ಮುಸಲ್ಮಾನ ಆಡಳಿತಗಾರರ ಕಾಲದ ಭೋಪಾಲ್‌ದಲ್ಲಿರುವ ಎಲ್ಲ ಅಪವಿತ್ರ ಹೆಸರುಗಳನ್ನು ನಾವು ಬದಲಾಯಿಸುತ್ತೇವೆ! – ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೇವಲ ಭೋಪಾಲ ಮಾತ್ರವಲ್ಲ ಭಾರತದಾದ್ಯಂತ ಇರುವ ಇಂತಹ ಹೆಸರುಗಳನ್ನು ಬದಲಾಯಿಸುವುದನ್ನು ಎಂದು ಹಿಂದೂಗಳು ನಿರೀಕ್ಷಿಸುತ್ತಿದ್ದಾರೆ !

ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಭೋಪಾಲ್ (ಮಧ್ಯ ಪ್ರದೇಶ) – ಯಾವುದೇ ಸ್ಥಳಕ್ಕೆ ವ್ಯಕ್ತಿಯ ಹೆಸರಿಡುವುದರಿಂದ ಆ ಸ್ಥಳ ಮತ್ತು ಜನರ ಮೇಲೆ ಅದರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಭೋಪಾಲ್‌ನ ‘ಲಾಲ್‌ಘಾಟಿ’ಯಲ್ಲಿ ರಾಣಿಯ ಮಕ್ಕಳನ್ನು ಕೊಲ್ಲಲಾಯಿತು. ಕೊಲೆಯ ನಂತರ ಘಾಟ್ ಕೆಂಪು ಬಣ್ಣಕ್ಕೆ ತಿರುಗಿತ್ತು. ಅದಕ್ಕಾಗಿಯೇ ಅದಕ್ಕೆ ’ಲಾಲ್‌ಘಾಟಿ’ ಎಂದು ಹೆಸರಿಡಲಾಯಿತು. ಈ ಸ್ಥಳಕ್ಕೆ ’ರಕ್ತದಿಂದ ಕೂಡಿದ ಘಾಟ್’ ಎಂದು ಹೆಸರಿಸಲಾಗಿದೆ. ಅದೇ ರೀತಿ ‘ಹಲಾಲಿ ಅಣೆಕಟ್ಟು’ ಪ್ರದೇಶದಲ್ಲಿ ಮೊಹಮ್ಮದ್ ಖಾನ್‌ನು ಸ್ಥಳೀಯ ರಾಜರನ್ನು ‘ಹಲಾಲ್’ ಮಾಡಿ ಕೊಂದಿದ್ದರು. ಅದಕ್ಕಾಗಿಯೇ ಈ ಸ್ಥಳಕ್ಕೆ ‘ಹಲಾಲಿ’ ಎಂಬ ಹೆಸರು ಬಂದಿದೆ. ಈ ಹೆಸರುಗಳು ಮತ್ತು ಅವುಗಳ ಹಿಂದಿನ ಇತಿಹಾಸವು ಬಹಳ ಅಪವಿತ್ರವಾಗಿದೆ. ಅಂತಹ ಹೆಸರನ್ನು ಉಚ್ಚರಿಸುವುದು ಅಪವಿತ್ರತೆಯನ್ನು ಹರಡುತ್ತದೆ ಮತ್ತು ನಕಾರಾತ್ಮಕ ಪ್ರಚಾರವನ್ನು ಉತ್ತೇಜಿಸುತ್ತದೆ. ಅಂತಹ ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ರಕ್ತಸಿಕ್ತ ಇತಿಹಾಸ ಹೊಂದಿರುವ ಭೋಪಾಲ್‌ನ ಎಲ್ಲ ಸ್ಥಳಗಳ ಹೆಸರನ್ನು ನಾವು ಅಳಿಸಲಿದ್ದೇವೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇವರು ಇಲ್ಲಿ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು. ‘ಹಲಾಲ್ಪುರ ಬಸ್ ನಿಲ್ದಾಣ’ ಮತ್ತು ’ಇಸ್ಲಾಂನಗರ’ ಹೆಸರುಗಳನ್ನು ಬದಲಾಯಿಸಬೇಕು ಮತ್ತು ಈ ಸ್ಥಳಗಳಿಗೆ ಕ್ರಾಂತಿಕಾರಿಗಳ ಹೆಸರನ್ನು ಇಡಬೇಕು’ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಒತ್ತಾಯಿಸಿದ್ದಾರೆ. (ಅಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗಿದೆ? ಸರ್ಕಾರ ಅದನ್ನು ಸ್ವತಃ ಏಕೆ ಬದಲಾಯಿಸುವುದಿಲ್ಲ? – ಸಂಪಾದಕರು)

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರು ಕೆಲವು ದಿನಗಳ ಹಿಂದೆ ‘ಹಲಾಲಿ ಅಣೆಕಟ್ಟಿ’ನ ಮರುನಾಮಕರಣಕ್ಕೆ ಒತ್ತಾಯಿಸಿದ್ದರು. ಇದಕ್ಕಾಗಿ ಅವರು ಬೈರಸಿಯಾದ ಬಿಜೆಪಿ ಶಾಸಕ ವಿಷ್ಣು ಖತ್ರಿ ಅವರಿಗೆ ಪತ್ರ ಬರೆದಿದ್ದರು. ‘ಖತ್ರಿಯವರು ಇದನ್ನು ರಾಜ್ಯದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಅವರೊಂದಿಗೆ ಚರ್ಚಿಸಬೇಕು’, ಎಂದು ಉಮಾ ಭಾರತಿ ಪತ್ರದಲ್ಲಿ ತಿಳಿಸಿದ್ದಾರೆ. ‘ಈ ಸ್ಥಳ ಮತ್ತು ಅದರ ಹೆಸರು ವಿಶ್ವಾಸಘಾತವನ್ನು ನೆನಪಿಸುತ್ತದೆ. ಅದಕ್ಕಾಗಿಯೇ ಹೆಸರನ್ನು ಬದಲಾಯಿಸಬೇಕು’ ಎಂದು ಉಮಾ ಭಾರತಿ ಹೇಳಿದ್ದರು.