‘ವಾಯ್ಸ್ ಆಫ್ ಬಾಂಗ್ಲಾದೇಶ ಹಿಂದೂಜ್’ ಈ ಸಂಸ್ಥೆಯಿಂದ ಆರ್ಥಿಕ ಸಹಾಯ ಮಾಡುವಂತೆ ಭಾರತದಲ್ಲಿನ ಹಿಂದುಗಳಿಗೆ ಕರೆ !

ಢಾಕಾ (ಬಾಂಗ್ಲಾದೇಶ) – ಕಳೆದ ೫೦ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ಸ್ಥಿತಿ ದಯನೀಯವಾಗಿದೆ. ಕಳೆದ ೨ ತಿಂಗಳಿಂದ ಅಲ್ಲಿ ೧೯೭೧ ನಂತರ ಇದೇ ಮೊದಲಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇಶ ವ್ಯಾಪಿ ಹಿಂದೂ ವಿರೋಧಿ ದಾಳಿಗಳ ಸರಣಿಯೇ ನಡೆಯುತ್ತಿವೆ ಎಂದು ಅಲ್ಲಿಯ ವಿವಿಧ ಹಿಂದೂ ನಾಯಕರು ‘ಸನಾತನ ಪ್ರಭಾತ’ಕ್ಕೆ ತಿಳಿಸಿದ್ದಾರೆ. ಇಂತಹದರಲ್ಲಿ ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಜ್’ ಹೆಸರಿನ ಹಿಂದೂ ಸಂಸ್ಥೆ ಕೂಡ ಅಲ್ಲಿಯ ಹಿಂದುಗಳ ಮೇಲೆ ನಡೆಯುತ್ತಿರುವ ಪ್ರತಿಯೊಂದು ದೌರ್ಜನ್ಯದ ಘಟನೆಗೆ ಧ್ವನಿ ಎತ್ತುವುದಕ್ಕಾಗಿ ಕಟಿಬದ್ಧವಾಗಿದೆ. ಅವರ ಎಕ್ಸ್ ನಲ್ಲಿನ @AHindus 71 ಹೆಸರಿನ ಈ ಖಾತೆಯಿಂದ ಪ್ರತಿ ದಿನ ಬಾಂಗ್ಲಾದೇಶದ ಹಿಂದುಗಳ ಮೇಲೆ ನಡೆಯುವ ದಾಳಿಯ ಕುರಿತಾದ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಮಾಹಿತಿ ಸಹಿತ ಪ್ರಸಾರ ಮಾಡುತ್ತಿದೆ.

ಈ ಸಂಸ್ಥೆಗೆ ಆರ್ಥಿಕ ಸಹಾಯದ ಅವಶ್ಯಕತೆ ಇದ್ದು, ಅವರು ಭಾರತದಲ್ಲಿನ ಹಿಂದೂ ಜನರಿಗೆ ಅವರಿಗೆ ಆರ್ಥಿಕ ಸಹಾಯ ಮಾಡಲು ವಿನಂತಿಸಿದ್ದಾರೆ. ಈ ಸಂಸ್ಥೆಗೆ ಸಹಾಯ ಮಾಡುವುದಕ್ಕಾಗಿ ಮುಂದೆ ನೀಡಿರುವ ಇಮೇಲ್ ವಿಳಾಸಕ್ಕೆ ಪೆಪಾಲ್ ಮೂಲಕ (PayPal) ಹಣ ಕಳಿಸಬಹುದು : [email protected]

ಕೆಳಗೆ ನೀಡಿರುವ ಜಾಲತಾಣದಲ್ಲಿ ನ ಆನ್ಲೈನ್ ಮೂಲಕ ಕೂಡ ಹಣ ಕಳುಹಿಸಬಹುದು : PayPal .com/PayPalme/voiceoBangladesiHi

ಸಂಪಾದಕೀಯ ನಿಲುವು

ಹಿಂದೂಗಳ ರಕ್ಷಣೆಗಾಗಿ ಕಾರ್ಯನಿರತವಾಗಿರುವ ಇಂತಹ ಸಂಸ್ಥೆಗಳಿಗೆ ಸಹಾಯ ಮಾಡುವುದು ಇದು ಪ್ರತಿಯೊಬ್ಬ ಹಿಂದುವಿನ ಧರ್ಮಕರ್ತವ್ಯವಾಗಿದೆ !