ಹಿಂದೂ ಸಂತರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದಾಗ ಅವರಗೆ ಅಗೌರವ ತೋರುವ ಕಮ್ಯುನಿಸ್ಟರ ಚರಿತ್ರೆ ಹೇಗಿದೆ ನೋಡಿ ! ಅವರ ಸ್ನೇಹಿತರಾದ ಜಾತ್ಯತೀತವಾದಿಗಳು ಮತ್ತು ಪ್ರಗತಿ (ಅಧೋಗತಿ) ಪರರು ಇದರ ಬಗ್ಗೆ ಮೌನವಾಗಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ !
ತಿರುವನಂತಪುರಂ (ಕೇರಳ) – ಕೇರಳದಲ್ಲಿ ‘ಚೈಲ್ಡ್ ಪೋರ್ನೊಗ್ರಾಫಿ’ಯ (ಸಣ್ಣ ಮಕ್ಕಳ ಅಶ್ಲೀಲ ವಿಡಿಯೋ, ಚಿತ್ರಗಳು) ಪ್ರಸಾರ ಮಾಡುವ ಘಟನೆಗಳು ಹೆಚ್ಚಾಗಿವೆ. ಈ ಪ್ರಕರಣದಲ್ಲಿ ಪೊಲೀಸರು ‘ಡೆಮಾಕ್ರಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ’ದ ಮುಖಂಡ ಇಸಾ ರಿಯಾಜ್ ಸೇರಿದಂತೆ ೪೧ ಜನರನ್ನು ಈವರೆಗೆ ಬಂಧಿಸಿದ್ದಾರೆ. ಇದರಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಕೆಲವರೂ ಒಳಗೊಂಡಿದ್ದಾರೆ. ಅವರಿಂದ ಈ ಸಂದರ್ಭದ ವಸ್ತುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಆರೋಪಿಗಳು ಸಣ್ಣ ಮಕ್ಕಳ ನಗ್ನ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಿರುವ ಆರೋಪವಿದೆ. ಈ ಮಕ್ಕಳು ೬ ರಿಂದ ೧೫ ವರ್ಷದೊಳಗಿನವರಾಗಿದ್ದಾರೆ. ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಇವರು, ರಾಜ್ಯದಲ್ಲಿ ಚೈಲ್ಡ್ ಪೋರ್ನೋಗ್ರಾಫಿಯ ೨೬೮ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. ‘ಸಂಚಾರ ನಿಷೇಧದ ಸಮಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ’ ಎಂದು ಅವರು ಹೇಳಿದರು.
Child pornography cases spike in Kerala, cyber cell arrest 41 people in a major crackdown https://t.co/rinwOiW8g3
— OpIndia.com (@OpIndia_com) October 6, 2020
ಭಾರತದಲ್ಲಿ ಚೈಲ್ಡ್ ಪೋರ್ನೊಗ್ರಾಫಿ ಸಂಬಂಧಿಸಿದ ಚಿತ್ರಗಳು, ವೀಡಿಯೊಗಳು ಮತ್ತು ಇತರ ವಸ್ತುಗಳನ್ನು ವೀಕ್ಷಿಸುವುದು ಮತ್ತು ಅದನ್ನು ಇತರರಿಗೆ ನೀಡುವುದು ಅಪರಾಧವಾಗಿದೆ. ಇಂತಹವರು ಐದು ವರ್ಷಗಳವರೆಗೆ ಸೆರೆಮನೆ ಶಿಕ್ಷೆ ಹಾಗೂ ೧೦ ಲಕ್ಷ ರೂಪಾಯಿ ವರೆಗೆ ದಂಡ ತೆತ್ತಬೇಕಾಗಬಹುದು.