ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಇವರನ್ನು ಜೀವಂತವಾಗಿ ಸುಡುವ ಬೆದರಿಕೆಯೊಡ್ಡಿದ್ದ ಕಾಂಗ್ರೆಸ್‌ನ ಶಾಸಕ ಗೋವರ್ಧನ ಡಾಂಗಿಯ ಕೊರೋನಾದಿಂದ ಸಾವು

ಮಧ್ಯಪ್ರದೇಶದ ಕಾಂಗ್ರೆಸ್‌ನ ಶಾಸಕ ಗೋವರ್ಧನ ಡಾಂಗಿಯವರು ಗುರುಗ್ರಾಮ್(ಹರಿಯಾಣಾ)ದ ಖಾಸಗೀ ಆಸ್ಪತ್ರೆಯಲ್ಲಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಡಾಂಗಿ ಇವರು ೨೦೧೯ ರಲ್ಲಿ ಭೋಪಾಲದಲ್ಲಿಯ ಭಾಜಪದ ಸಾಂಸದೆ ಸಾಧ್ವಿ ಪ್ರಜ್ಞಾಸಿಂಹ ಇವರನ್ನು ‘ಅವರು ಒಂದುವೇಳೆ ಮಧ್ಯಪ್ರದೇಶಕ್ಕೆ ಕಾಲಿಟ್ಟರೇ, ಅವರ ಪ್ರತಿಕೃತಿಯಲ್ಲ, ಅವರನ್ನೇ ಪ್ರತ್ಯಕ್ಷವಾಗಿ ಸುಡುತ್ತೇನೆ’, ಎಂದು ಬೆದರಿಕೆಯೊಡ್ಡಿದ್ದರು.

‘ಅಭಿಯಂತರ ದಿನ’ ನಿಮಿತ್ತ ‘ತಂತ್ರಜ್ಞಾನದಲ್ಲಿ ಪ್ರಗತಿಯಲ್ಲಿರುವ ಪ್ರಾಚೀನ ಭಾರತ’ ಈ ವಿಷಯದ ಮೇಲೆ ‘ಆನ್‌ಲೈನ್’ ವಿಶೇಷ ವಿಚಾರಸಂಕಿರಣ !

ಭಾರತೀಯ ಸಂಸ್ಕೃತಿಯು ನಿಸರ್ಗವನ್ನು ದೇವತೆ ಎಂದು ನಂಬುತ್ತದೆ. ಆಧುನಿಕ ವಿಜ್ಞಾನವನ್ನು ಎಷ್ಟೇ ವೈಭವೀಕರಿಸಿದರೂ ಅದಕ್ಕೆ ಮಿತಿಯಿದೆ. ಭಾರತೀಯ ತತ್ತ್ವಜ್ಞಾನಕ್ಕನುಸಾರ ಧರ್ಮ ಹಾಗೂ ವಿಜ್ಞಾನ ಇವು ಪರಸ್ಪರವಿರೋಧಿ ಇಲ್ಲ. ಪ್ರಾಚೀನ ಭಾರತೀಯ ಋಷಿಗಳು ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆಯ ಮೂಲಕ ವಿಜ್ಞಾನದ ಸಿದ್ಧಾಂತಗಳನ್ನು ಸೃಷ್ಟಿಸಿದರು.

ಅಮಾಯಕರನ್ನು ಬಿಡುಗಡೆಗೊಳಿಸಿ !

ಇಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮತಾಂಧರನ್ನು ಬಿಡುಗಡೆ ಮಾಡಲು ಕಾಂಗ್ರೆಸ್‌ನ ಮುಖಂಡ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರಿಗೆ ಮುಸಲ್ಮಾನರ ಸಮೂಹವೊಂದು ಭೇಟಿ ನೀಡಿ ಮನವಿ ಸಲ್ಲಿಸಿದೆ.

ಸಪ್ಟೆಂಬರ್ ೩೦ ರಂದು ಬಾಬರಿ ಮಸೀದಿ ನೆಲಸಮ ಪ್ರಕರಣದ ತೀರ್ಪು

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲಿದ್ದ ಬಾಬರಿ ಮಸೀದಿಯನ್ನು ೬ ಡಿಸೆಂಬರ ೧೯೯೨ ರಲ್ಲಿ ನೆಲಸಮಗೊಳಿಸಿದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೩೦ ರಂದು ತೀರ್ಪು ನೀಡಲಿದೆ. ನ್ಯಾಯಾಧೀಶರಾದ ಎಸ್.ಕೆ. ಯಾದವ್ ಇವರು ತೀರ್ಪಿನಿ ದಿನ ಲಾಲ್‌ಕೃಷ್ಣ ಆಡ್ವಾಣಿ ಸೇರಿ ಎಲ್ಲ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶವನ್ನು ನೀಡಿದ್ದಾರೆ.

ಇಲ್ಲಿಯವರೆಗೆ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ೧೨೨ ಭಯೋತ್ಪಾದಕರನ್ನು ಬಂಧಿಸಲಾಗಿದೆ

ದಕ್ಷಿಣ ಭಾರತದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳನಾಡು ರಾಜ್ಯಗಳಿಂದ ಇಸ್ಲಾಮಿಕ್ ಸ್ಟೇಟ್‌ನ ೧೨೨ ಭಯೋತ್ಪಾದಕರನ್ನು ೧೭ ಅಪರಾಧಗಳಲ್ಲಿ ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ದಳದವರು (ಎನ್.ಐ.ಎ.ನಿಂದ) ಭಯೋತ್ಪಾದಕರನ್ನು ಬಂಧಿಸಿದ್ದಾರೆ, ಎಂದು ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿಯವರು ರಾಜ್ಯಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ, ಮತಾಂತರ ಮತ್ತು ನಿಕಾಹ

ಸಿಂಧ್ ಪ್ರಾಂತ್ಯದಲ್ಲಿನ ಮೊರಿ ಎಂಬಲ್ಲಿ ೯ ನೇ ತರಗತಿಯಲ್ಲಿ ಕಲಿಯುತ್ತಿರುವ ೧೪ ವರ್ಷದ ಅಪ್ರಾಪ್ತೆ ಹಿಂದೂ ಹುಡುಗಿ ಪರಶ ಕುಮಾರಿಯನ್ನು ಅಬ್ದುಲ್ ಸಬೂರ್‌ನು ಅಪಹರಿಸಿ ಬಲವಂತವಾಗಿ ಮತಾಂತರಿಸಿ ನಂತರ ಆಕೆಯೊಂದಿಗೆ ನಿಕಾಹ ಮಾಡಿರುವ ಘಟನೆ ನಡೆದಿದೆ.

ಅತ್ಯಾಚಾರಿಗಳನ್ನು ನಪುಂಸಕರನ್ನಾಗಿ ಮಾಡಬೇಕು ! – ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ನ ಆಕ್ರೋಶ

ಅತ್ಯಾಚರಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲಿಗೇರಿಸಬೇಕು ಅಥವಾ ನಪುಂಸಕರನ್ನಾಗಿ ಮಾಡಬೇಕು, ಇದರಿಂದ ಅಪರಾಧವನ್ನು ಮಾಡುವವರ ಮನಸ್ಸಿನಲ್ಲಿ ಒಂದು ಭಯ ನಿರ್ಮಾಣವಾಗಬಹುದು. ಹೇಗೆ ಕೊಲೆಯ ಘಟನೆಗೆ ‘ಫಸ್ಟ ಡಿಗ್ರಿ’, ‘ಸೆಕೆಂಡ್ ಡಿಗ್ರಿ’, ‘ಥರ್ಡ್ ಡಿಗ್ರಿ’ ಪದ್ದತಿಯ ಶಿಕ್ಷೆ ಇರುತ್ತದೆಯೋ, ಅದೇ ರೀತಿ ಅತ್ಯಾಚಾರ ಮಾಡುವ ಆರೋಪಿಗಳಿಗೂ ಮಾಡಬೇಕು.

೨೦೧೫ ರಿಂದ ೨೦೧೯ ಈ ಕಾಲಾವಧಿಯಲ್ಲಿ ಬಹುಕೋಟಿ ರೂಪಾಯಿಯ ಬ್ಯಾಂಕ್ ಹಗರಣಗಳ ೩೮ ಆರೋಪಿಗಳು ದೇಶದಿಂದ ಪರಾರಿಯಾಗಿದ್ದಾರೆ ! – ಕೇಂದ್ರ ಸರಕಾರದ ಖುಲಾಸೆ

೧ ಜನವರಿ ೨೦೧೫ ರಿಂದ ೩೧ ಡಿಸೆಂಬರ ೨೦೧೯ ರ ಕಾಲಾವಧಿಯಲ್ಲಿ ಬ್ಯಾಂಕ್ ಹಗರಣಗಳ ೩೮ ಆರೋಪಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಸಿಬಿಐ ಯಾವ ಬ್ಯಾಂಕ್ ಹಗರಣಗಳ ತನಿಖೆಯನ್ನು ಮಾಡುತ್ತಿದೆಯೋ, ಅದರ ಆರೋಪಿಗಳೇ ಇವರು ಎಂದು ಕೇಂದ್ರ ಹಣಕಾಸು ಸಚಿವ ಅನುರಾಗ ಠಾಕುರ್ ಇವರು ಸಂಸತ್ತಿನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಚುನಾವಣೆಯ ಎದುರಾಗುತ್ತಿದ್ದಂತ್ಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತ ಮನೆ ಹಾಗೂ ೧ ಸಾವಿರ ರೂಪಾಯಿ ಮಾಸಿಕ ಭತ್ಯೆ !

ಚುನಾವಣೆಯ ಎದುರಾಗುತ್ತಿದ್ದಂತೆ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತವಾಗಿ ಮನೆ ಹಾಗೂ ೧ ಸಾವಿರ ರೂಪಾಯಿ ತಿಂಗಳ ಭತ್ಯೆ ನೀಡುವಂತೆ ಘೋಷಿಸಿದ್ದಾರೆ. ಬಂಗಾಲದಲ್ಲಿ ೮ ಸಾವಿರ ಬ್ರಾಹ್ಮಣ ಅರ್ಚಕರು ಇದ್ದಾರೆ. ಈ ಮೂಲಕ ಬ್ಯಾನರ್ಜಿಯವರು ರಾಜ್ಯದ ಬ್ರಾಹ್ಮಣ ಮತದಾರರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಿಸಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ.