ಬಲಿಯಾ (ಉತ್ತರ ಪ್ರದೇಶ) – ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತೀಯತೆಯನ್ನು ನಂಬುವುದಿಲ್ಲ. ಅವರು ‘ಇಸ್ಲಾಮಿಕ್ ಭಯೋತ್ಪಾದಕರು’ ಆಗಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಿಸುವ ಮತ್ತು ದೇವಾಲಯಗಳನ್ನು ಧ್ವಂಸಗೊಳಿಸುವ ಕೆಲಸವನ್ನು ಮಾಡಿದ್ದಾರೆ. ಅವರು ಬಾಂಗ್ಲಾದೇಶ ಸೂಚಿಸಿದಂತೆ ಕೆಲಸ ಮಾಡುತ್ತಾರೆ. ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ರೋಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ನೀಡಿದ್ದಾರೆ, ಹಿಂದೂಗಳಿಗೆ ತಮ್ಮ ಹಬ್ಬಗಳನ್ನು ಆಚರಿಸಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಬಂಗಾಲದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹೀನಾಯವಾಗಿ ಸೋಲನುಭವಿಸಲಿದ್ದು ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಆನಂದ ಸ್ವರೂಪ ಶುಕ್ಲಾ ಹೇಳಿದ್ದಾರೆ. ಅವರು ಬಲಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಮತಾ ಕೇವಲ ಮುಸ್ಲಿಮರ ನಾಯಕಿಯಾಗಿದ್ದಾರೆ. ಅವರು ಹಿಂದೂಗಳನ್ನು ಹಿಂಸಿಸುತ್ತಿದ್ದಾರೆ. ಚುನಾವಣೆಯಲ್ಲಿ ಮಮತಾ ಅವರನ್ನು ಉಚ್ಚಾಟಿಸಲು ಬಂಗಾಲದ ಜನರು ನಿರ್ಧರಿಸಿದ್ದಾರೆ. ದೇಶದಲ್ಲಿ ‘ಭಾರತ ಮಾತಾ ಜೈ’ ಮತ್ತು ‘ವಂದೇ ಮಾತರಮ್’ ಎಂದು ಹೇಳುವ ಮುಸ್ಲಿಮರಿಗೆ ಮಾತ್ರ ಗೌರವ ನೀಡಲಾಗುವುದು ಎಂದು ಕೂಡ ಶುಕ್ಲಾರವರು ಹೇಳಿದರು.
Mamata Banerjee has become complete Bangladeshi & is working on the directions of islamic terrrorists there. She has become the biggest danger for the country. After her defeat in West Bengal assembly polls, she'll be ready to take refuge in Bangladesh: State Min Anand S Shukla pic.twitter.com/b6dEvzyZQn
— ANI UP (@ANINewsUP) January 17, 2021