|
ನವದೆಹಲಿ – ಆರ್ಥಿಕ ದುರುಪಯೋಗದ ಆರೋಪದ ಮೇಲೆ ಚೀನಾದ ಇಬ್ಬರು ಪ್ರಜೆಗಳಾದ ಚಾರ್ಲಿ ಪೆಂಗ್ ಮತ್ತು ಕಾರ್ಟರ್ ಲೀ ಅವರನ್ನು ಜಾರಿ ನಿರ್ದೇಶನಾಲಯ (ಈಡಿ) ಬಂಧಿಸಿದೆ. ಇಬ್ಬರೂ ದೆಹಲಿಯಲ್ಲಿ ವಾಸಿಸುತ್ತಿದ್ದು ಚೀನಾದ ಸಂಸ್ಥೆಗಳಿಗಾಗಿ ಬೃಹತ್ ಪ್ರಮಾಣದಲ್ಲಿ ದಂಧೆಗಳನ್ನು ನಡೆಸುತ್ತಿದ್ದರು ಮತ್ತು ಭಾರತ ಸರಕಾರಕ್ಕೆ ಕೋಟಿಗಟ್ಟಲೆ ರೂಪಾಯಿಗಳ ನಷ್ಟವನ್ನುಂಟು ಮಾಡುತ್ತಿದ್ದರು. ಕಳೆದ ವರ್ಷ ಆದಾಯ ತೆರಿಗೆ ಇಲಾಖೆಯು ಚಾರ್ಲಿ ಪೆಂಗ್ ಅವರ ಸ್ಥಳದಲ್ಲಿ ದಾಳಿ ನಡೆಸಿತ್ತು. ವಿಚಾರಣೆಯಲ್ಲಿ ಚಾರ್ಲಿ ಪೆಂಗ್ ಭಾರತದಲ್ಲಿ ಹವಾಲಾ ದಂಧೆಯಲ್ಲಿ ಭಾಗಿಯಾಗಿರುವುದು ಮಾತ್ರವಲ್ಲ, ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ವಿರುದ್ಧ ಬೇಹುಗಾರಿಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
(ಸೌಜನ್ಯ : india today)