* ಅನೇಕ ಮಕ್ಕಳನ್ನು ಹುಟ್ಟಿಸುವುದಕ್ಕಿಂತ ಈಗಿರುವ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಿ ಅವರನ್ನು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಾಗಿ ಹೇಗೆ ಮಾಡಬಹುದು ಎಂಬುದನ್ನು ನೋಡಬೇಕಾಗಿದೆ ! * ಪಾಂಡವರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ, ಅವರು ಕೌರವರ ವಿರುದ್ಧ ಯುದ್ಧವನ್ನು ಗೆದ್ದರು; ಏಕೆಂದರೆ ಅವರಿಗೆ ಭಗವಾನ್ ಶ್ರೀಕೃಷ್ಣನ ಆಶೀರ್ವಾದವಿತ್ತು. ಅದೇ ರೀತಿ, ಹಿಂದೂಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಆದರೆ ಹಿಂದೂಗಳ ಸಂಖ್ಯೆ ಚಿಕ್ಕದಾಗಿದ್ದರೂ, ಈಶ್ವರನ ಅಧಿಷ್ಠಾನವಿದ್ದರೆ, ಅವರು ಮತಾಂಧ ಶಕ್ತಿಗಳು ಸೃಷ್ಟಿಸಿದ ಸಮಸ್ಯೆಗಳನ್ನು ನಿವಾರಿಸುತ್ತಾರೆ, ಎಂಬುವುದು ಸತ್ಯ |
ಮೀರಠ (ಉತ್ತರ ಪ್ರದೇಶ) – ಕುಟುಂಬ ಯೋಜನೆ ನಿಯಮಗಳನ್ನು ರೂಪಿಸದಿರುವ ತನಕ, ನಾವು ’ಹಮ್ ದೋ ಹುಮಾರೆ ಪಾಚ್’ ಸಂಕಲ್ಪವನ್ನು ಮಾಡಬೇಕು. ‘ಕುಟುಂಬ ಯೋಜನೆಯ ದೃಢ ನಿಯಮಗಳು ರೂಪಿಸುವ ತನಕ ’ಹಮ್ ದೋ ಹಮಾರೆ ದೊ’ ತತ್ವವನ್ನು ರದ್ದುಗೊಳಿಸಬೇಕು’, ಎಂದು ಇಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಜೆಪಿಯ ವಾಣಿಜ್ಯ ವಿಭಾಗದ ಉತ್ತರ ಪ್ರದೇಶದ ಸಂಯೋಜಕರಾದ ವಿನೀತ್ ಅಗರ್ವಾಲ್ ಶಾರದಾ ಹೇಳಿದರು.
प्रजासत्ताक दिनानिमित्त आयोजित कार्यक्रमात भाजपा नेत्याचं आवाहनhttps://t.co/SiEV1y5bs8#BJP pic.twitter.com/jADGfNmFtE
— Lokmat (@MiLOKMAT) January 27, 2021
ಶಾರದಾ ಇವರು ಮಂಡಿಸಿದ ಅಂಶಗಳು ಮುಂದಿನಂತಿವೆ,
೧. ಈ ೫ ಮಕ್ಕಳಲ್ಲಿ ಹೆಚ್ಚು ವಿದ್ಯಾವಂತರನ್ನು ರಾಜಕೀಯಕ್ಕೆ ಕಳುಹಿಸಬೇಕು. ಘನತೆ, ಮರ್ಯಾದೆ ಮತ್ತು ಪ್ರತಿಷ್ಠೆಯನ್ನು ರಕ್ಷಿಸಲು ಒಂದು ಮಗುವಿಗೆ ಆಯುಧಗಳನ್ನು ಖರೀದಿಸಲು ಮತ್ತು ಉಪಯೋಗಿಸಲು ಕಲಿಸಿ. ಒಂದು ಮಗುವನ್ನು ಭಾರತೀಯ ಸೇನೆಯಲ್ಲಿ ಸೇರಿಸಿ. ಒಬ್ಬನನ್ನು ವ್ಯಾಪಾರಕ್ಕೆ ಮತ್ತು ಒಂದು ಮಗುವನ್ನು ಐಎಎಸ್ ಅಥವಾ ಪಿಸಿಎಸ್ ಅಧಿಕಾರಿ ಮಾಡಿ ಭಾರತೀಯರ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕು.
೨. ದಶರಥ ಮಹಾರಾಜನಿಗೆ ೪ ಗಂಡು ಮಕ್ಕಳಿಲ್ಲದಿದ್ದರೆ, ರಾವಣನ ಆಳ್ವಿಕೆಯು ಇಂದಿಗೂ ಕೊನೆಗೊಳ್ಳುತ್ತಿರಲಿಲ್ಲ. ಅದಕ್ಕಾಗಿಯೇ ದೇಶಕ್ಕೆ ‘ಹಮ್ ದೋ ಹಮಾರೆ ಪಾಚ್’ ಅಗತ್ಯವಿದೆ. ಅದು ಸಂಭವಿಸದಿದ್ದರೆ, ಭಾರತಮಾತೆ ಮತ್ತೊಮ್ಮೆ ಕಣ್ಣೀರಿಡುತ್ತಾಳೆ. ಭಾರತ ಮಾತೆ ಮತ್ತೊಮ್ಮೆ ಕೈಕೋಳ ಧರಿಸಬೇಕಾದೀತು; ಇನ್ನೊಂದು ಪಾಕಿಸ್ತಾನದ ಬೇಡಿಕೆ ಮುಂದೆ ಬಂದೀತು. ಅದಕ್ಕಾಗಿಯೇ ನಾನು ಭಾರತಮಾತೆಗೆ ನಮಸ್ಕರಿಸುವಾಗ ‘ಹಮ್ ದೊ ಹುಮಾರೆ ಪಾಚ್’ ಅನ್ನು ಬೆಂಬಲಿಸುತ್ತೇನೆ.