ತೆಲಂಗಾಣದಲ್ಲಿ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಲು ತೆರಳಿದ್ದ ಶಾಸಕರ ಮೇಲೆ ಆಕ್ರೋಶಗೊಂಡ ನಾಗರಿಕರಿಂದ ಚಪ್ಪಲಿ ಎಸೆತ !

ತೆಲಂಗಾಣದಲ್ಲಿ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಲು ತೆರಳಿದ್ದ ಶಾಸಕರ ಮೇಲೆ ಆಕ್ರೋಶಗೊಂಡ ನಾಗರಿಕರಿಂದ ಚಪ್ಪಲಿ ಎಸೆತ !

ಮೆಡಿಪಲ್ಲಿ (ತೆಲಂಗಾಣ) – ಇಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಅದರ ಪರಿಣಾಮವಾಗಿ, ಇದು ವರೆಗೆ ೫೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ೫ ಸಾವಿರ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಭಾಗ್ಯನಗರ, ಇಬ್ರಾಹಿಂಪಟ್ಟಣಂ ಮುಂತಾದ ನಗರದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ. ಇಂತಹ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಲು ತೆರಳಿದ್ದ ಇಬ್ರಾಹಿಂಪಟ್ಟಣಂ ಶಾಸಕ ಮಚಿರೆಡ್ಡಿ ಕಿಶನ್ ರೆಡ್ಡಿ ಹಾಗೂ ತೆಲಂಗಾಣ ರಾಷ್ಟ್ರಸಮಿತಿ ಕಾರ್ಯಕರ್ತರನ್ನು ಆಕ್ರೋಶಗೊಂಡ ಸ್ಥಳೀಯ ನಾಗರಿಕರು ಚಪ್ಪಲಿಗಳನ್ನು ಎಸೆದಿದ್ದಾರೆ. ಅದೇರೀತಿ ರೆಡ್ಡಿಯವರ ವಾಹನವನ್ನೂ ಧ್ವಂಸ ಮಾಡಿದರು. ಈ ಘಟನೆಯ ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದೆ.