ಕೇರಳದ ಜೈವಿಕ ತಂತ್ರಜ್ಞಾನ ಸಂಸ್ಥೆಯ ಪರಿಸರಕ್ಕೆ ಪೂ. ಗೋಳವಲಕರ ಗುರೂಜಿಯ ಹೆಸರಿಡುವ ನಿರ್ಧಾರ

ಕೇರಳ ಸರಕಾರ ಮತ್ತು ಕಾಂಗ್ರೆಸ್‌ನಿಂದ ತೀವ್ರ ವಿರೋಧ

ಎಡಗಡೆಯಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸರಸಂಘಚಾಲಕ ಪೂ. ಗೋಳವಲಕರ ಗುರೂಜಿ

ತಿರುವನಂತಪುರಂ (ಕೇರಳ) – ರಾಜ್ಯದ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಸ್ಟಿಟ್ಯೂಟ್‌ನ ಪರಿಸರಕ್ಕೆ ಎರಡನೇ ಸರಸಂಘಚಾಲಕ ಪೂ. ಗೋಳವಲಕರ ಗುರೂಜಿಯವರ ಹೆಸರಿಡಲು ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯದ ಕಮ್ಯುನಿಸ್ಟ್ ಸರಕಾರ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರೋಧಿಸಿವೆ. ಎಲ್ಲದಕ್ಕೂ ಧಾರ್ಮಿಕ ಬಣ್ಣ ನೀಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಹಾಗೆಯೇ ‘ವಿಜ್ಞಾನ ಕ್ಷೇತ್ರದಲ್ಲಿ ಪೂ. ಗೋಳವಲಕರ ಗುರೂಜಿಯ ಕಾರ್ಯವೇನು?’, ಎಂದು ಪ್ರಶ್ನೆಯನ್ನೂ ಕೇಳಲಾಗಿದೆ.

ಕೇಂದ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ‘ಶ್ರೀ ಗುರೂಜಿ ಮಾಧವ ಸದಾಶಿವ ಗೋಳವಲಕರ ಅವರು ನ್ಯಾಶನಲ್ ಸೆಂಟರ್ ಫಾರ್ ಕಾಂಪ್ಲೆಕ್ಸ ಡಿಸೀಸ ಇನ್ ಕ್ಯಾನ್ಸರ್ ಆಂಡ್ ವೈರಲ್ ಇನ್ಫೆಕ್ಷನ್’ ಸ್ಥಾಪಿಸುವ ಬಗ್ಗೆ ಮಾಹಿತಿ ನೀಡಿದ್ದರು. ಈ ಕುರಿತು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡರು ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ವಿಜ್ಞಾನಿಗಳ ಹೆಸರನ್ನು ನೀಡುವಂತೆ ಒತ್ತಾಯಿಸಿದರು.