ಪಾಕಿಸ್ತಾನದ ಸಿಂಧ್‌ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ, ಮತಾಂತರ ಮತ್ತು ನಿಕಾಹ

ಅಪ್ರಾಪ್ತೆಯಾಗಿದ್ದರೂ ಸುಳ್ಳು ಪ್ರಮಾಣಪತ್ರಗಳ ಮೂಲಕ ಅಪ್ರಾಪ್ತೆಯಲ್ಲ ಎಂದು ತೋರಿಸಲಾಯಿತು

ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರ ಮೇಲೆ ಆಗುವ ಅತ್ಯಾಚಾರ ತಡೆಗಟ್ಟುವ ಬಗ್ಗೆ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಎಲ್ಲಿ ಹೋಗಿವೆ ?

ಖೈರಪುರ(ಪಾಕಿಸ್ತಾನ) – ಸಿಂಧ್ ಪ್ರಾಂತ್ಯದಲ್ಲಿನ ಮೊರಿ ಎಂಬಲ್ಲಿ ೯ ನೇ ತರಗತಿಯಲ್ಲಿ ಕಲಿಯುತ್ತಿರುವ ೧೪ ವರ್ಷದ ಅಪ್ರಾಪ್ತೆ ಹಿಂದೂ ಹುಡುಗಿ ಪರಶ ಕುಮಾರಿಯನ್ನು ಅಬ್ದುಲ್ ಸಬೂರ್‌ನು ಅಪಹರಿಸಿ ಬಲವಂತವಾಗಿ ಮತಾಂತರಿಸಿ ನಂತರ ಆಕೆಯೊಂದಿಗೆ ನಿಕಾಹ ಮಾಡಿರುವ ಘಟನೆ ನಡೆದಿದೆ. ಆಕೆಯ ಪಾಲಕರು ಪೊಲೀಸರಲ್ಲಿ ದೂರನ್ನು ನೊಂದಾಯಿಸಿದ್ದಾರೆ; ಆದರೆ ಅಪಹರಣಕಾರರು ಹುಡುಗಿಯ ವಯಸ್ಸನ್ನು ಹೆಚ್ಚಿಸಿ ಆಕೆ ಅಪ್ರಾಪ್ತೆಯಲ್ಲ ಎಂಬ ಸುಳ್ಳು ಪ್ರಮಾಣಪತ್ರವನ್ನು ಪೊಲೀಸರಲ್ಲಿ ನೀಡಿದರು ಇದರಿಂದ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಈ ಪ್ರಮಾಣಪತ್ರದೊಂದಿಗೆ ಆಕೆಯು ಅಬ್ದುಲ್‌ನೊಂದಿಗೆ ಸ್ವೇಚ್ಛೆಯಿಂದ ಮದುವೆಯಾಗುತ್ತಿರುವಂತೆ ತಿಳಿಸಿದ್ದಾಳೆ.