ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯ ಬಗ್ಗೆ ತಡವಾಗಿ ಪ್ರಶ್ನಿಸಿದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿ ದಂಡ

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ನಡುವಿನ ಖಟ್ಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಅಕ್ಟೋಬರ್ ೬ ರಂದು ನಡೆದ ಆಲಿಕೆಯ ಸಮಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯನ್ನು ಅವರು ತಡವಾಗಿ ಪ್ರಶ್ನಿಸಿದ್ದರಿಂದ ಈ ದಂಡವನ್ನು ವಿಧಿಸಲಾಗಿದೆ.

ಇಸ್ಲಾಂ ಧರ್ಮದ ಹದೀಸ್‌ನ ಸಾಲುಗಳನ್ನು ಹಾಡಿನಲ್ಲಿ ಬಳಸಿದ್ದಕ್ಕಾಗಿ ಪಾಪ್ ಗಾಯಕಿ ರಿಹಾನಾ ಇವಳಿಂದ ಕ್ಷಮೆಯಾಚನೆ

ಪ್ರಸಿದ್ಧ ಪಾಪ್ ಗಾಯಕಿ ರಿಹಾನಾಳು ತನ್ನ ಕಾರ್ಯಕ್ರಮವೊಂದರಲ್ಲಿ ಹಾಡಿದ ಹಾಡಿನಲ್ಲಿ ಇಸ್ಲಾಂ ಧರ್ಮದ ಅವಮಾನ ಆಗಿದ್ದ ಬಗ್ಗೆ ಕ್ಷಮೆಯಾಚಿಸಿದ್ದಾಳೆ. ಈ ಹಾಡಿನಲ್ಲಿ, ರಿಹಾನಾಳು ಇಸ್ಲಾಂ ಧರ್ಮದ ಹದೀಸ್‌ನ ಕೆಲವು ಸಾಲುಗಳನ್ನು ಬಳಸಿದ್ದಳು.

ಬಂಗಾಲದಲ್ಲಿ ಕಟ್ಟರ ವಹಾಬಿ ಸಿದ್ಧಾಂತವನ್ನು ಹಬ್ಬಿಸಿ ಮುಸಲ್ಮಾನ ಯುವಕರನ್ನು ಜಿಹಾದ್‌ಗಾಗಿ ಸಿದ್ಧಪಡಿಸುವ ಸಂಚು

ಕಳೆದ ತಿಂಗಳು ರಾಜ್ಯದ ಮುರ್ಶಿದಾಬಾದ್‌ನಿಂದ ಏಳು ಅಲ್ ಕಾಯಿದಾ ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ನಂತರ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು) ರಾಜ್ಯದಲ್ಲಿ ಹೆಚ್ಚಿನ ತನಿಖೆ ನಡೆಸಿದೆ. ಅದಕ್ಕನುಸಾರ ಬಂಗಾಲದ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನ ಯುವಕರನ್ನು ಜಿಹಾದಿ ಸಿದ್ಧಾಂತದತ್ತ ಸೆಳೆಯಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಅವರನ್ನು ಜಿಹಾದ್‌ಗಾಗಿ ಸಿದ್ಧ ಪಡಿಸಲು ಸಂಚು ರೂಪಿಸಲಾಗುತ್ತಿದೆ.

ಕೇರಳದಲ್ಲಿ ಚೈಲ್ಡ್ ಪೋರ್ನೊಗ್ರಾಫಿಯ ಪ್ರಸಾರ ಮಾಡಿದ ಕಮ್ಯುನಿಸ್ಟ ಸಂಘಟನೆಯ ನಾಯಕರೊಂದಿಗೆ ೪೧ ಮಂದಿಯನ್ನು ಬಂಧಿಸಲಾಗಿದೆ

ಕೇರಳದಲ್ಲಿ ‘ಚೈಲ್ಡ್ ಪೋರ್ನೊಗ್ರಾಫಿ’ಯ (ಸಣ್ಣ ಮಕ್ಕಳ ಅಶ್ಲೀಲ ವಿಡಿಯೋ, ಚಿತ್ರಗಳು) ಪ್ರಸಾರ ಮಾಡುವ ಘಟನೆಗಳು ಹೆಚ್ಚಾಗಿವೆ. ಈ ಪ್ರಕರಣದಲ್ಲಿ ಪೊಲೀಸರು ‘ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ’ದ ಮುಖಂಡ ಇಸಾ ರಿಯಾಜ್ ಸೇರಿದಂತೆ ೪೧ ಜನರನ್ನು ಈವರೆಗೆ ಬಂಧಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಲ್ವರ ಬಂಧನ

ಹಾಥರಸ್‌ನಲ್ಲಿ ೧೯ ವರ್ಷದ ಬಾಲಕಿಯ ಮೇಲಿನ ಕಥಿತ ಸಾಮೂಹಿಕ ಅತ್ಯಾಚಾರ ಮತ್ತು ತದನಂತರ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಹಾಥರಸ್‌ನಲ್ಲಿ ಗಲಭೆ ನಡೆಸುವ ಸಂಚು ರೂಪಿಸಿದ ಪ್ರಕರಣದಲ್ಲಿ ಪೊಲೀಸರು ಅತೀಕ್ ಉರ್ ರೆಹಮಾನ್, ಸಿದ್ದಿಕಿ, ಮಸೂದ್ ಅಹಮದ ಮತ್ತು ಆಲಂ ಈ ನಾಲ್ವರನ್ನು ಬಂಧಿಸಿದ್ದಾರೆ.

ಯಾವುದೇ ವ್ಯಕ್ತಿ ಅಥವಾ ಸಮೂಹವು ಸಾರ್ವಜನಿಕ ಸ್ಥಳಗಳನ್ನು ಅಡ್ಡಗಟ್ಟಲು ಸಾಧ್ಯವಿಲ್ಲ ! – ಛೀಮಾರಿ ಹಾಕಿದ ಸರ್ವೋಚ್ಚ ನ್ಯಾಯಾಲಯ

ಯಾವುದೇ ವ್ಯಕ್ತಿ ಅಥವಾ ಸಮೂಹವು ಸಾರ್ವಜನಿಕ ಸ್ಥಳಗಳನ್ನು ಅಡ್ಡಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಥಳವನ್ನು ಅನಿರ್ದಿಷ್ಠ ಕಾಲವಧಿಯ ತನಕ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಪ್ರತಿಭಟನೆ ಅಥವಾ ಆಂದೋಲನ ಮಾಡುವ ಅಧಿಕಾರವು ಒಂದು ಬೇರೆಯೇ ವಿಷಯವಾಗಿದೆ; ಆದರೆ ಬ್ರಿಟಿಷರ ರಾಜ್ಯದಲ್ಲಿ ಯಾವ ರೀತಿ ವಿರೋಧಿಸಲಾಗುತ್ತಿತ್ತೋ ಆ ವಿಧದಲ್ಲಿ ಈಗ ಮಾಡುವುದು ಯೋಗ್ಯವಲ್ಲ,

ಅಲ್ವರ (ರಾಜಸ್ಥಾನ) ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಇಲ್ಲಿ ಥಾನಾಗಾಜಿ ಪ್ರದೇಶದಲ್ಲಿ ೨೬ ಎಪ್ರಿಲ್ ೨೦೧೯ರಂದು ಓರ್ವ ವಿವಾಹಿತೆಯ ಮೇಲೆ ಆಕೆಯ ಗಂಡನ ಮುಂದೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಅಪ್ರಾಪ್ತ ಹುಡುಗನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಹಾಥರಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚು ! – ತನಿಖಾ ಸಂಸ್ಥೆಗಳಿಂದ ಸರಕಾರಕ್ಕೆ ವರದಿಗಳನ್ನು ಸಲ್ಲಿಕೆ

ರಾಜ್ಯದ ಹಾಥರಸದಲ್ಲಿ ೧೯ ವರ್ಷದ ಯುವತಿಯ ಮೇಲೆ ತಥಾಕಥಿತ ಅತ್ಯಾಚಾರ ಹಾಗೂ ಥಳಿಸಿದ ನಂತರ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ ಪ್ರಕರಣದಿಂದ ರಾಜ್ಯದಲ್ಲಿ ಕೋಮು ಗಲಭೆಗಳನ್ನು ಭುಗಿಲೆಬ್ಬಿಸುವ ಸಂಚು ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಮಸೀದಿಗಾಗಿ ೨೧ ಸಾವಿರ ರೂಪಾಯಿಗಳ ಮೊದಲ ದೇಣಿಗೆ ನೀಡಿದ ಹಿಂದೂ ವ್ಯಕ್ತಿ

ಮಸೀದಿಯನ್ನು ಕಟ್ಟಲು ಲಖನೌ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ರೋಹಿತ ಶ್ರೀವಾಸ್ತವ ಅವರು ೨೧ ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಜಮೀನಿನಲ್ಲಿ ಮಸೀದಿಯ ಜೊತೆಗೆ ಆಸ್ಪತ್ರೆ, ಸಾರ್ವಜನಿಕ ಪಾಕಶಾಲೆ, ಗ್ರಂಥಾಲಯ, ವಸ್ತು ಸಂಗ್ರಹಾಲಯ ಇತ್ಯಾದಿಗಳನ್ನು ನಿರ್ಮಿಸಲಾಗುವುದು.

ಬಂಗಾಲದ ಭಾಜಪ ನಾಯಕನ ಕೊಲೆ ಪ್ರಕರಣದಲ್ಲಿ ಇಬ್ಬರು ಮತಾಂಧರ ಬಂಧನ

ರಾಜ್ಯದ ೨೪ ಪರಗಣಾದಲ್ಲಿಯ ಟಿಟಗಡ್ ಪೊಲೀಸ್ ಠಾಣೆಯ ಎದುರು ಭಾಜಪದ ನಾಯಕ ಮನೀಶ್ ಶುಕ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಖುರ್ರ್ರಮ್ ಮತ್ತು ಗುಲಾಬ್ ಶೇಖ್ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.