ಪಾಕಿಸ್ತಾನದ ಗುಪ್ತಚರ ಸಂಘಟನೆ ಐ.ಎಸ್.ಐ. ಮಾಜಿ ಮುಖ್ಯಸ್ಥ ಭಾರತದ ಗುಪ್ತಚರ (ನಂತೆ) ! – ಪಾಕಿಸ್ತಾನದ ಆರೋಪ


ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಗುಪ್ತಚರ ಸಂಘಟನೆ ಐ.ಎಸ್.ಐ.ನ ಮಾಜಿ ಮುಖ್ಯಸ್ಥ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ ನ) ಜನರಲ್ ಅಸದ ದುರ್ರ‍ಾನಿ ಇವರು ಭಾರತೀಯ ಗುಪ್ತಚರ ಸಂಘಟನೆ ‘ರಾ’ದ (ರಿಸರ್ಚ್ ಆಂಡ್ ಎನಾಲಿಸಿಸ್ ವಿಂಗ್’ನ) ಗುಪ್ತಚರರಾಗಿದ್ದರು ಎಂದು ಪಾಕಿಸ್ತಾನ ಸರಕಾರವು ಹೇಳಿದೆ. ಅಸದ್ ದುರ್ರ‍ಾನಿ ಇವರು ‘ರಾ’ದ ಜೊತೆಗೆ ೨೦೦೮ ರಿಂದ ಸಂಪರ್ಕದಲ್ಲಿದ್ದರು. ಅದರ ಪುರಾವೆಗಳು ಸಹ ಲಭ್ಯವಿವೆ ಎಂದು ಪಾಕ್ ಸರಕಾರವು ಹೇಳಿದೆ.

. ಅಸದ ದುರ್ರ‍ಾನಿಯವರ ಹೆಸರು ‘ರಾ’ದ ಮಾಜಿ ಮುಖ್ಯಸ್ಥ ಎ.ಎಸ್. ದುಲ್ಲತ್ ಇವರೊಂದಿಗೆ ಜೋಡಿಸಲಾಗಿದೆ. ಇವರಿಬ್ಬರೂ ಕೆಲವು ವರ್ಷಗಳ ಹಿಂದೆ ಸೇವಾ ನಿವೃತ್ತರಾದ ನಂತರ ‘ದ ಸ್ಪೈ ಕ್ರಾನಿಕಲ್ಸ್ : ರಾ, ಐ.ಎ.ಐಎಸ್ ಆಂಡ್ ದ ಇಲ್ಯೂಸನ್ ಆಫ್ ಪೀಸ್’ ಈ ಪುಸ್ತಕವನ್ನು ಬರೆದರು. ಈ ಪುಸ್ತಕದಲ್ಲಿ ಪಾಕಿಸ್ತಾನದ ಸೈನ್ಯವನ್ನು ಬಹಳ ಅವಮಾನಿಸಲಾಗಿದೆ. ಈ ಪುಸ್ತಕದಲ್ಲಿ ಕಾಶ್ಮೀರ, ಬುರಹಾನ ವಾನಿ, ಹಾಫೀಜ್ ಸಯಿದ್, ಕಾರ್ಗಿಲ್ ಯುದ್ಧ, ಕುಲಭೂಷಣ ಜಾಧವ, ಬಲುಚಿಸ್ತಾನ, ಸರ್ಜಿಕಲ್ ಸ್ಟ್ರೈಕ್ ಮುಂತಾದವುಗಳ ಉಲ್ಲೇಖವಿದೆ. ಒಸಾಮಾ ಬಿನ್ ಲಾಡೆನ್‌ನ್ನು ಕೊಲ್ಲಲು ಪಾಕಿಸ್ತಾನ ಮತ್ತು ಅಮೇರಿಕಾ ದ ನಡುವೆ ಒಂದು ರಹಸ್ಯಮಯ ಒಪ್ಪಂದವಾಗಿತ್ತು. ಈ ಪುಸ್ತಕದಿಂದಾಗಿ ೨೦೧೮ ನೇ ಇಸ್ವಿಯಲ್ಲಿ ಪಾಕಿಸ್ತಾನೀ ಸೈನ್ಯವು ದುರ್ರ‍ಾನಿಯವರ ಮೇಲೆ ಸೈನ್ಯದ ಆಚಾರಸಂಹಿತೆಯನ್ನು ಉಲ್ಲಂಘಿಸಿದ ಆರೋಪ ಮಾಡಿತ್ತು.

೨. ಎಕ್ಸಿಟ್ ಕಂಟ್ರೋಲ್ ಲಿಸ್ಟ್, ನಲ್ಲಿ ನನ್ನ ಹೆಸರನ್ನು ಪಾಕ್ ಸರಕಾರವು ತಪ್ಪಾಗಿ ಸೇರಿಸಿದೆ, ಎಂದು ದಾವೆ ಹೂಡಿ ದುರ್ರ‍ಾನಿಯವರು ಉಚ್ಚ ನ್ಯಾಯಾಲಯದಲ್ಲಿ ಯಾಚಿಕೆಯನ್ನು ದಾಖಲಿಸಿದ್ದಾರೆ. ನನಗೆ ವಿದೇಶಕ್ಕೆ ಹೋಗಬೇಕಾಗಿದೆ. ಹಾಗಾಗಿ ಸರಕಾರವು ನಿರ್ಬಂಧವನ್ನು ತೆಗೆಯಬೇಕು ಎಂದು ಅವರೂ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಈ ಪ್ರಕರಣದ ಆಲಿಕೆಯಾಗುವ ಸಾಧ್ಯತೆ ಇದೆ.