‘ಡಿಡಿ ನ್ಯಾಷನಲ್’ ನಲ್ಲಿ ಅಯೋಧ್ಯೆಯಿಂದ ‘ರಾಮ್‌ಲೀಲಾ’ ದ ನೇರ ಪ್ರಸಾರ

ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಪ್ರಸಾರವನ್ನು ಪ್ರಾರಂಭಿಸಿದ್ದಕ್ಕಾಗಿ ದೂರದರ್ಶನಕ್ಕೆ ಅಭಿನಂದನೆಗಳು !

ನವ ದೆಹಲಿ – ಅಯೋಧ್ಯೆಯಲ್ಲಿ ‘ರಾಮಲೀಲಾ’ದ ಕಾರ್ಯಕ್ರಮದ ನೇರ ಪ್ರಸಾರವು ಅಕ್ಟೋಬರ್ ೧೭ ರಿಂದ ಅಕ್ಟೋಬರ್ ೨೫ ರವರೆಗೆ ಡಿಡಿ ನ್ಯಾಷನಲ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಇದು ಸಂಜೆ ೭ ರಿಂದ ರಾತ್ರಿ ೧೦ ರವರೆಗೆ ನೇರ ಪ್ರಸಾರ ವಾಗುತ್ತಿದೆ.

ನಂತರ ಮರುದಿನ ಬೆಳಿಗ್ಗೆ ೯ ಗಂಟೆಗೆ ಡಿಡಿ ಭಾರತಿಯಲ್ಲಿ ಹಾಗೂ ಮಧ್ಯಾಹ್ನ ೩ ಗಂಟೆಗೆ ಡಿಡಿ ನ್ಯಾಷನಲ್‌ನಲ್ಲಿ ಮರುಪ್ರಸಾರವಾಗಲಿದೆ. ರವಿ ಕಿಶನ್, ಮನೋಜ್ ತಿವಾರಿ, ಅಸ್ರಾನಿ, ವಿಂದು ದಾರಾಸಿಂಗ್, ರಝಾ ಮುರಾದ್ ಮುಂತಾದ ನಟರು ಪಾತ್ರ ನಿರ್ವಹಿಸುತ್ತಿದ್ದಾರೆ.