ಮುಸಲ್ಮಾನರ ಹಣವನ್ನು ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು ! – ಕಾಂಗ್ರೆಸ್ ಶಾಸಕ ಜಮೀರ ಅಹಮದ್‌ರಿಂದ ವಕ್ಫ ಬೋರ್ಡ್‌ಗೆ ವಿರೋಧ

ವಕ್ಫ ಬೋರ್ಡ್ ಕೊರೋನಾದ ವಿರುದ್ಧ ಹೋರಾಡಲು ಸರಕಾರಕ್ಕೆ ಹಣ ನೀಡುವ ಪ್ರಕರಣ

ಒಂದೆಡೆ ಕಾಂಗ್ರೆಸ್ ನಾಯಕ ಪೃಥ್ವಿರಾಜ ಚಹ್ವಾಣ ಹಿಂದೂಗಳ ದೇವಸ್ಥಾನದ ಬಂಗಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದರೆ ಮತ್ತೊಂದೆಡೆ ಕಾಂಗ್ರೇಸ್ಸಿನ ಮುಸಲ್ಮಾನ ಶಾಸಕ ಅವರ ಧಾರ್ಮಿಕ ಸಂಸ್ಥೆಯ ಹಣವನ್ನು ಕೇವಲ ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು, ಎಂದು ಹೇಳುತ್ತಿದ್ದಾರೆ. ಇದರಿಂದ ಮುಸಲ್ಮಾನ ಜನಪ್ರತಿನಿಧಿಗಳು ಯಾವಾಗಲೂ ಧರ್ಮಕ್ಕೆ ಪ್ರಾಮುಖ್ಯತೆ ನೀಡುತ್ತಾರೆ, ಎಂಬುದು ಗಮನದಲ್ಲಿಡಿ.

ಹಿಂದೂಗಳ ದೇವಸ್ಥಾನವನ್ನು ಸರಕಾರಿಕರಣಗೊಳಿಸಿ ಅದರ ಹಣವನ್ನು ಇತರ ಧರ್ಮಗಳಿಗಾಗಿ ಖರ್ಚು ಮಾಡಲಾಗುತ್ತದೆ, ಅದಕ್ಕೆ ಯಾವುದೇ ಹಿಂದೂ ಜನಪ್ರತಿನಿಧಿ ವಿರೋಧಿಸುವುದಿಲ್ಲ; ಮುಸಲ್ಮಾನ ಜನಪ್ರತಿನಿಧಿಗಳು ಮಾತ್ರ ಕೂಡಲೇ ಅವರ ಧಾರ್ಮಿಕ ಸಂಸ್ಥೆಯ ಹಣವನ್ನು ಇತರ ಧರ್ಮಿಯರಿಗಾಗಿ ಖರ್ಚು ಮಾಡಲು ವಿರೋಧಿಸುತ್ತಾರೆ, ಎಂಬುದು ಗಮನದಲ್ಲಿಡಿ.

ಬೆಂಗಳೂರು – ಕರ್ನಾಟಕದ ವಕ್ಫ್ ಬೋರ್ಡ್ ಕೊರೋನಾದ ವಿರುದ್ಧ ಹೋರಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಾಯ ನಿಧಿಗೆ ಹಣವನ್ನು ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅದೇರೀತಿ ಅವರು ಇತರರಿಗೂ ಹಣವನ್ನು ನೀಡುವಂತೆ ಕರೆ ನೀಡಿದ್ದಾರೆ. ಅದಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಜಮೀರ ಅಹಮದ್ ವಿರೋಧಿಸಿದ್ದಾರೆ.

೧. ಜಮೀರ್ ಅಹಮದ ಇವರು ತಮ್ಮ ಮಾತನ್ನು ಮುಂದುವರಿಸುತ್ತ. ‘ವಕ್ಫ ಬೋರ್ಡ್‌ನ ಹಣ ಮುಸಲ್ಮಾನರದ್ದೇ ಆಗಿದ್ದರಿಂದ ಅದನ್ನು ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು. ವಕ್ಫ್ ಬೋರ್ಡ್‌ನ ಹಣ ಮುಸಲ್ಮಾನರಿಗೆ ನೀಡಬೇಕು. ಬೋರ್ಡ್‌ವು ರಾಜ್ಯ ಅಥವಾ ಕೇಂದ್ರ ಸರಕಾರಗಳಿಗೆ ಏಕೆ ಕೊಡಬೇಕು ?’ ಎಂದು ಕೇಳಿದರು

೨. ಕುಮಾರಸ್ವಾಮಿ ಇವರು ಮಾತನಾಡುತ್ತ, ‘ರಾಜ್ಯ ಸರಕಾರ ವಕ್ಫ್ ಬೋರ್ಡ್‌ಗೆ ಅನುದಾನ ನೀಡುತ್ತಿದೆ ಎಂಬುದನ್ನು ಜಮೀರ್ ಅವರು ಮರೆಯಬಾರದು’ ಎಂದಿದ್ದಾರೆ. (ರಾಜ್ಯ ಸರಕಾರ ವಕ್ಫ್ ಬೋರ್ಡ್‌ಗೆ ಏಕೆ ಅನುದಾನ ನೀಡುತ್ತಿದೆ ? ಆ ಹಣವನ್ನು ವಿಕಾಸಕ್ಕಾಗಿ ಏಕೆ ಉಪಯೋಗಿಸುತ್ತಿಲ್ಲಾ ?- ಸಂಪಾದಕರು)