ಹೊಸೂರು (ಬೆಳಗಾವಿ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಕೊಲೆಗೆ ಯತ್ನ

ಕಳೆದ ಕೆಲವು ದಿನಗಳಲ್ಲಿ, ಹಿಂದೂ ಸಾಧುಗಳು, ಸಂತರು ಮತ್ತು ಮಗಂತರ ಮೇಲೆ ಹೆಚ್ಚುತ್ತಿರುವ ಮಾರಣಾಂತಿಕ ದಾಳಿಗಳು ಆತಂಕದ ವಿಷಯವಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಗಮನ ಹರಿಸುವುದು ಅತ್ಯಗತ್ಯ !

ಬೆಳಗಾವಿ – ಹೊಸೂರಿನ (ತಾಲ್ಲೂಕು ಬೈಲಹೋಂಗಲ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಮೇಲೆ ಮೇ 20 ರಂದು ತಡರಾತ್ರಿ ಮಾರಣಾಂತಿಕ ಹಲ್ಲೆಯಾಗಿದೆ. ಅಜ್ಞಾತ ವ್ಯಕ್ತಿಯೊಬ್ಬ ತಡರಾತ್ರಿ ಕಳ್ಳತನ ಮಾಡುವ ಉದ್ದೇಶದಿಂದ ಮಠಕ್ಕೆ ಪ್ರವೇಶಿಸಿ ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಸ್ವಾಮೀಜಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಹೊಸೂರು ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.