|
|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹಾಥರಸ್‌ನಲ್ಲಿ ೧೯ ವರ್ಷದ ಬಾಲಕಿಯ ಮೇಲಿನ ಕಥಿತ ಸಾಮೂಹಿಕ ಅತ್ಯಾಚಾರ ಮತ್ತು ತದನಂತರ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಹಾಥರಸ್‌ನಲ್ಲಿ ಗಲಭೆ ನಡೆಸುವ ಸಂಚು ರೂಪಿಸಿದ ಪ್ರಕರಣದಲ್ಲಿ ಪೊಲೀಸರು ಅತೀಕ್ ಉರ್ ರೆಹಮಾನ್, ಸಿದ್ದಿಕಿ, ಮಸೂದ್ ಅಹಮದ ಮತ್ತು ಆಲಂ ಈ ನಾಲ್ವರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬನು ಪತ್ರಕರ್ತನಾಗಿದ್ದಾನೆ. ಈ ನಾಲ್ವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಹಾಗೂ ಅದರ ಅಂಗಸಂಸ್ಥೆಯಾದ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದೊಂದಿಗೆ ಸಂಬಂಧ ಹೊಂದಿದ್ದಾರೆ.
(ಸೌಜನ್ಯ : Republic World)
೧. ಪೊಲೀಸರು ನೀಡಿದ ಮಾಹಿತಿಗನುಸಾರ, ಕೆಲವು ಸಂದೇಹಾಸ್ಪದ ವ್ಯಕ್ತಿಗಳು ದೆಹಲಿಯಿಂದ ಹಾಥರಸ್‌ಗೆ ಹೋಗಿದ್ದರು. ಟೋಲ್ ನಾಕಾದಲ್ಲಿ ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಅಡುವಾಗ ಈ ನಾಲ್ವರು ಯುವಕರನ್ನು ಅವರ ಅನುಮಾನಾಸ್ಪದ ಚಲನವಲನಗಳಿಂದ ಅವರನ್ನು ವಶಕ್ಕೆ ಪಡೆದುಕೊಂಡು ಅವರ ವಿಚಾರಣೆ ಮಾಡಲಾಯಿತು. ನಂತರ ಅವರನ್ನು ಬಂಧಿಸಲಾಯಿತು. ಅವರಿಂದ ಸಂಚಾರ ವಾಣಿ, ಲ್ಯಾಪ್‌ಟಾಪ್‌ಗಳು ಮತ್ತು ಇತರ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
೨. ಈ ನಾಲ್ವರು ಯುವಕರಲ್ಲಿ ಒಬ್ಬರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದಾರೆ. ಆತ ಕೇರಳ ಮೂಲದ ಒಂದು ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದಾನೆ. ಪಿ.ಎಫ್.ಐ. ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಆತನಿಗೆ ಈ ಹಿಂದೆ ಸಹ ಕಾನೂನು ನೋಟಿಸ್ ಕಳುಹಿಸಲಾಗಿತ್ತು ಎಂದೂ ಹೇಳಲಾಗುತ್ತಿದೆ.
೩. ಕೇರಳದ ‘ಯುನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ ಅಸೋಸಿಯೇಶನ್’ ಆ ಪತ್ರಕರ್ತನನ್ನು ಬಿಡುಗಡೆ ಮಾಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪತ್ರ ಬರೆದಿದೆ. ಅದರಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ವರದಿ ಮಾಡಲು ಹಾಥರಸ್‌ಗೆ ಹೋಗಿದ್ದನು ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.