ಅಲ್ವರ (ರಾಜಸ್ಥಾನ) ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಅಪರಾಧವನ್ನು ದಾಖಲಿಸುವಲ್ಲಿ ಪೊಲೀಸರ ಕಡೆಯಿಂದ ನಿರ್ಲಕ್ಷಿಸಲಾಗಿತ್ತು !

  • ಅಂತಹವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಶಿಕ್ಷೆ ನೀಡುವುದೇ ಸೂಕ್ತವೆಂದು ಜನರಿಗೆ ಅನಿಸುತ್ತದೆ !
  • ನಿರ್ಲಕ್ಷ್ಯ ತೋರಿದ ಪೊಲೀಸರನ್ನು ಸಹ ಸೆರೆಮನೆಗೆ ಅಟ್ಟಬೇಕು !

ಅಲ್ವರ (ರಾಜಸ್ಥಾನ) – ಇಲ್ಲಿ ಥಾನಾಗಾಜಿ ಪ್ರದೇಶದಲ್ಲಿ ೨೬ ಎಪ್ರಿಲ್ ೨೦೧೯ರಂದು ಓರ್ವ ವಿವಾಹಿತೆಯ ಮೇಲೆ ಆಕೆಯ ಗಂಡನ ಮುಂದೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಅಪ್ರಾಪ್ತ ಹುಡುಗನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಛೋಟೆ ಲಾಲ್ (೨೨ ವರ್ಷ), ಹನ್ಸ್ ಲಾಲ್ ಗುರ್ಜರ್ (೨೨ ವರ್ಷ), ಅಶೋಕ್ ಕುಮಾರ್ ಗುರ್ಜರ್ (೨೦ ವರ್ಷ), ಇಂದ್ರಜ್ ಸಿಂಗ್ ಗುರ್ಜರ್ (೨೨ ವರ್ಷ) ಮತ್ತು ಅಪ್ರಾಪ್ತ ಬಾಲಕನಿಗೆ ಶಿಕ್ಷೆ ವಿಧಿಸಲಾಗಿದೆ. (೨೦ ರಿಂದ ೨೨ ವರ್ಷ ವಯಸ್ಸಿನವರು ಮತ್ತು ಅಪ್ರಾಪ್ತ ವಯಸ್ಸಿನವನು ಅತ್ಯಾಚಾರದ ಅಪರಾಧವನ್ನು ಮಾಡುತ್ತಾರೆ, ಇದರಿಂದ ಈಗಿನ ಪೀಳಿಗೆ ಯಾವ ಹಂತಕ್ಕೆ ಹೋಗಿದೆ ಎಂಬುದು ತೋರಿಸುತ್ತದೆ. ಅವರಿಗೆ ಯೋಗ್ಯವಾದ ಸಂಸ್ಕಾರ ನೀಡಲು ಸಾಧ್ಯವಾಗದ ಇಲ್ಲಿಯವರೆಗಿನ ಎಲ್ಲ ಆಡಳಿತಗಾರರು ಇದಕ್ಕೆ ಹೊಣೆಗಾರರು ! – ಸಂಪಾದಕರು) ಈ ಅಪರಾಧಿಗಳು ಅತ್ಯಾಚಾರದ ಚಿತ್ರೀಕರಣ ಮಾಡಿ ಅದರ ವೀಡಿಯೋವನ್ನು ಪ್ರಸಾರ ಮಾಡಿದ್ದರು. ತರುವಾಯ ಅವರ ವಿರುದ್ಧ ಜನರ ಆಕ್ರೋಶ ನಿರ್ಮಾಣವಾದಾಗ ಅವರ ಮೇಲೆ ಅಪರಾಧವನ್ನು ದಾಖಲಿಸಿ ಕಾರ್ಯಾಚರಣೆ ಮಾಡಲಾಯಿತು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಅವರಲ್ಲಿ ದೂರು ದಾಖಲಾದ ನಂತರವೂ ಅವರು ಅಪರಾಧವನ್ನು ನೋಂದಾಯಿಸಿರಲಿಲ್ಲ. ಅದೇರೀತಿ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಂಡ ನಂತರ ಅವರನ್ನು ವರ್ಗಾಯಿಸಲಾಗಿತ್ತು. (ಇಂತಹವರನ್ನು ಬೇರೆಡೆಗೆ ವರ್ಗಾಯಿಸುವುದು ಅಂದರೆ ಬೇರೆ ಸ್ಥಳಕ್ಕೆ ಕಳುಹಿಸುವುದು ಮತ್ತು ಅಲ್ಲಿಯೂ ಅದೇ ರೀತಿ ಕೃತ್ಯ ಮಾಡಲು ಅವರಿಗೆ ಅವಕಾಶ ನೀಡುವುದು ! ಇಂತಹವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)
ಈ ಮಹಿಳೆ ತನ್ನ ಗಂಡನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ, ಆರೋಪಿ ಯುವಕರು ಅವರನ್ನು ತಡೆದು ಥಳಿಸಿದರು, ಅದೇರೀತಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಅವಳು ಪ್ರತಿಭಟಿಸಿದಾಗ ಅವರು ಗಂಡನನ್ನು ಹೊಡೆಯಲು ಆರಂಭಿಸಿದರು. ತನ್ನ ಗಂಡನನ್ನು ರಕ್ಷಿಸಲು ಅವಳು ಪ್ರತಿರೋಧವನ್ನು ನಿಲ್ಲಿಸಿದ ನಂತರ ಅಪರಾಧಿಗಳು ಅವಳ ಸಾಮೂಹಿಕ ಅತ್ಯಾಚಾರ ಮಾಡಿದರು.