ಉಡುಪಿಯ ಪೇಜಾವರ ಶ್ರೀ ಇವರಿಂದ ಸರಕಾರಕ್ಕೆ ಆಗ್ರಹ
ಮಂಗಳೂರು – ಹಿಂದೂಗಳ ದೇವಸ್ಥಾನಕ್ಕೆ ಅವರದೇ ಆದ ನಿಯಮಗಳು ಇರುತ್ತವೆ. ಆದ್ದರಿಂದ ಈ ದೇವಸ್ಥಾನಗಳು ಹಿಂದುಗಳೆ ನೋಡಿಕೊಳ್ಳಬೇಕಾಗುತ್ತದೆ. ಹಿಂದುಗಳ ದೇವಸ್ಥಾನಗಳು ಹಿಂದುಗಳಿಗೆ ಒಪ್ಪಿಸಬೇಕೆಂದು, ಉಡುಪಿ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇವರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಮಂಗಳೂರು ನಗರದಲ್ಲಿ ಓರ್ವ ಪತ್ರಕರ್ತನೊಂದಿಗೆ ಮಾತನಾಡುವಾಗ ಸ್ವಾಮೀಜಿಯವರು, ಇತರ ಧರ್ಮದಲ್ಲಿ ಅವರ ಜನಾಂಗಕ್ಕೇ ಅವರ ಧಾರ್ಮಿಕ ಸಂಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗುತ್ತದೆ. ನಮ್ಮ ದೇಶದಲ್ಲಿ ಕೇವಲ ಹಿಂದುಗಳ ದೇವಸ್ಥಾನಗಳು ಸರಕಾರದ ಆಧೀನದಲ್ಲಿವೆ. ಹಿಂದುಗಳಿಗೆ ತಮ್ಮದೇ ಆದಂತಹ ಆಚಾರ ಸಂಹಿತೆ ಇರುತ್ತದೆ. ಇದು ಯಾರಿಗೆ ತಿಳಿದಿದೆ ಅವರಿಂದ ಧಾರ್ಮಿಕ ಶ್ರದ್ಧಾ ಕೇಂದ್ರದ ನೇತೃತ್ವ ವಹಿಸಿಕೊಂಡರೆ ಆಗ ದುರ್ವ್ಯವಹಾರ ಆಗುವುದಿಲ್ಲ. ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರದ ವ್ಯವಸ್ಥಾಪನೆ ಟ್ರಸ್ಟಿಗಳ ಹತ್ತಿರ ಇರುವುದು. ಹಾಗೆ ಹಿಂದುಗಳಿಗೆ ಅವರ ದೇವಸ್ಥಾನಗಳನ್ನು ನೋಡಿಕೊಳ್ಳುವ ಅವಕಾಶ ನೀಡಬೇಕು. ಪ್ರಾಚೀನ ದೇವಸ್ಥಾನಗಳು ಸರಕಾರವು ತನ್ನ ಬಳಿ ಇಟ್ಟು ಕೊಂಡಿದೆ. ಟ್ರಸ್ಟಿಗಳ ಮುಖಾಂತರ ಅಯೋಧ್ಯೆಯ ಶ್ರೀರಾಮ ಮಂದಿರದ ವ್ಯವಸ್ಥಾ ಕಾರ್ಯ ನಡೆಯುತ್ತಿದೆ. ಇದೇ ರೀತಿ ಎಲ್ಲಾ ದೇವಸ್ಥಾನಗಳಲ್ಲಿ ಪಾಲಿಸಬೇಕೆಂದು ಅವರು ಹೇಳಿದರು.
ಸಂಪಾದಕೀಯ ನಿಲುವುಸಂತರು, ಹಿಂದೂ ಸಂಘಟನೆಗಳು ಮುಂತಾದವರು ಆಗ್ರಹಿಸಿ ಕೂಡ ಸರಕಾರ ದೇವಸ್ಥಾನಗಳನ್ನು ಹಿಂದುಗಳ ವಶಕ್ಕೆ ನೀಡಲು ತಯಾರಿಲ್ಲ. ಆದ್ದರಿಂದ ಈಗ ಎಲ್ಲಾ ಹಿಂದೂಗಳು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು, ಆಗ ಮಾತ್ರ ಸರಕಾರ ದೇವಸ್ಥಾನದ ಸರಕಾರಿಕರಣ ರದ್ದುಪಡಿಸುವುದು ! |