ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ರ್ಯಾಲಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ 19 ವರ್ಷದ ವಿದ್ಯಾರ್ಥಿನಿ ಅಮುಲ್ಯ ಲಿಯೋನಾ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದಾರೆ. ಅಮುಲ್ಯ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆ ಮಾಡುವುದರಿಂದ ಸಾಕ್ಷಿದಾರರಿಗೆ ಬೆದರಿಸಬಹುದು. ಸಿಎಎ, ಎನ್.ಆರ್.ಸಿ. ಮತ್ತು ಎನ್.ಪಿ.ಆರ್. ಈ ಕಾನೂನುಗಳನ್ನು ವಿರೋಧಿಸುವ ಘಟನೆಗಳನ್ನು ಅವಳು ಆಯೋಜಿಸಬಹುದು ಅಥವಾ ಅವಳು ಅಂತಹ ಘಟನೆಗಳಲ್ಲಿ ಭಾಗವಹಿಸಬಹುದು ಮತ್ತು ಅಲ್ಲಿಂದ ಅವಳು ಮತ್ತೆ ಅದೇ ರೀತಿಯ ದೇಶದ್ರೋಹವನ್ನು ಮಾಡಬಹುದು, ಎಂದುಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ