ನೇತಾಜಿ ಬೋಸ್ ಇವರ ಕಾರ್ಯಕ್ರಮದಲ್ಲಿ ‘ಜಯ ಶ್ರೀರಾಮ’ನ ಘೋಷಣೆ ಕೂಗುವುದು ಅಯೋಗ್ಯವಾಗಿದೆ ! – ರಾ.ಸ್ವ. ಸಂಘ

ರಾ.ಸ್ವ.ಸಂಘದ ಪ್ರಧಾನಕಾರ್ಯದರ್ಶಿ ಜಿಶನ ಬಸು

ಕೋಲಕಾತಾ (ಬಂಗಾಲ)- ೨೩ ಜನವರಿಯಂದು ಕೋಲಕತಾದಲ್ಲಿ ಪ್ರಧಾನಮಂತ್ರಿ ಮೋದಿಯವರ ಉಪಸ್ಥಿತಿಯಲ್ಲಿ ನಡೆದ ನೇತಾಜಿ ಸುಭಾಶ್ಚಂದ್ರ ಬೋಸ ಇವರ ೧೨೫ ನೆಯ ಜಯಂತಿಯ ಕಾರ್ಯಕ್ರಮವನ್ನು ಒಬ್ಬ ಮಹಾನ್ ಸ್ವಾತಂತ್ರ್ಯ ಸೈನಿಕನ ಸ್ಮೃತಿಗಳ ಮೇಲೆ ಬೆಳಕು ಚೆಲ್ಲುವ ದೃಷ್ಟಿಯಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ‘ಜಯ ಶ್ರೀರಾಮ’ ಘೋಷಣೆ ನೀಡಿದ್ದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮರ್ಥನೆ ಮಾಡುವುದಿಲ್ಲ ಎಂದು ಬಂಗಾಲದ ರಾ.ಸ್ವ.ಸಂಘದ ಪ್ರಧಾನಕಾರ್ಯದರ್ಶಿ ಜಿಶನ ಬಸು ಹೇಳಿದ್ದಾರೆ. ಈ ಘೋಷಣೆಯ ಬಗ್ಗೆ ಮಮತಾ ಬ್ಯಾನರ್ಜಿಯವರು ಆಕ್ರೋಶಗೊಂಡು ಭಾಷಣವನ್ನು ಮಾಡಲು ನಿರಾಕರಿಸಿದ್ದರು.

ಈ ಘಟನೆಯ ಬಗ್ಗೆ ಸಂಘವು ಅಸಮಾಧಾನಗೊಂಡಿದೆ. ಯಾರು ಜಯ ಶ್ರೀರಾಮ ಘೋಷಣೆಯನ್ನು ನೀಡಿದ್ದಾರೆಯೋ ಅವರು ನೇತಾಜಿಯವರನ್ನು ಗೌರವಿಸುತ್ತಿಲ್ಲ ಮತ್ತು ಅವರಿಗೆ ‘ಶ್ರೀ ರಾಮನ ವಿಷಯದಲ್ಲಿ ಶ್ರದ್ಧೆ’ ಇಲ್ಲ. ಈ ಪ್ರಕರಣದಲ್ಲಿ ಘೋಷಣೆ ನೀಡಿದ ವ್ಯಕ್ತಿಯನ್ನು ಪತ್ತೆ ಹಚ್ಚಬೇಕು ಎಂದು ಅವರು ಭಾಜಪದ ಬಳಿ ಆಗ್ರಹಿಸಿದ್ದಾರೆ.