ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ೨೬ ಜನರ ವಿರುದ್ಧ ಅಪರಾಧ ದಾಖಲು

ಸರ್ಕಾರವು ಕೇವಲ ಅಪರಾಧಗಳನ್ನು ನೋಂದಾಯಿಸಿ ಅಲ್ಲಿಗೇ ನಿಲ್ಲದೇ ತಕ್ಷಣ ಅವರನ್ನು ಬಂಧಿಸಿ, ಅವರನ್ನು ಜೈಲಿಗಟ್ಟಬೇಕು ಮತ್ತು ಶೀಘ್ರ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು!

ನವ ದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ರಾಕೇಶ ಟಿಕೈಟ್, ಸರ್ವಾನ್‌ಸಿಂಗ್ ಪಂಡೇರ್, ಸತನಾಮಸಿಂಗ್ ಪನ್ನು ಸಹಿತ ಯೋಗೇಂದ್ರ ಯಾದವ್, ಪಂಜಾಬಿ ನಟ ಮತ್ತು ಗಾಯಕ ದೀಪ ಸಿದ್ಧೂ ಮತ್ತು ಲಖ್ಬೀರ್ ಸಿಂಗ್ ಅಲಿಯಾಸ್ ಲಖಾ ಸಿದ್ಧನಾ ಸೇರಿದ್ದಾರೆ. ಈವರೆಗೆ ಒಟ್ಟು ೨೬ ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಟ್ರ್ಯಾಕ್ಟರ್ ರ‍್ಯಾಲಿಗೆ ನಿಗದಿಪಡಿಸಿದ ಷರತ್ತುಗಳನ್ನು ಅವರು ಪಾಲಿಸಲಿಲ್ಲ ಎಂದು ಆರೋಪಿಸಲಾಗಿದೆ.

ಅಪರಾಧ ದಾಖಲಾದ ನಾಯಕರು

ನರ್ಮದಾ ಬಚಾವೊ ಆಂದೋಲನ್ ದ ಮೇಧಾ ಪಾಟ್ಕರ್, ’ಸ್ವರಾಜ್ ಇಂಡಿಯಾ’ದ ಯೋಗೇಂದ್ರ ಯಾದವ್, ಜಮ್ಮುರಿ ಕಿಸಾನ್ ಸಭಾ ಪಂಜಾಬಿನ ಕುಲ್ವಂತ್ ಸಿಂಗ್ ಸಂಧು, ಭಾರತೀಯ ಕಿಸಾನ್ ಸಭಾ ಡಕೋಡಾದ ಬುಟಾ ಸಿಂಗ್, ಕವನಲ್ಪ್ರೀತ್ ಸಿಂಗ್ ಪನ್ನು, ಕಿಸಾನ್ ಮಜ್ದೂರು ಸಂಘರ್ಷ ಸಮಿತಿಯ ಸತ್ನಾಮ ಸಿಂಗ್ ಪನ್ನು, ಸುರ್ಜೀತ್ ಸಿಂಗ್ ಫೂಲ್, ಜೋಗಿಂದರ್ ಸಿಂಗ್ ಹರ್ಮೀತ್ ಸಿಂಗ್ ಕಾದಿಯಾನ್, ಬಲ್ವೀರ್ ಸಿಂಗ್ ರಾಜೆವಾಲ್, ಸಾತ್ನಾಮ್ ಸಿಂಗ್ ಸಾಹ್ನಿ, ಡಾ. ದರ್ಶನ್ ಪಾಲ್, ಭಗಬಸಿಂಗ್ ಮನ್ಸಾ ಬಲ್ವಿಂದರ್ ಲಿಯೋ ಓಲಾಕ್, ಸತ್ನಮ್ ಸಿಂಗ್ ಭೇರು, ಬುಟಾಸಿಂಗ್ ಶಾದಿಪುರ್, ಬಲ್ದೇವ್ ಸಿಂಗ್ ಸಿರ್ಸಾ, ಜಗ್ಬೀರ್ ಸಿಂಗ್ ತಾಡಾ, ಮುಕೇಶ್ ಚಂದ್ರ, ಸುಖ್ಪಾಲ್ ಸಿಂಗ್ ದಾಫರ್, ಹರ್ಪಾಲ್ ಸಾಂಗಾ, ಕೃಪಾಲ್ ಸಿಂಗ್ ನಟುವಾಲಾ, ರಾಕೇಶ್ ಟಿಕೈತ್, ಕವಿತಾ, ಋಷಿಪಾಲ್ ಅಂಬಾವತಾ, ವಿ. ಎಮ್. ಸಿಂಗ್, ಪ್ರೇಮ್‌ಸಿಂಗ್ ಗೆಹ್ಲೋಟ್ ಇವರುಗಳ ಮೇಲೆ ಪಿತೂರಿ, ದರೋಡೆ, ದರೋಡೆ ಸಮಯದಲ್ಲಿ ಮಾರಕ ಆಯುಧಗಳನ್ನು ಬಳಸುವುದು, ಕೊಲೆ ಯತ್ನ ಮುಂತಾದ ಗಂಭೀರ ಅಪರಾಧಗಳು ಸೇರಿದಂತೆ ಒಟ್ಟು ೧೩ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.