ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ೫ ಲಕ್ಷ ೧೦೦ ರೂಪಾಯಿ ದೇಣಿಗೆ !

ಶ್ರೀ ರಾಮ ಮಂದಿರಕ್ಕೆ ನಿಧಿ ಸಂಗ್ರಹಿಸುವ ಅಭಿಯಾನ ಪ್ರಾರಂಭ !

ನವ ದೆಹಲಿ – ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮ ಮಂದಿರಕ್ಕಾಗಿ ನಿಧಿಸಂಗ್ರಹದ ಅಭಿಯಾನವನ್ನು ಜನವರಿ ೧೫ ರಿಂದ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ಕಾಗಿ ರಾಷ್ಟ್ರಪತಿ ರಾಮನಾಥ ಕೊವಿಂದ್ ೫ ಲಕ್ಷ ೧೦೦ ರೂಪಾಯಿಗಳನ್ನು ನೀಡುವ ಮೂಲಕ ಈ ಅಭಿಯಾನ ಪ್ರಾರಂಭಿಸಿದರು. ಅದರ ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್ ಈ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿದರು. ಕರ್ಣಾವತಿಯ ವಜ್ರ ವ್ಯಾಪಾರಿ ಗೋವಿಂದಭಾಯಿ ಢೋಢಕಿಯಾರವರು ೧೧ ಕೋಟಿ ರೂಪಾಯಿ ದೇಣಿಗೆ ನೀಡಿದರು. ಅವರು ರಾ. ಸ್ವಂ. ಸೇ. ಸಂಘದ ನಿಕಟವರ್ತಿಯಾಗಿದ್ದಾರೆ.

ಈ ಅಭಿಯಾನವು ೫ ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ೧೨ ಕೋಟಿ ಕುಟುಂಬಗಳನ್ನು ಸಂಪರ್ಕಿಸಲಿದೆ. ಈ ದಾನ ಸಮರ್ಪಣೆ ಅಭಿಯಾನವು ಫೆಬ್ರವರಿ ೨೭ ರವರೆಗೆ ನಡೆಯಲಿದೆ. ಈ ಮಧ್ಯೆ ೧೦ ರೂಪಾಯಿ, ೧೦೦ ರೂಪಾಯಿ ಮತ್ತು ೧,೦೦೦ ರೂಪಾಯಿಗಳ ಕೂಪನ್‌ಗಳನ್ನು ನೀಡಿದರೆ, ೨,೦೦೦ ರೂಪಾಯಿಗಿಂತ ಹೆಚ್ಚಿನ ಹಣವನ್ನು ದಾನ ಮಾಡುವವರಿಗೆ ರಶೀದಿ ನೀಡಲಾಗುವುದು ಎಂದು ತಿಳಿಸಲಾಗಿದೆ.