ಯಾರ ಹಿಂಸಾಚಾರದಿಂದ ದೇಶದ ಸಾವಿರಾರು ಹಿಂದೂ ದೇವಸ್ಥಾನಗಳು ನಾಶವಾದವು ಎಂಬುದು ಓವೈಸಿ ಏಕೆ ಹೇಳುತ್ತಿಲ್ಲ ? ಬಾಬರಿ ಧ್ವಂಸದ ನಂತರ ಹಿಂಸಾತ್ಮಕರಾಗಿ ಹಿಂದೂಗಳನ್ನು ಹತ್ಯೆ ಮಾಡಿದವರು ಯಾರು ? ಓವೈಸಿ ಇದನ್ನು ಏಕೆ ಹೇಳುತ್ತಿಲ್ಲ ? ೧೯೯೦ ರ ದಶಕದಲ್ಲಿ ಕಾಶ್ಮೀರದ ಅಸಂಖ್ಯಾತ ಹಿಂದೂ ದೇವಸ್ಥಾನಗಳ ಮೇಲೆ ಹಿಂಸಾತ್ಮಕ ದಾಳಿ ಮಾಡಿದವರು ಯಾರು ? ಓವೈಸಿ ಇದನ್ನೆಲ್ಲ ಏಕೆ ಹೇಳುತ್ತಿಲ್ಲ ?
ಭಾಗ್ಯನಗರ (ತೆಲಂಗಾಣ) – ಯಾವ ವಿಷಯದ ಬಗ್ಗೆ ಭಯವಾಗುತ್ತಿತ್ತೋ, ಅದೇ ಆಗುತ್ತಿದೆ. ಬಾಬರಿಗೆ ಸಂಬಂಧಿಸಿದ ನಿರ್ಣಯದಿಂದ ಸಂಘ ಪರಿವಾರದ ಜನರ ಉದ್ದೇಶವು ಇನ್ನಷ್ಟು ಬಲವಾಗಿದೆ. ನೆನಪಿಡಿ, ನೀವು ಮತ್ತು ನಾನು ಗಾಢ ನಿದ್ರೆಯಲ್ಲಿದ್ದರೆ, ಕೆಲವೇ ವರ್ಷಗಳಲ್ಲಿ ಸಂಘವು ಈ ಬಗ್ಗೆ ಹಿಂಸಾತ್ಮಕ ಅಭಿಯಾನವನ್ನು ಪ್ರಾರಂಭಿಸಬಹುದು ಹಾಗೂ ಕಾಂಗ್ರೆಸ್ ಈ ಹಿಂಸಾತ್ಮಕ ಅಭಿಯಾನದ ಭಾಗವಾಗಲಿದೆ, ಎಂದು ಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿಯವರು ಮುಸಲ್ಮಾನರನ್ನು ಉದ್ದೇಶಿಸಿ ಟ್ವೀಟ್‌ನಲ್ಲಿ ವಿಷಕಾರಿದರು. ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಅರ್ಜಿ ಸ್ವೀಕರಿಸಿದ ವಾರ್ತೆಯ ಬಗ್ಗೆ ಒವೈಸಿ ಈ ಟ್ವೀಟ್ ಮಾಡಿದ್ದಾರೆ.
Plea against Mathura Idgah: Asaduddin Owaisi targets RSS, says must remain alert to designs of Sangh #Mathura @asadowaisi https://t.co/y7RIxQzpPm
— Free Press Journal (@fpjindia) October 17, 2020