ತಾಂಡವ್ ವೆಬ್ ಸಿರೀಸ್‌ನಿಂದ ಹಿಂದೂ ದೇವತೆಗಳ ಅವಮಾನ

  • ‘ಅಮೆಜಾನ್ ಪ್ರೈಮ್’ ಮುಖ್ಯಸ್ಥರು ಸೇರಿದಂತೆ ‘ತಾಂಡವ’ನ ನಿರ್ಮಾಪಕರು-ನಿರ್ದೇಶಕರು, ಬರಹಗಾರರ ವಿರುದ್ಧ ಅಪರಾಧ ದಾಖಲು

  • ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸಮನ್ಸ್

ಸಮನ್ಸ್ ಜಾರಿಗೊಳಿಸಲು ಸಮಯ ವ್ಯರ್ಥ ಮಾಡದೆ ಈ ವೆಬ್ ಸಿರೀಸ್ ನೇರವಾಗಿ ನಿಷೇಧಿಸುವ ಮೂಲಕ ವೆಬ್ ಸಿರೀಸ್‌ಅನ್ನು ನಿಯಂತ್ರಿಸಲು ಕೇಂದ್ರ ಸರಕಾರ ಸೆನ್ಸಾರ್ ಬೋರ್ಡ್‌ಅನ್ನು ಸ್ಥಾಪಿಸಬೇಕು ಎಂದು ಹಿಂದೂಗಳ ಆಗ್ರಹವಾಗಿದೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಧಾರ್ಮಿಕ ಭಾವನೆಗಳನ್ನು ನೋಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ’ತಾಂಡವ್’ ಈ ವೆಬ್ ಸಿರೀಸ್‌ನ ನಿರ್ಮಾಪಕ ಹಿಮಾಂಶು ಕೃಷ್ಣ ಮೆಹರಾ, ನಿರ್ದೇಶಕ ಅಲಿ ಅಬ್ಬಾಸ್ ಜಫರ್, ಲೇಖಕ ಗೌರವ ಸೋಲಂಕಿ, ‘ಅಮೇಜಾನ್ ಪ್ರೈಮ್’ನ ಭಾರತದ ‘ಒರಿಜನಲ್ ಕಂಟೆಂಟ್ ಹೆಡ್’ ಅಪರ್ಣಾ ಪುರೋಹಿತ ಇವರ ವಿರುದ್ಧ ಹಜರತಗಂಜ ಕೊತವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಹಿಂದೆ ಮುಂಬಯಿಯಲ್ಲಿ ಇದೇ ರೀತಿಯ ಅಪರಾಧ ದಾಖಲಿಸಲಾಗಿದೆ.

ಬಿಜೆಪಿಯ ಸಂಸದ ಮನೋಜ ಕೋಟಕ್ ಇವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ನೇರವಾಗಿ ಪತ್ರ ಬರೆದು ‘ತಾಂಡವ್’ ಮೇಲೆ ನಿಷೇಧ ಹೇರುವ ಅದೇರೀತಿ ‘ಒಟಿಟಿ ಆಪ್’ಗೆ ಸೆನ್ಸಾರ್ ಬೋರ್ಡ್ ರಚಿಸುವಂತೆ ಒತ್ತಾಯಿಸಿದ್ದರು. ಕೊಟಕ್ ಅವರ ಪತ್ರವನ್ನು ತಕ್ಷಣ ಗಮನಿಸಿದ ಸಚಿವಾಲಯದಿಂದ ‘ಅಮೆಜಾನ್ ಪ್ರೈಮ್’ನ ಭಾರತದ ಅಧಿಕಾರಿಗಳಿಗೆ ಸಮನ್ಸ ನೀಡಲಾಗಿದ್ದು ಈ ವೆಬ್ ಸಿರೀಸ್‌ನಲ್ಲಿ ಹಿಂದೂ ದೇವತೆಗಳ ಅವಮಾನ ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸಿರುವ ಬಗ್ಗೆ ಸ್ಪಷ್ಟಪಡಿಸಲು ತಿಳಿಸಿದ್ದಾರೆ.