ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ನೇಣು ಬಿಗಿದು ಕೊಲ್ಲುವ ಪ್ರಯತ್ನ !
|
ಮೀರಠ (ಉತ್ತರ ಪ್ರದೇಶ) – ಸ್ಥಳೀಯ ಮವಾನಾ ಪ್ರದೇಶದಲ್ಲಿ ಗೋಹತ್ಯೆ ಆಗಲಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಮತಾಂಧ ಕುಟುಂಬವೊಂದು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಇದರಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. (ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಪೊಲೀಸರು ಜನರನ್ನು ಹೇಗೆ ರಕ್ಷಿಸುವರು ? – ಸಂಪಾದಕ) ಆದರೆ ಇತರ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಹೆಚ್ಚಿನ ಸಹಾಯಕ್ಕಾಗಿ ಪೊಲೀಸರನ್ನು ಕರೆಸಿ ಉವೇಶ್, ಮಹಾರಾಜ ಮತ್ತು ಆಫ್ರೀನ್ ಅವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. (ಇಂತಹ ಹಿಂಸಾತ್ಮಕ ಮತಾಂಧ ಮಹಿಳೆಯರನ್ನು ಎದುರಿಸಲು ಹಿಂದೂಗಳು ಸಿದ್ಧರಿದ್ದೀರಾ ? – ಸಂಪಾದಕ) ವರೀಶ ಕುರೇಶಿ, ಡಿರ್ರಾ ಅಲಿಯಾಸ್ ಫಿರೋಜ ಕುರೇಶಿ, ಅಹಮದ ಕುರೇಶಿ, ಫುರಕಾನ ಕುರೇಶಿ, ಇಕರಮ ಕುರೇಶಿ, ಜೈದ ಕುರೇಶಿ ಹಾಗೂ ಆಫಾಕ ಕುರೇಶಿ ಎಂಬವರು ಪರಾರಿಯಾಗಿದ್ದು ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. ಪೊಲೀಸರು ಇಲ್ಲಿಂದ ೪ ಕ್ವಿಂಟಾಲ್ ಗೋಮಾಂಸ, ಕಳೇಬರ, ಶಸ್ತ್ರಾಸ್ತ್ರಗಳು ಮತ್ತು ೩ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.