ನವ ದೆಹಲಿ – ಚೀನಾದಿಂದಾಗುತ್ತಿರುವ ಅಪಪ್ರಚಾರವನ್ನು ತಡೆಗಟ್ಟಲು ಭಾರತೀಯ ಸೈನ್ಯವು ಟಿಬೇಟ್‌ನ ಇತಿಹಾಸ, ಅಲ್ಲಿನ ಸಂಸ್ಕೃತಿ ಮತ್ತು ಭಾಷೆಯನ್ನು ಅರಿತುಕೊಳ್ಳುವ ರಣನೀತಿಯನ್ನು ರೂಪಿಸಿದೆ. ಪ್ರತ್ಯಕ್ಷ ನಿಯಂತ್ರಣ ರೇಖೆಯ ಎರಡೂ ಬದಿಯಲ್ಲಿರುವ ಟಿಬೇಟ್ ಅನ್ನು ಆಳವಾಗಿ ಅಧ್ಯಯನ ಮಾಡುವಂತೆ ಸೈನಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗುವುದು. ಆರ್ಮಿ ಟ್ರೈನಿಂಗ್ ಕಮಾಂಡ್ (ಎ.ಆರ್.ಟಿ.ಆರ್.ಎ.ಸಿ.) ಈ ಸಂದರ್ಭದ ಪ್ರಸ್ತಾಪದ ವಿಶ್ಲೇಷಣೆಯ ಬಗ್ಗೆ ಕೆಲಸ ಮಾಡುತ್ತಿದೆ. ಎ.ಆರ್.ಟಿ.ಆರ್.ಎ.ಸಿ.ಯು ಟಿಬೆಟನಲ್ಲಿ ಪದವ್ಯುತ್ತರ ಶಿಕ್ಷಣ ನೀಡುವ ೭ ಸಂಸ್ಥೆಗಳ ಮಾಹಿತಿಯನ್ನು ಪಡೆದುಕೊಂಡಿದೆ. ಈ ಸ್ಥಳದಲ್ಲಿ ಸೈನ್ಯಾಧಿಕಾರಿಗಳನ್ನು ಶಿಕ್ಷಣಕ್ಕಾಗಿ ಕಳುಹಿಸಬಹುದು.