ನವ ದೆಹಲಿ -ವೆಬ್ ಸಿರೀಸ್ ತಾಂಡವದ ನಿರ್ಮಾಪಕ, ಹಿಮಾಂಶು ಮೆಹರಾ, ನಿರ್ದೇಶಕ ಅಬ್ಬಾಸ್ ಜಾಫರ್, ಲೇಖಕ ಗೌರವ ಸೊಳಂಕಿ ಮತ್ತು ನಟ ಮೊಹಮದ್ ಝಿಶಾನ್ ಅಯ್ಯುಬ ಇವರ ಬಂಧನದ ಆದೇಶಕ್ಕೆ ತಡೆ ನೀಡಲು ‘ಅಮೆಝಾನ್ ಇಂಡಿಯಾ’ವು ಮಾಡಿದ ಆಗ್ರಹವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ. ಅಲ್ಲದೇ ಅವರಿಗೆ ಉಚ್ಚ ನ್ಯಾಯಾಲಯಕ್ಕೆ ಹೋಗಲು ತಿಳಿಸಿದೆ ಹಾಗೂ ಈ ಸಂದರ್ಭದಲ್ಲಿ ಎಲ್ಲರ ಮೇಲೆ ದಾಖಲಿಸಿರುವ ಖಟ್ಲೆಗಳ ಆಲಿಕೆಯನ್ನು ಒಟ್ಟಾಗಿ ಮಾಡುವ ವಿಷಯದಲ್ಲಿ ನೋಟಿಸನ್ನು ಜ್ಯಾರಿಗೊಳಿಸಿದೆ. ಈಗ ವಿಷಯದಲ್ಲಿ ಆಲಿಕೆಯು ೪ ವಾರಗಳ ನಂತರ ನಡೆಯಲಿದೆ.