ಲಿ ಒಂದಾದ ದೊಡ್ಡ ಕನಸು ಕಾಣುವ ಆಸಕ್ತಿ, ಶಿಕ್ಷಣ, ಆರೋಗ್ಯ ಸೇವೆ, ಸ್ವಚ್ಛತೆ, ಪ್ರಾಣಿ ಕಲ್ಯಾಣ ಇವುಗಳಂತಹ ಅನೇಕ ಕ್ಷೇತ್ರಗಳಲ್ಲಿ ಅವರು ಕಾರ್ಯ ಮಾಡಿದ್ದರು. ರತನ ಟಾಟಾ ಇವರ ಜೊತೆಗೆ ನಡೆದಿರುವ ಅಸಂಖ್ಯ ಸಂವಾದದ ನೆನಪುಗಳಿಂದ ನನ್ನ ಮನಸ್ಸು ತುಂಬಿ ಬಂದಿದೆ. ನಾನು ಮುಖ್ಯಮಂತ್ರಿ ಆಗಿರುವಾಗ ಅವರು ಗುಜರಾತಿಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದರು. ನಾವು ವಿವಿಧ ಅಂಶಗಳ ಕುರಿತು ವಿಚಾರವಿನಿಮಯ ಮಾಡುತ್ತಿದ್ದೆವು. ನನಗೆ ಅವರ ದೃಷ್ಟಿಕೋನ ಬಹಳ ಸಮೃದ್ಧ ಎನಿಸಿತ್ತು. ನಾನು ದೆಹಲಿಗೆ ಬಂದೆನು, ಆಗಲೂ ಕೂಡ ನಮ್ಮ ಸಂವಾದ ಮುಂದುವರೆದಿತ್ತು. ಅವರ ನಿಧನದಿಂದ ಬಹಳ ದುಃಖವಾಗಿದೆ.

ಒಂದು ದಿನದ ಶೋಕಾಚರಣೆ, ಸರಕಾರಿ ಗೌರವದಲ್ಲಿ ಅಂತ್ಯ ಸಂಸ್ಕಾರ !

ಉದ್ಯಮಿ ರತನ ಟಾಟಾ ಇವರ ನಿಧನದಿಂದ ಅವರ ಗೌರವದಲ್ಲಿ ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಅಕ್ಟೋಬರ್ ೧೦ ಶೋಕಾಚರಣೆಯ ದಿನ ಎಂದು ಘೋಷಿಸಿದರು. ಆದ್ದರಿಂದ ಈ ದಿನ ರಾಜ್ಯದಲ್ಲಿನ ಎಲ್ಲಾ ಸರಕಾರಿ ಕಾರ್ಯಾಲಯಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. ಅಕ್ಟೋಬರ್ ೧೦ ರಂದು ರಾಜ್ಯದಲ್ಲಿ ಮನೋರಂಜನೆಯ ಯಾವುದೇ ಕಾರ್ಯಕ್ರಮ ಆಚರಿಸಲಾಗುವುದಿಲ್ಲ. ಸರಕಾರಿ ಗೌರವದಲ್ಲಿ ರತನ ಟಾಟಾ ಇವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಿಸಿದರು.

ಮಾನವೀಯತೆ, ದಾನಶುರತೆ, ವಿಶ್ವಾಸಾರ್ಹತೆ ಇವುಗಳ ಮಾನದಂಡ ಕಳೆದು ಹೋಗಿದೆ ! – ದೇವೇಂದ್ರ ಪಡಣವೀಸ, ಉಪಮುಖ್ಯಮಂತ್ರಿ
ಮುಂಬಯಿ – ಹಿರಿಯ ಉದ್ಯಮಿ ರತನ ಟಾಟಾ ಇವರ ನಿಧನದಿಂದ ಕೇವಲ ದೇಶಕ್ಕೆ ಅಷ್ಟೇ ಅಲ್ಲದೆ ಮಾನವೀಯತೆಯ ಶ್ರೀಮಂತದ ಅನುಭೂತಿ ನೀಡುವ ಒಂದು ಹಿರಿಯ ವ್ಯಕ್ತಿತ್ವ ನಮ್ಮಿಂದ ಹೊರಟು ಹೋಗಿದೆ. ಅವರ ನಿಧನದಿಂದ ಮಾನವೀಯತೆ, ದಾನಶೂರತೆ, ವಿಶ್ವಾಸಾರ್ಹತೆಯ ಮಾನದಂಡ ಕಳೆದು ಹೋಗಿದೆ. ರತನ ಟಾಟಾ ಓರ್ವ ಯಶಸ್ವಿ ಉದ್ಯಮಿ ಇದ್ದೆ ಇದ್ದರು, ಆದರೆ ಅದನ್ನು ಮೀರಿ ಅವರು ಸಮಾಜದ ವಿಚಾರ, ಮನುಷ್ಯತ್ವ ಮತ್ತು ವಿನಮ್ರತೆಯ ಮೂರ್ತಿಮಂತ ಉದಾಹರಣೆ ಆಗಿದ್ದರು. ಶಿಕ್ಷಣ, ಗ್ರಾಮ ಉನ್ನತಿ ಮತ್ತು ಅಪೌಷ್ಟಿಕತೆ ನಿರ್ಮೂಲನೆ, ಆರೋಗ್ಯ ಮುಂತಾದ ಕ್ಷೇತ್ರದಲ್ಲಿ ಕೂಡ ಅವರ ಕೆಲಸ ಗಮನಾರ್ಹವಾಗಿದೆ. ದೇಶದ ಆರ್ಥಿಕ ವಿಕಾಸದ ಜೊತೆಗೆ ಮಾನವೀಯತೆಯ ವಿಕಾಸದಲ್ಲಿ ಅವರು ನೀಡಿರುವ ಸಹಕಾರ ಬಹಳ ದೊಡ್ಡದಾಗಿದೆ. ಸಮಾಜದಿಂದ ಗಳಿಸಿರುವುದು ಸಮಾಜಕ್ಕೆ ಹಿಂತಿರುಗಿಸುವ, ಈ ಶ್ರದ್ಧೆಯಿಂದ ಅವರು ಶಾಶ್ವತವಾಗಿ ಬದುಕಿದರು. ಅವರು ಹೋಗುವುದು ಇದು ಮಹಾರಾಷ್ಟ್ರಕ್ಕೆ ಮತ್ತು ದೇಶಕ್ಕೆ ದೊಡ್ಡ ನಷ್ಟವೇ ಆಗಿದೆ ಎಂದು ಹೇಳಿದರು.

‘ಶ್ರೀಮಂತ ಯೋಗಿ’ ಕಳೆದು ಹೋದರು ! – ರಾಜ ಠಾಕರೆ, ಅಧ್ಯಕ್ಷ, ಮನಸೇ

ಈ ಜಗತ್ತಿನಲ್ಲಿ ಯಾರ ಜೊತೆಗೂ ಛತ್ರಪತಿ ಶಿವಾಜಿ ಮಹಾರಾಜರನ್ನು ಹೋಲಿಸಲು ಸಾಧ್ಯವಿಲ್ಲ, ಆದರೆ ಸಮರ್ಥರಾಮದಾಸ ಸ್ವಾಮಿ ಇವರು ಮಹಾರಾಜರನ್ನು ‘ಶ್ರೀಮಂತ ಯೋಗಿ’ ಎಂದು ಹೇಳಿದ್ದರು. ರಾಮದಾಸ ಸ್ವಾಮಿ ಇವರು ಮಹಾರಾಜರು ಮಾಡಿರುವ ಅವರ ನಿಖರವಾದ ವರ್ಣನೆ ಬೇರೆಲ್ಲೂ ಕಂಡು ಬರುತ್ತಿಲ್ಲ. ರತನ ಟಾಟಾ ಇವರ ವಿಷಯದಲ್ಲಿ ‘ಶ್ರೀಮಂತ ಯೋಗಿ’ ಈ ಹೋಲಿಕೆ ಚಾಚುತಪ್ಪದೇ ಸರಿ ಹೊಂದುತ್ತದೆ. ಶ್ರೀಮಂತ ಇದ್ದರೂ ಕೂಡ ಅವರು ತಮ್ಮ ಶ್ರೀಮಂತಿಕೆಯ ಪ್ರದರ್ಶನ ಎಂದು ಮಾಡಲಿಲ್ಲ, ಇಂತಹ ಮನುಷ್ಯ ಮುಂದಿನ ಪೀಳಿಗೆಗೆ ನೋಡಲು ಸಿಗುವುದಿಲ್ಲ ಇದು ಹೆಚ್ಚು ದುಃಖದ ವಿಷಯವಾಗಿದೆ. ಇಂದು ನಾನು ಓರ್ವ ಹಿರಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ, ಇದರ ದುಃಖ ನನಗೆ ಇದ್ದೇ ಇದೆ; ಆದರೆ ಒಟ್ಟಾರೆ ಭಾರತವು ಬಹುಶಃ ಇಂತಹ ‘ಕರ್ತೃತ್ವವುಳ್ಳ’ ಆಗಿದ್ದರೂ ಕೂಡ ನಿರ್ಲಿಪ್ತವಾಗಿರುವ ಉದ್ಯಮಿಯನ್ನು ಕಳೆದುಕೊಂಡಿದೆ, ಇದು ಇದಕ್ಕಿಂತಲೂ ದೊಡ್ಡ ದುಃಖವಾಗಿದೆ ಎಂದು ಹೇಳಿದರು.