ತಾಂಡವ್ ವೆಬ್ ಸಿರೀಸ್‌ನಿಂದ ಹಿಂದೂ ದೇವತೆಗಳ ಅವಮಾನ

ಧಾರ್ಮಿಕ ಭಾವನೆಗಳನ್ನು ನೋಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ’ತಾಂಡವ್’ ಈ ವೆಬ್ ಸಿರೀಸ್‌ನ ನಿರ್ಮಾಪಕ ಹಿಮಾಂಶು ಕೃಷ್ಣ ಮೆಹರಾ, ನಿರ್ದೇಶಕ ಅಲಿ ಅಬ್ಬಾಸ್ ಜಫರ್, ಲೇಖಕ ಗೌರವ ಸೋಲಂಕಿ, ‘ಅಮೇಜಾನ್ ಪ್ರೈಮ್’ನ ಭಾರತದ ‘ಒರಿಜನಲ್ ಕಂಟೆಂಟ್ ಹೆಡ್’ ಅಪರ್ಣಾ ಪುರೋಹಿತ ಇವರ ವಿರುದ್ಧ ಹಜರತಗಂಜ ಕೊತವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಮಮತಾ ಬ್ಯಾನರ್ಜಿ ‘ಇಸ್ಲಾಮಿಕ್ ಭಯೋತ್ಪಾದಕಿ’ ! – ಉತ್ತರ ಪ್ರದೇಶದ ಬಿಜೆಪಿ ಸಚಿವ ಆನಂದ ಸ್ವರೂಪ ಶುಕ್ಲಾ

ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ರೋಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ನೀಡಿದ್ದಾರೆ, ಹಿಂದೂಗಳಿಗೆ ತಮ್ಮ ಹಬ್ಬಗಳನ್ನು ಆಚರಿಸಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಬಂಗಾಲದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹೀನಾಯವಾಗಿ ಸೋಲನುಭವಿಸಲಿದ್ದು ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಆನಂದ ಸ್ವರೂಪ ಶುಕ್ಲಾ ಹೇಳಿದ್ದಾರೆ.

ಹಿಂದಿ ಪಾಕ್ಷಿಕ ‘ಸನಾತನ ಪ್ರಭಾತ’ ನ ೨೧ ನೇ ವರ್ಧಂತ್ಯುತ್ಸವದ ನಿಮಿತ್ತ ಟ್ವಿಟ್ಟರ್ ನಲ್ಲಿ #21YearsOfSanatanPrabhat ಎಂಬ ಹ್ಯಾಶ್‌ಟ್ಯಾಗ್ ಮೂಲಕ ವ್ಯಾಪಕವಾಗಿ ಧರ್ಮಪ್ರಸಾರ !

ಹಿಂದಿ ಪಾಕ್ಷಿಕ ಸನತನ ಪ್ರಭಾತವು ಈಗ ೨೧ ವರ್ಷಗಳನ್ನು ಪೂರೈಸಿದೆ. ಈ ನಿಮಿತ್ತ ಜನವರಿ ೧೬ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಧರ್ಮಸಂವಾದ’ದಲ್ಲಿ ಪಾಕ್ಷಿಕದ ಆನ್‌ಲೈನ್ ವರ್ಧಂತ್ಯುತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದರ ನಂತರ ಜನವರಿ ೧೭ ರಂದು ಟ್ವಿಟರ್‌ನಲ್ಲಿ #21YearsOfSanatanPrabhat ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಲಾಯಿತು.

ಆರ್ಥಿಕ ಹಗರಣದ ಪ್ರಕರಣದಲ್ಲಿ ಚೀನಾದ ನಾಗರಿಕರಿಬ್ಬರ ಬಂಧನ

ಆರ್ಥಿಕ ದುರುಪಯೋಗದ ಆರೋಪದ ಮೇಲೆ ಚೀನಾದ ಇಬ್ಬರು ಪ್ರಜೆಗಳಾದ ಚಾರ್ಲಿ ಪೆಂಗ್ ಮತ್ತು ಕಾರ್ಟರ್ ಲೀ ಅವರನ್ನು ಜಾರಿ ನಿರ್ದೇಶನಾಲಯ (ಈಡಿ) ಬಂಧಿಸಿದೆ. ಇಬ್ಬರೂ ದೆಹಲಿಯಲ್ಲಿ ವಾಸಿಸುತ್ತಿದ್ದು ಚೀನಾದ ಸಂಸ್ಥೆಗಳಿಗಾಗಿ ಬೃಹತ್ ಪ್ರಮಾಣದಲ್ಲಿ ದಂಧೆಗಳನ್ನು ನಡೆಸುತ್ತಿದ್ದರು ಮತ್ತು ಭಾರತ ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿಗಳ ನಷ್ಟವನ್ನುಂಟು ಮಾಡುತ್ತಿದ್ದರು.

ಚೀನಾದ ಐಸ್ ಕ್ರೀಂನಲ್ಲಿ ಪತ್ತೆಯಾದ ಕೊರೋನಾ ವೈರಸ್ !

ಚೀನಾದ ಐಸ್ ಕ್ರೀಂನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಐಸ್‌ಕ್ರೀಮ್‌ನ ೩೯೦ ಪೆಟ್ಟಿಗೆಗಳನ್ನು ಮಾರಾಟ ಮಾಡಲಾಗಿದ್ದು ಖರೀದಿ ಮಾಡುವವರ ಹುಡುಕಾಟ ನಡೆಯುತ್ತಿದೆ. ಯಾವ ಸಂಸ್ಥೆಯ ಐಸ್ ಕ್ರೀಂನಲ್ಲಿ ಕೊರೋನಾದ ವೈರಾಣು ಕಂಡು ಬಂದಿತೋ ಆ ಸಂಸ್ಥೆಯನ್ನು ಆಡಳಿತವು ಬಂದ್ ಮಾಡಿದೆ.

ಮೀರಠನಲ್ಲಿ ಗೋಹತ್ಯೆ ತಡೆಯಲು ಹೋಗಿದ್ದ ಪೊಲೀಸರ ಮೇಲೆ ಮತಾಂಧ ಕಟುಕರಿಂದ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ

ಸ್ಥಳೀಯ ಮವಾನಾ ಪ್ರದೇಶದಲ್ಲಿ ಗೋಹತ್ಯೆ ಆಗಲಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಮತಾಂಧ ಕುಟುಂಬವೊಂದು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಇದರಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ೫ ಲಕ್ಷ ೧೦೦ ರೂಪಾಯಿ ದೇಣಿಗೆ !

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮ ಮಂದಿರಕ್ಕಾಗಿ ನಿಧಿಸಂಗ್ರಹದ ಅಭಿಯಾನವನ್ನು ಜನವರಿ ೧೫ ರಿಂದ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ಕಾಗಿ ರಾಷ್ಟ್ರಪತಿ ರಾಮನಾಥ ಕೊವಿಂದ್ ೫ ಲಕ್ಷ ೧೦೦ ರೂಪಾಯಿಗಳನ್ನು ನೀಡುವ ಮೂಲಕ ಈ ಅಭಿಯಾನ ಪ್ರಾರಂಭಿಸಿದರು.

‘ಆಶ್ರಮ’ ವೆಬ್ ಸೀರೀಸ್‌ನಲ್ಲಿ ತೋರಿಸಿರುವಂತೆ ಮತಾಂಧನಿಂದ ಯುವತಿಯ ಹತ್ಯೆ

ಇಲ್ಲಿ ಯುವತಿಯ ಶಿರಚ್ಛೇದ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೇಖ್ ಬಿಲಾಲ್ ಎಂಬವನನ್ನು ಬಂಧಿಸಿದ್ದಾರೆ. ‘ಆಶ್ರಮ’ ಎಂಬ ವೆಬ್ ಸೀರೀಸ್‌ನ್ನು ನೋಡಿದ ನಂತರ ಈ ಯುವತಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆಂಧ್ರಪ್ರದೇಶದ ದೇವಾಲಯ ದಾಳಿ ಪ್ರಕರಣದಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ೧೫ ಕಾರ್ಯಕರ್ತರನ್ನು ಬಂಧಿಸಲಾಗಿದೆ

ಕಳೆದ ಒಂದೂವರೆ ವರ್ಷಗಳಿಂದ ಆಂಧ್ರಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮತ್ತು ವಿಗ್ರಹ ಭಂಜನೆಯ ಕೃತ್ಯಗಳಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ೨೦ ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದಾರೆ. ಈ ಪೈಕಿ ೧೫ ಮಂದಿಯನ್ನು ಬಂಧಿಸಲಾಗಿದ್ದು, ಇತರರು ಪರಾರಿಯಾಗಿದ್ದಾರೆ.

ಆಂದ್ರ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಿಸಿ ೬೯೯ ‘ಕ್ರೈಸ್ತ ಹಳ್ಳಿಗಳನ್ನು’ ಸ್ಥಾಪಿಸಿದ ಪಾದ್ರಿಯ ಬಂಧನ

ಹಿಂದೂ ದೇವತೆಗಳ ವಿಗ್ರಹಗಳನ್ನು ಒದೆಯುತ್ತಿದ್ದ ಪ್ರವೀಣ ಚಕ್ರವರ್ತಿ ಎಂಬ ಪಾದ್ರಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈ ಪಾದ್ರಿ ರಾಜ್ಯದಲ್ಲಿ ೬೯೯ ಗ್ರಾಮಗಳನ್ನು ‘ಕ್ರೈಸ್ತ ವಿಲೇಜ್’ ಎಂಬ ಹೆಸರಿನ ಗ್ರಾಮಗಳಾಗಿ ಪರಿವರ್ತಿಸಿದ್ದಾನೆ.