೭ ತಿಂಗಳ ನಂತರ ಶಬರಿಮಲೆ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಗಿದೆ : ಒಂದು ದಿನದಲ್ಲಿ ೨೫೦ ಭಕ್ತರಿಗೆ ಮಾತ್ರ ಪ್ರವೇಶ

ಮಾಸಿಕ ಪೂಜೆಗಾಗಿ ಕೇವಲ ೫ ದಿನ ಮಾತ್ರ ದೇವಸ್ಥಾನ ತೆರೆದಿರುತ್ತದೆ

ತಿರುವನಂತಪುರಂ (ಕೇರಳ) – ೭ ತಿಂಗಳ ನಂತರ ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನವನ್ನು ಭಕ್ತರಿಗಾಗಿ ತೆರೆಯಲಾಯಿತು. ೫ ದಿನಗಳ ಮಾಸಿಕ ಪೂಜೆಗೆ ಈ ದೇವಸ್ಥಾನವನ್ನು ತೆರೆಯಲಾಗಿದ್ದು, ಮಲಯಾಳಂ ತಿಂಗಳು ತುಲಮ್‌ನ ನಿಮಿತ್ತ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.

ಮುಖಕ್ಕೆ ಮಾಸ್ಕ್ ಧರಿಸಿ ಅದೇರೀತಿ ಕರೋನಾ ಪರೀಕ್ಷೆ ನಕಾರಾತ್ಮಕ(ನೆಗೆಟಿವ್)ವಾಗಿದೆ ಎಂಬ ಪ್ರಮಾಣಪತ್ರವನ್ನು ತೋರಿಸಿದವರು ದೇವಸ್ಥಾನವನ್ನು ಪ್ರವೇಶಿಸಿದರು. ಆದರೆ ಸಾಂಪ್ರದಾಯಿಕ ಪವಿತ್ರ ಸ್ನಾನವನ್ನು ನಿಷೇಧಿಸಲಾಗಿದ್ದು ಅದರ ಬದಲು ‘ಶವರ್’ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಿಟಿಐ ಈ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿರುವಾಗ ಈ ಮಾಹಿತಿ ತಿಳಿಸಿದ್ದಾರೆ. ‘ಬೇಸ್ ಕ್ಯಾಂಪ್’ ಅಥವಾ ದೇವಸ್ಥಾನದ ಮುಖ್ಯ ಪ್ರದೇಶದಲ್ಲಿ ರಾತ್ರಿ ಉಳಿಯುವುದನ್ನು ಸಹ ನಿಷೇಧಿಸಲಾಗಿದೆ. ಅಕ್ಟೋಬರ್ ೧೭ ರಂದು ೨೪೬ ಜನರು ದೇವಸ್ಥಾನದಲ್ಲಿ ದರ್ಶನ ಪಡೆಯಲು ‘ಆನ್‌ಲೈನ್ ಬುಕಿಂಗ್’ ಮಾಡಿದ್ದರು. ಒಂದು ದಿನಕ್ಕೆ ೨೫೦ ಜನರಿಗೆ ಮಾತ್ರ ದೇವಾಲಯ ಪ್ರವೇಶಿಸಲು ಅವಕಾಶವಿರುತ್ತದೆ. ಕೇರಳದಲ್ಲಿ ಕರೋನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನದ ವತಿಯಿಂದ ಎಲ್ಲಾ ಕಾಳಜಿ ವಹಿಸಲಾಗುತ್ತಿದೆ. ಕೊರೋನಾದ ‘ನೆಗೆಟಿವ್’ ಇರುವ ಪ್ರಮಾಣಪತ್ರವನ್ನು ತರಲು ಸಾಧ್ಯವಾಗದವರಿಗೆ ‘ರ‍್ಯಾಪಿಡ್ ಟೆಸ್ಟ’ನ ಸೌಲಭ್ಯವನ್ನು ಒದಗಿಸಲಾಗಿದೆ.