ಇಂದೋರ – ಮಧ್ಯಪ್ರದೇಶದ ಉಜ್ಜೈನಿ ಮತ್ತು ಇಂದೋರನಲ್ಲಿ ಅಕ್ಟೋಬರ್ 8 ರ ರಾತ್ರಿ, ಗರಬಾ ಮಂಟಪದಲ್ಲಿ ಹೆಸರು ಬದಲಾಯಿಸಿ ಪ್ರವೇಶಿಸುವ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಯಿತು. ಫಿರೋಜ್ ಹೆಸರಿನ ಮುಸಲ್ಮಾನನು ಉಜ್ಜೈನಿಯ ಗರಬಾ ಮಂಟಪದಲ್ಲಿ ‘ರಾಹುಲ್’ ಎಂದು ಹೆಸರು ಹೇಳಿ ಪ್ರವೇಶಿಸಿದ್ದನು. ಹಾಗೆಯೇ ಇಂದೋರನಲ್ಲಿ ಅಸೀಮ ನಾಗೌರಿಯು `ಪಂಕಜ’ ಎಂದು ಹೇಳಿ ಮಂಟಪದಲ್ಲಿ ಪ್ರವೇಶಿಸಿದ್ದನು. ಜನರು ಇಬ್ಬರನ್ನು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.
ಇಂದೋರ್‍ನ ದೇವಾಸ ಇಲ್ಲಿನ ಅಸಿಮ್ ನಾಗೌರಿ ಇವನ ಮೊವೈಲ ಮೇಲೆ ಅವನು ಅನೇಕ ಹುಡುಗಿಯರೊಂದಿಗೆ ಅಶ್ಲೀಲ ಸಂಭಾಷಣೆ ಮಾಡಿರುವುದು ಕಂಡು ಬಂದಿದೆ. ಅವನು ಹುಡುಗಿಯರ ಅಶ್ಲೀಲ ವಿಡಿಯೋ ಪ್ರಸಾರ ಮಾಡಿ, ಅವರನ್ನು ಬೆದರಿಸುತ್ತಿದ್ದನು. ಅಸೀಮ ನಾಗೌರಿ ಗರಬಾ ಆಡಲು ಬಂದಿರುವ ಮಹಿಳೆಯರು ಮತ್ತು ಹುಡುಗಿಯರ ವಿಡಿಯೋ ಮಾಡುತ್ತಿದ್ದನು. ಅವನ ಸಂದೇಹಾಸ್ಪದ ನಡುವಳಿಕೆಯನ್ನು ನೋಡಿ ಗರಬಾ ಆಯೋಜಕರಿಗೆ ಅವನ ಮೇಲೆ ಸಂದೇಹ ಬಂದಿತು. ಅವನ ಬಳಿ ಗುರುತು ಪತ್ರವನ್ನು ವಿಚಾರಿಸಿದಾಗ ಅವನು ನೀಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ತದನಂತರ ಜನರು ಅವನನ್ನು ಬಂಧಿಸಿದರು.