ಪಾಕಿಸ್ತಾನದಲ್ಲಿ ಫ್ರಾನ್ಸ್ ಮೂಲದ ಮಹಿಳೆಯ ಮೇಲೆ ಆಕೆಯ ಮಕ್ಕಳ ಎದುರೇ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣ
|
ಇಸ್ಲಾಮಾಬಾದ (ಪಾಕಿಸ್ತಾನ) – ಅತ್ಯಾಚರಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಗಲ್ಲಿಗೇರಿಸಬೇಕು ಅಥವಾ ನಪುಂಸಕರನ್ನಾಗಿ ಮಾಡಬೇಕು, ಇದರಿಂದ ಅಪರಾಧವನ್ನು ಮಾಡುವವರ ಮನಸ್ಸಿನಲ್ಲಿ ಒಂದು ಭಯ ನಿರ್ಮಾಣವಾಗಬಹುದು. ಹೇಗೆ ಕೊಲೆಯ ಘಟನೆಗೆ ‘ಫಸ್ಟ ಡಿಗ್ರಿ’, ‘ಸೆಕೆಂಡ್ ಡಿಗ್ರಿ’, ‘ಥರ್ಡ್ ಡಿಗ್ರಿ’ ಪದ್ದತಿಯ ಶಿಕ್ಷೆ ಇರುತ್ತದೆಯೋ, ಅದೇ ರೀತಿ ಅತ್ಯಾಚಾರ ಮಾಡುವ ಆರೋಪಿಗಳಿಗೂ ಮಾಡಬೇಕು. ಇದರಲ್ಲಿ ಫಸ್ಟ್ ಡಿಗ್ರಿಯಂತೆ ಅಪರಾಧದ ಆರೋಪಿಯನ್ನು ರಾಸಾಯನಿಕ ಪದ್ದತಿಯಿಂದ ನಪುಂಸಕರನ್ನಾಗಿ ಮಾಡಬೇಕು.(ಇಂತಹ ಪದ್ದತಿಗಾಗಿ ಆರೋಪಿಗಳ ವೃ?ಣಗಳನ್ನು ತೆಗೆದು ಕಾಮವಾಸನೆಯನ್ನು ಶಾಶ್ವತವಾಗಿ ಕುಂಠಿತ ಮಾಡಲಾಗುತ್ತದೆ.) ಅನೇಕ ದೇಶಗಳಲ್ಲಿ ಈ ರೀತಿಯಲ್ಲಿ ಮಾಡಲಾಗುತ್ತದೆ ಎಂದು ನಾನು ಓದಿದ್ದೇನೆ, ಎಂದು ಪ್ರಧಾನಿ ಇಮ್ರಾನ್ ಖಾನ್ ಇವರು ಪ್ರತಿಕ್ರಿಯಿಸಿದ್ದಾರೆ. ಲಾಹೋರ್‌ನ ಬಳಿ ಫ್ರಾನ್ಸ್ ಮೂಲದ ಮಹಿಳೆಯ ಮೇಲೆ ಆಕೆಯ ಮಕ್ಕಳ ಮುಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಅವರು ತೀವ್ರವಾಗಿ ಖಂಡಿಸಿದರು. ಈ ಮಹಿಳೆಯ ಮೇಲಿನ ಅತ್ಯಾಚಾರದ ಘಟನೆಯ ನಂತರ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Pakistan PM Imran Khan calls for 'chemical castration' of rapists https://t.co/cXG24Ukjfc pic.twitter.com/Z8kLsgOYnn
— Al Jazeera English (@AJEnglish) September 14, 2020