ಹಿಂದಿ ಪಾಕ್ಷಿಕ ‘ಸನಾತನ ಪ್ರಭಾತ’ ನ ೨೧ ನೇ ವರ್ಧಂತ್ಯುತ್ಸವದ ನಿಮಿತ್ತ ಟ್ವಿಟ್ಟರ್ ನಲ್ಲಿ #21YearsOfSanatanPrabhat ಎಂಬ ಹ್ಯಾಶ್‌ಟ್ಯಾಗ್ ಮೂಲಕ ವ್ಯಾಪಕವಾಗಿ ಧರ್ಮಪ್ರಸಾರ !

ಮುಂಬೈ – ಹಿಂದಿ ಪಾಕ್ಷಿಕ ಸನತನ ಪ್ರಭಾತವು ಈಗ ೨೧ ವರ್ಷಗಳನ್ನು ಪೂರೈಸಿದೆ. ಈ ನಿಮಿತ್ತ ಜನವರಿ ೧೬ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಧರ್ಮಸಂವಾದ’ದಲ್ಲಿ ಪಾಕ್ಷಿಕದ ಆನ್‌ಲೈನ್ ವರ್ಧಂತ್ಯುತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದರ ನಂತರ ಜನವರಿ ೧೭ ರಂದು ಟ್ವಿಟರ್‌ನಲ್ಲಿ #21YearsOfSanatanPrabhat ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಲಾಯಿತು. ಸನಾತನ ಪ್ರಭಾತದ ವಾಚಕರು, ಹಿತೈಷಿಗಳು, ಹಿಂದುತ್ವನಿಷ್ಠರು ಮತ್ತು ಧರ್ಮಪ್ರೇಮಿಗಳು ಟ್ರೆಂಡ್ ಮಾಡಿದರು.


ಈ ಟ್ರೆಂಡ್ ಮೂಲಕ ೧೫೦೦೦ ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ. ಇದರಲ್ಲಿ ಸನಾತನ ಪ್ರಭಾತದ ವೈಶಿಷ್ಟ್ಯಗಳು, ಅದರ ಉದ್ದೇಶ, ರಾಷ್ಟ್ರ ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ಸನಾತನ ಪ್ರಭಾತ ಇಲ್ಲಿಯವರೆಗೆ ಮಾಡಿದ ಕಾರ್ಯ, ಸನಾತನ ಪ್ರಭಾತ ಬಗ್ಗೆ ಸಂತರ ಪ್ರಶಂಸೆ ಕುರಿತು ಟ್ವೀಟ್ಸ್ ಮಾಡಲಾಯಿತು.

ಈ ಮೂಲಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಸನಾತನ ಪ್ರಭಾತದ ವಿಚಾರ ಲಕ್ಷಾಂತರ ಹಿಂದೂಗಳಿಗೆ ತಲುಪಿತು. ಟೆಲಿಗ್ರಾಮ್, ಟ್ವಿಟರ್, ಫೇಸ್‌ಬುಕ್, ಡೈಲಿ ಹಂಟ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ‘ಸನಾತನ ಪ್ರಭಾತ್’ ಖಾತೆಗಳಿಂದ ಪ್ರಸಾರ ಮಾಡಲಾಯಿತು. ಹಿಂದೂಗಳಿಗೆ ಸನಾತನ ಪ್ರಭಾತ ಪತ್ರಿಕೆಗೆ ಚಂದಾದಾರರಾಗುವಂತೆ ಮನವಿ ಮಾಡಲಾಯಿತು.