ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಮತ್ತು ಕಂಡಕ್ಟರಲ್ಲಿ ಅಸಮಾಧಾನ !
ಬೆಂಗಳೂರು – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ ಚಾಲಕರಿಗೆ ದಸರಾ ದಿನದಂದು ವಾಹನಗಳಿಗೆ ಪೂಜೆ ಮಾಡಲು ರಾಜ್ಯ ಸರಕಾರದಿಂದ 100 ರೂಪಾಯಿಗಳನ್ನು ನೀಡಲಾಗುತ್ತದೆ. ಈ ಚಿಲ್ಲರೆ ಮೊತ್ತದಿಂದ ಬಸ್ ಚಾಲಕ ಮತ್ತು ಕಂಡಕ್ಟರ ಅಸಮಾಧಾನಗೊಂಡಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಸಧ್ಯಕ್ಕೆ ಪೂಜೆಗೆ ಬೇಕಾಗುವ ಹೂವುಗಳ ಬೆಲೆಯು ಇದಕ್ಕಿಂತ ಹೆಚ್ಚಾಗಿದೆಯೆಂದು ಅವರ ಹೇಳಿಕೆಯಾಗಿದೆ.
ಬಸ್ ಕಾರ್ಮಿಕರು, ಪೂಜೆಗೂ ಮುನ್ನ ಬಸ್ ಶುಚಿಗೊಳಿಸಿ ಅಲಂಕರಿಸಬೇಕಾಗುತ್ತದೆ. ಸಂಸ್ಥೆಯು ಪೂಜೆಯ ವೆಚ್ಚಕ್ಕಾಗಿ ಕೇವಲ 100 ರೂಪಾಯಿಗಳನ್ನು ಕೊಡುತ್ತಿದೆ. ಪೂಜೆ ಮಾಡಲು ಅವರಿಗೆ ತಮ್ಮ ಸ್ವಂತ ಜೇಬಿನಿಂದ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ ಎಂದು ಹೇಳಿದರು. ಸಂಸ್ಥೆಯು ಪೂಜೆಗಾಗಿ ಪ್ರತಿಯೊಂದು ವಿಭಾಗೀಯ ಬಸ್ ರಿಪೇರಿ ಕೇಂದ್ರಕ್ಕಾಗಿ 1 ಸಾವಿರ ರೂಪಾಯಿಗಳನ್ನು ಮತ್ತು ಪ್ರಾದೇಶಿಕ ಮಟ್ಟದ ಬಸ್ ದುರಸ್ತಿ ಕೇಂದ್ರಕ್ಕಾಗಿ ತಲಾ 5000 ರೂಪಾಯಿಗಳನ್ನು ವಿತರಿಸಿದೆ.
ಸಂಪಾದಕೀಯ ನಿಲುವುನಾವು ಪೂಜೆಗೆ ಹಣ ಕೊಡುತ್ತೇವೆ, ಎಂದು ತೋರಿಸಲು ಕಾಂಗ್ರೆಸ್ ಸರಕಾರ ಚಿಲ್ಲರೆ ಮೊತ್ತ ನೀಡುತ್ತಿದೆಯೆಂದು ಇದರಿಂದ ಗೊತ್ತಾಗುತ್ತದೆ ! ಸರಕಾರದ ಬಳಿ ಪೂಜೆಗೆ ಹಣವಿಲ್ಲ; ಆದರೆ ಮಹಿಳೆಯರಿಗೆ ಉಚಿತ ಪ್ರವಾಸ ಸೇವೆ ನೀಡಲು ಮಾತ್ರ ಹಣವಿದೆ ! |