ಶಾಹಿನ್‌ಬಾಗ್‌ನಲ್ಲಿ ಮತಾಂಧರಿಂದ ‘ಸಿಎಎ’ ವಿರುದ್ಧ ಆಂದೋಲನ
ನ್ಯಾಯಾಲಯಕ್ಕೆ ಅನಿಸಿದ ಹಾಗೆ ಆಡಳಿತ ಹಾಗೂ ಪೊಲೀಸರಿಗೆ ಏಕೆ ಅನಿಸುವುದಿಲ್ಲ ? ಅವರು ಅದೇ ಸಮಯದಲ್ಲಿ ಅನಧಿಕೃತವಾಗಿ ಆಂದೋಲನಕಾರರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ ? ನ್ಯಾಯಾಲಯವು ಆಂದೋಲನಕಾರರ ಹಾಗೆ ಕರ್ತವ್ಯವನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸದೇ ಜನರು ಅನವಶ್ಯಕ ತೊಂದರೆ ಅನುಭವಿಸುವಂತೆ ಮಾಡಿದ ಪೊಲೀಸ್ ಹಾಗೂ ಆಡಳಿತ ವರ್ಗದ ಮೇಲೆಯೂ ಕ್ರಮ ಕೈಗೊಳ್ಳಬೇಕು !
ನವ ದೆಹಲಿ – ಯಾವುದೇ ವ್ಯಕ್ತಿ ಅಥವಾ ಸಮೂಹವು ಸಾರ್ವಜನಿಕ ಸ್ಥಳಗಳನ್ನು ಅಡ್ಡಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಥಳವನ್ನು ಅನಿರ್ದಿಷ್ಠ ಕಾಲವಧಿಯ ತನಕ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಪ್ರತಿಭಟನೆ ಅಥವಾ ಆಂದೋಲನ ಮಾಡುವ ಅಧಿಕಾರವು ಒಂದು ಬೇರೆಯೇ ವಿಷಯವಾಗಿದೆ; ಆದರೆ ಬ್ರಿಟಿಷರ ರಾಜ್ಯದಲ್ಲಿ ಯಾವ ರೀತಿ ವಿರೋಧಿಸಲಾಗುತ್ತಿತ್ತೋ ಆ ವಿಧದಲ್ಲಿ ಈಗ ಮಾಡುವುದು ಯೋಗ್ಯವಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ಇಲ್ಲಿಯ ಶಾಹಿನ್ ಬಾಗನಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ’ಯ (‘ಸಿಎಎ’ಯ) ವಿರುದ್ಧ ಮತಾಂಧರು ಮಾಡಿದ ಆಂದೋಲನಕ್ಕಾಗಿ ಅವರಿಗೆ ಛೀಮಾರಿ ಹಾಕಿದೆ.
"Public Places Can't Be Occupied Indefinitely": Top Court On Shaheen Bagh, NDTV's @SukirtiDwivedi reports
Read more here : https://t.co/k26JM0dnmh pic.twitter.com/gUdApJxdp1
— NDTV (@ndtv) October 7, 2020
ನ್ಯಾಯಾಲಯವು ಇದರ ಬಗ್ಗೆ ಮುಂದೆ ಹೀಗೆ ಹೇಳಿದೆ.
೧. ವಿರೋಧವನ್ನು ಪ್ರದರ್ಶಿಸಲು ಸಾರ್ವಜನಿಕ ಸ್ಥಳಗಳನ್ನು ಅಥವಾ ರಸ್ತೆಯನ್ನು ಅಡ್ಡಗಟ್ಟಲು ಸಾಧ್ಯವಿಲ್ಲ. ಅಧಿಕಾರಿಗಳು ಈ ರೀತಿಯ ಪರಿಸ್ಥಿತಿ ಉದ್ಭವಿಸಿದಾಗ ತಕ್ಷಣ ರಸ್ತೆ, ಸಾರ್ವಜನಿಕ ಸ್ಥಳಗಳನ್ನು ಕೂಡಲೇ ತೆರವುಗೊಳಿಸುವ ಕಾರ್ಯಾಚರಣೆ ನಡೆಸಬೇಕು. ಯಾವುದೇ ವಿರೋಧ ಅಥವಾ ಆಂದೋಲನಗಳನ್ನು ನಿಗದಿ ಪಡಿಸಿದ ಸ್ಥಳದಲ್ಲಿಯೇ ನಡೆಸಬೇಕು. ಆಂದೋಲನ ಮಾಡುವವರು ಸಾರ್ವಜನಿಕ ಸ್ಥಳಗಳಲ್ಲಿ ಮಾಡಿದ ವಿರೋಧ ಅಥವಾ ಸ್ಥಳವನ್ನು ಅಡ್ಡಗಟ್ಟುವುದು ಇದು ಜನತೆಯ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ ಹಾಗೂ ಇದಕ್ಕೆ ಕಾನೂನು ಅನುಮತಿ ನೀಡುವುದಿಲ್ಲ.
೨. ಶಾಹಿನ್ ಬಾಗನಲ್ಲಿ ಮಧ್ಯಸ್ಥಿಕೆಯ ಪ್ರಯತ್ನಗಳು ಯಶಸ್ವಿಯಾಗಲಿಲ್ಲ; ಆದರೆ ನಮಗೆ ಅದರ ಬಗ್ಗೆ ಪಶ್ಚಾತಾಪ ಇಲ್ಲ. ಯಾವುದೇ ಆಂದೋಲನವು ನಿರ್ಧರಿಸಿದ ಸ್ಥಳದಲ್ಲೇ ಆಗಬೇಕು. ಭಾರತದ ಸಂವಿಧಾನದಲ್ಲಿ ವಿರೋಧವನ್ನು ವ್ಯಕ್ತಪಡಿಸುವ ಅಧಿಕಾರವನ್ನು ನೀಡಲಾಗಿದೆ. ಆದರೆ ಅದರೊಂದಿಗೆ ಕರ್ತವ್ಯದ ಪಾಲನೆಯನ್ನೂ ಮಾಡಬೇಕು.