ತರುಣಿಯ ಮೇಲೆ ಬಲಾತ್ಕಾರ ಮಾಡಿದ ಕ್ರೈಸ್ತ ಪಾದ್ರಿಯ ಮೇಲೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ !

ಸಿಬಿಐನ ಮಾಜಿ ಸಂಚಾಲಕರಾದ ಎಮ್. ನಾಗೇಶ್ವರ ರಾವ್ ಇವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಇವರಿಗೆ ಪತ್ರ ಬರೆದು ತಿರುಪತಿಯ ಬಡಕುಟುಂಬದ ಓರ್ವ ೨೦ ವರ್ಷದ ತರುಣಿಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಲ್ಲೆಮ್ ದೇವಸಹಯಮ್ ಎಂಬ ಕ್ರೈಸ್ತ ಪಾದ್ರಿಯ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿದ್ದಾರೆ.

ಭಾರತೀಯ ಸೈನ್ಯವು ಯುದ್ಧಕ್ಕಾಗಿ ಸದಾ ಸಿದ್ಧ ! ಅಮಿತ ಶಹಾ

ಭಾರತವು ತನ್ನ ಒಂದೊಂದು ಇಂಚಿನ ಭೂಮಿಗಾಗಿ ಜಾಗೃತವಾಗಿದೆ. ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಸೈನ್ಯವು ಯುದ್ಧಕ್ಕಾಗಿ ಸಿದ್ಧವಿದೆ. ಸೈನ್ಯವು ಯುದ್ಧಕ್ಕಾಗಿ ಸಜ್ಜಾಗಿರಿಸುವುದರ ಹಿಂದಿನ ಉದ್ದೇಶವೆಂದರೆ, ಯಾವುದೇ ಸ್ವರೂಪದ ಆಕ್ರಮಣಕ್ಕಾಗಿ ಸಿದ್ಧರಿರುವುದು. ನಾನು ಇದನ್ನು ಯಾವುದೇ ವಿಶೇಷ ಪ್ರಸಂಗದ ಸಂದರ್ಭದಲ್ಲಿ ಹೇಳುತ್ತಿಲ್ಲ; ಆದರೆ ಭಾರತದ ಸಂರಕ್ಷಣೆಗಾಗಿ ಸೈನ್ಯವು ಯಾವಾಗಲೂ ಸಿದ್ಧವಿದೆ.

ನಿಮಗೆ ಧೈರ್ಯವಿದ್ದರೆ, ಬಿಹಾರದ ಚುನಾವಣಾ ಘೋಷಣಾಪತ್ರದಲ್ಲಿ ‘೩೭೦’ ಅನ್ನು ಉಲ್ಲೇಖಿಸಿ ! – ಕಾಂಗ್ರೆಸ್‌ಗೆ ಬಿಜೆಪಿಯಿಂದ ಸವಾಲು

ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಇವರು ಕಾಂಗ್ರೆಸ್‌ಗೆ ನಿಮಗೆ ಧೈರ್ಯವಿದ್ದರೆ, ಬಿಹಾರದ ಚುನಾವಣಾ ಘೋಷಣಾಪತ್ರದಲ್ಲಿ ‘೩೭೦’ ಅನ್ನು ಉಲ್ಲೇಖಿಸಬೇಕು ಎಂದು ಸವಾಲನ್ನು ನೀಡಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವ ಬೇಡಿಕೆಯನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಅದರ ನಂತರ ಜಾವಡೇಕರ ಈ ಸವಾಲನ್ನು ನೀಡಿದ್ದಾರೆ.

ಶ್ರೀಕೃಷ್ಣಜನ್ಮಭೂಮಿಯ ಒಂದಿಂಚು ಭೂಮಿಯನ್ನೂ ಅಕ್ರಮ ಮಸೀದಿಗಾಗಿ ಬಿಡುವುದಿಲ್ಲ ! – ನ್ಯಾಯವಾದಿ ವಿಷ್ಣುಶಂಕರ ಜೈನ್

ಶ್ರೀಕೃಷ್ಣಜನ್ಮಭೂಮಿ ಪ್ರಕರಣದಲ್ಲಿ 12.10.1968 ರಲ್ಲಿ ಏನು ರಾಜಿ ಮಾಡಿಕೊಳ್ಳಲಾಗಿತ್ತೋ, ಅದರ ಮೇಲೆ ಶ್ರೀಕೃಷ್ಣಜನ್ಮಭೂಮಿ ಟ್ರಸ್ಟ್‌ನ ಹಸ್ತಾಕ್ಷರ ಇರಲಿಲ್ಲ, ಆದ್ದರಿಂದ ಆ ಒಪ್ಪಂದ ಅಮಾನ್ಯರವಾಗಿದೆ. ಆದ್ದರಿಂದ ಜಿಲ್ಲಾ ನ್ಯಾಯಾಧೀಶರು ತೀರ್ಪಿನಲ್ಲಿ, ಭಗವಾನ ಹಾಗೂ ಭಕ್ತರು ಇಬ್ಬರೂ ಈ ಪ್ರಕರಣದ ಬಗ್ಗೆ ಖಟ್ಲೆಯನ್ನು ಸಲ್ಲಿಸಬಹುದು.

೭ ತಿಂಗಳ ನಂತರ ಶಬರಿಮಲೆ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದೆ : ಒಂದು ದಿನದಲ್ಲಿ ೨೫೦ ಭಕ್ತರಿಗೆ ಮಾತ್ರ ಪ್ರವೇಶ

೭ ತಿಂಗಳ ನಂತರ ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಯಿತು. ೫ ದಿನಗಳ ಮಾಸಿಕ ಪೂಜೆಗೆ ಈ ದೇವಸ್ಥಾನವನ್ನು ತೆರೆಯಲಾಗಿದ್ದು, ಮಲಯಾಳಂ ತಿಂಗಳು ತುಲಮ್‌ನ ನಿಮಿತ್ತ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

‘ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಸಂಘ ಪರಿವಾರವು ಹಿಂಸಾತ್ಮಕ ಅಭಿಯಾನವನ್ನು ಪ್ರಾರಂಭಿಸಬಹುದು !’(ಅಂತೆ) – ಅಸದುದ್ದೀನ್ ಒವೈಸಿ

ಯಾವ ವಿಷಯದ ಬಗ್ಗೆ ಭಯವಾಗುತ್ತಿತ್ತೋ, ಅದೇ ಆಗುತ್ತಿದೆ. ಬಾಬರಿಗೆ ಸಂಬಂಧಿಸಿದ ನಿರ್ಣಯದಿಂದ ಸಂಘ ಪರಿವಾರದ ಜನರ ಉದ್ದೇಶವು ಇನ್ನಷ್ಟು ಬಲವಾಗಿದೆ. ನೆನಪಿಡಿ, ನೀವು ಮತ್ತು ನಾನು ಗಾಢ ನಿದ್ರೆಯಲ್ಲಿದ್ದರೆ, ಕೆಲವೇ ವರ್ಷಗಳಲ್ಲಿ ಸಂಘವು ಈ ಬಗ್ಗೆ ಹಿಂಸಾತ್ಮಕ ಅಭಿಯಾನವನ್ನು ಪ್ರಾರಂಭಿಸಬಹುದು

‘ಡಿಡಿ ನ್ಯಾಷನಲ್’ ನಲ್ಲಿ ಅಯೋಧ್ಯೆಯಿಂದ ‘ರಾಮ್‌ಲೀಲಾ’ ದ ನೇರ ಪ್ರಸಾರ

ಅಯೋಧ್ಯೆಯಲ್ಲಿ ‘ರಾಮಲೀಲಾ’ದ ಕಾರ್ಯಕ್ರಮದ ನೇರ ಪ್ರಸಾರವು ಅಕ್ಟೋಬರ್ ೧೭ ರಿಂದ ಅಕ್ಟೋಬರ್ ೨೫ ರವರೆಗೆ ಡಿಡಿ ನ್ಯಾಷನಲ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಇದು ಸಂಜೆ ೭ ರಿಂದ ರಾತ್ರಿ ೧೦ ರವರೆಗೆ ನೇರ ಪ್ರಸಾರ ವಾಗುತ್ತಿದೆ.

ಶ್ರೀ ಲಕ್ಷ್ಮೀಯ ಅವಮಾನ ಮಾಡುವ ಹಾಗೂ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡುವ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವನ್ನು ನಿಷೇಧಿಸಿ ! – ಹಿಂದೂ ಜನಜಾಗೃತಿ ಸಮಿತಿ

ದೀಪಾವಳಿಯ ಹಿನ್ನೆಲೆಯಲ್ಲಿ ನಟ ಅಕ್ಷಯ ಕುಮಾರ ಇವರ ‘ಲಕ್ಷ್ಮೀ ಬಾಂಬ್’ ಈ ಚಲನಚಿತ್ರವು ನವೆಂಬರ್ 9 ರಂದು ಪ್ರದರ್ಶನಗೊಳ್ಳಲಿದೆ. ದೀಪಾವಳಿಯ ಹಿನ್ನಲೆಯಲ್ಲಿ ಇದರ ಹೆಸರನ್ನು ಉದ್ದೇಶಪೂರ್ವಕವಾಗಿ ‘ಲಕ್ಷ್ಮೀ ಬಾಂಬ್’ ಎಂದು ಇಡಲಾಗಿದೆ.

ಶ್ರೀಕೃಷ್ಣ ವಿರಾಜಮಾನ ಅವರ ಅರ್ಜಿ ಮಥುರಾ ಜಿಲ್ಲಾ ನ್ಯಾಯಾಲಯದಿಂದ ಸ್ವೀಕಾರ

ಇಲ್ಲಿಯ ಜಿಲ್ಲಾ ನ್ಯಾಯಾಲಯವು ಶ್ರೀಕೃಷ್ಣ ಜನ್ಮಸ್ಥಳದ ಮೇಲೆ ಮಸೀದಿಯಿಂದ ಅತಿಕ್ರಮಣ ಆಗಿರುವ ಬಗ್ಗೆ ಶ್ರೀಕೃಷ್ಣ ವಿರಾಜಮಾನ ಅವರ ಅರ್ಜಿಯನ್ನು ಅಂಗೀಕರಿಸಿದೆ. ಅದೇರೀತಿ ಎಲ್ಲಾ ವಿರೋಧೀ ಪಕ್ಷಕಾರರಿಗೆ ತಮ್ಮ ಪರವನ್ನು ಮಂಡಿಸುವಂತೆ ಕೋರಿ ನೋಟಿಸ್ ಕಳುಹಿಸಿದೆ.

ತೆಲಂಗಾಣದಲ್ಲಿ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಲು ತೆರಳಿದ್ದ ಶಾಸಕರ ಮೇಲೆ ಆಕ್ರೋಶಗೊಂಡ ನಾಗರಿಕರಿಂದ ಚಪ್ಪಲಿ ಎಸೆತ !

ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಲು ತೆರಳಿದ್ದ ಇಬ್ರಾಹಿಂಪಟ್ಟಣಂ ಶಾಸಕ ಮಚಿರೆಡ್ಡಿ ಕಿಶನ್ ರೆಡ್ಡಿ ಹಾಗೂ ತೆಲಂಗಾಣ ರಾಷ್ಟ್ರಸಮಿತಿ ಕಾರ್ಯಕರ್ತರನ್ನು ಆಕ್ರೋಶಗೊಂಡ ಸ್ಥಳೀಯ ನಾಗರಿಕರು ಚಪ್ಪಲಿಗಳನ್ನು ಎಸೆದಿದ್ದಾರೆ.