ಶ್ರೀಕೃಷ್ಣನ ಜನ್ಮಭೂಮಿಯ ಮೇಲೆ ಮಸೀದಿಯ ಅತಿಕ್ರಮಣದ ಪ್ರಕರಣ
ಎಲ್ಲಾ ವಿರೋಧೀ ಪಕ್ಷಕಾರರಿಗೆ ತಮ್ಮ ಪಕ್ಷವನ್ನು ಮಂಡಿಸಲು ನ್ಯಾಯಾಲಯದಿಂದ ನೋಟಿಸ್
ಮಥುರಾ (ಉತ್ತರ ಪ್ರದೇಶ) – ಇಲ್ಲಿಯ ಜಿಲ್ಲಾ ನ್ಯಾಯಾಲಯವು ಶ್ರೀಕೃಷ್ಣ ಜನ್ಮಸ್ಥಳದ ಮೇಲೆ ಮಸೀದಿಯಿಂದ ಅತಿಕ್ರಮಣ ಆಗಿರುವ ಬಗ್ಗೆ ಶ್ರೀಕೃಷ್ಣ ವಿರಾಜಮಾನ ಅವರ ಅರ್ಜಿಯನ್ನು ಅಂಗೀಕರಿಸಿದೆ. ಅದೇರೀತಿ ಎಲ್ಲಾ ವಿರೋಧೀ ಪಕ್ಷಕಾರರಿಗೆ ತಮ್ಮ ಪರವನ್ನು ಮಂಡಿಸುವಂತೆ ಕೋರಿ ನೋಟಿಸ್ ಕಳುಹಿಸಿದೆ. ಇದರ ಮುಂದಿನ ವಿಚಾರಣೆ ನವೆಂಬರ್ ೧೮ ರಂದು ನಡೆಯಲಿದೆ. ‘ಶ್ರೀಕೃಷ್ಣ ಜನ್ಮಭೂಮಿಯ ಒಟ್ಟು ೧೩.೩೭ ಎಕರೆ ಜಮೀನು ಶ್ರೀಕೃಷ್ಣ ವಿರಾಜಮಾನಗೆ ಸೇರಿದ್ದು, ಅದನ್ನು ಹಿಂದಿರುಗಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಈ ಹಿಂದೆ ಅರ್ಜಿಯನ್ನು ಸಿವಿಲ್ ನ್ಯಾಯಾಲಯವು ತಿರಸ್ಕರಿಸಿತ್ತು. ಅರ್ಜಿದಾರರು ಈ ಅರ್ಜಿಯನ್ನು ಹಿರಿಯ ಪೂ.(ನ್ಯಾಯವಾದಿ) ಹರಿಶಂಕರ ಜೈನ್ ಹಾಗೂ ನ್ಯಾಯವಾದಿ ವಿಷ್ಣುಶಂಕರ ಜೈನ್ ಇವರ ಮೂಲಕ ಸಲ್ಲಿಸಿದ್ದಾರೆ.
೧. ಈ ಅರ್ಜಿಗನುಸಾರ, ಪ್ರಸ್ತುತ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಈದ್ಗಾ ಮಸೀದಿ ಇದೆ. ಅಲ್ಲಿ ಕಂಸನ ಸೆರೆಮನೆ ಇತ್ತು ಹಾಗೂ ಅಲ್ಲಿಯೇ ಭಗವಾನ ಶ್ರೀಕೃಷ್ಣನು ಜನಿಸಿದ್ದನು. ಅಲ್ಲಿ ಹಿಂದೆ ಶ್ರೀಕೃಷ್ಣನ ದೇವಾಲಯವಿತ್ತು. ಮೊಘಲರು ಅದನ್ನು ನೆಲಸಮಗೊಳಿಸಿ ಈದ್ಗಾ ಮಸೀದಿಯನ್ನು ಕಟ್ಟಿದ್ದಾರೆ.
೨. ದಿವಾಣಿ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸುವಾಗ, ವಿವಾದವನ್ನು ೧೯೬೭ ರಲ್ಲಿ ಇತ್ಯರ್ಥಪಡಿಸಲಾಗಿದೆ ಹಾಗೂ ೧೯೯೧ ರಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್’ ಕಾಯ್ದೆಯಡಿ ಈ ದೇವಸ್ಥಾನವೂ ಬರುವುದರಿಂದ ಇದರ ಆಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
೩. ಈ ದೇವಸ್ಥಾನವು ‘ಪ್ಲೇಸಸ್ ಆಫ್ ವರ್ಶಿಪ್’ನಲ್ಲಿ ಬರುವುದಿಲ್ಲ್ಲ, ಆದ್ದರಿಂದ ಇದರ ಬಗ್ಗೆ ಆಲಿಕೆಯಾಗಬೇಕು ಎಂದು ಹೇಳಿದೆ.