‘ಪ್ರತಿಯೊಬ್ಬ ಪಾಲಕರಿಗೆ ತಮ್ಮ ಮಕ್ಕಳಿಂದ ಬಹಳಷ್ಟು ಅಪೇಕ್ಷೆಗಳಿರುತ್ತವೆ ಹಾಗೂ ಅದು ಸಹಜವಾಗಿಯೇ ಇರುತ್ತದೆ; ಆಗ ನಾವು ತಮ್ಮ ಮಕ್ಕಳ ಕ್ಷಮತೆಯ ಬಗ್ಗೆ ಅವಾಸ್ತವ ಅಪೇಕ್ಷೆಯನ್ನು ಇಟ್ಟುಕೊಳ್ಳುತ್ತಿಲ್ಲವಲ್ಲ, ಎಂಬ ವಿಚಾರವನ್ನೂ ಮಾಡಬೇಕಾಗುತ್ತದೆ. ಈ ಮಿತಿಗಳ ಯೋಗ್ಯವಾದ ಅರಿವು ಇಟ್ಟುಕೊಳ್ಳದಿದ್ದರೆ, ಪಾಲಕರ ಆಕಾಂಕ್ಷೆಯು ಈ ಮಕ್ಕಳಿಗೆ ತಾಳಲಾರದ ಹೊರೆಯಾಗುತ್ತದೆ. ಪ್ರಸ್ತುತ ಲೇಖನದಲ್ಲಿ ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳ ಬಗ್ಗೆ ಹಾಗೂ ಆ ಕುರಿತು ಪಾಲಕರು ಮಾಡಬೇಕಾದ ಪರಿಹಾರೋಪಾಯ ಇವುಗಳ ಬಗ್ಗೆ ಚರ್ಚೆ ಮಾಡಿದ್ದೇವೆ.
೧. ಪಾಲಕರ ಅಪೇಕ್ಷೆ ಹಾಗೂ ಮಕ್ಕಳ ಅಡಚಣೆ !
ಮಗುವನ್ನು ಶಾಲೆಗೆ ಸೇರಿಸಿದೆವು ಎಂದರೆ ಅವನು ಅಧ್ಯಯನದಲ್ಲಿ ಮುಂಚೂಣಿಯಲ್ಲೇ ಇರಬೇಕು, ಎಂದು ಪಾಲಕರ ಆಗ್ರಹವಿರುತ್ತದೆ. ನನ್ನ ಮಗನು ಅಧ್ಯಯನದೊಂದಿಗೆ ಆಟದಲ್ಲಿಯೂ ಮೊದಲನೇ ಸ್ಥಾನದಲ್ಲಿರಬೇಕು. ಅವನಿಗೆ ಯಾವುದಾದರೊಂದು ಕಲೆ ಬರಲೇಬೇಕು. ಪಾಲಕರ ಅಪೇಕ್ಷೆಗಳ ಸರಮಾಲೆಗಳು ಕೊನೆಗೊಳ್ಳುವುದೇ ಇಲ್ಲ. ಅದನ್ನು ಅರಗಿಸಿಕೊಳ್ಳುವಾಗ ಮಕ್ಕಳ ಮೇಲೆ ಭಾರ ಬೀಳುತ್ತದೆ. ತನ್ನ ಮಗನು ತರಬೇತಿಯಲ್ಲಿ ಇತರ ಮಕ್ಕಳಿಗಿಂತ ಹಿಂದೆ ಬೀಳುತ್ತಾನೆ, ಎಂದು ಗಮನಕ್ಕೆ ಬಂದ ನಂತರ ಪಾಲಕರಿಗೆ ಅಪೇಕ್ಷಾಭಂಗವಾಗುತ್ತದೆ. ನಂತರ ‘ನಾವಿಬ್ಬರೂ ಎಷ್ಟು ಹುಷಾರಿದ್ದೇವೆ. ಆದರೆ ನಮ್ಮ ಮಗನು ಹೇಗೆ ದಡ್ಡನಾದನು ? ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಲು ಸಹ ಅವನಿಗೇಕೆ ಆಗುವುದಿಲ್ಲ ?’ ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ. ಇದಕ್ಕೆ ‘ಇದೆಲ್ಲವೂ ಅವನ ಹಠಮಾರಿತನದಿಂದಾಗಿ ಆಗಿರಬಹುದು. ನಿಜವಾಗಿಯೂ ಅವನು ಶಾಲೆಗೆ ಹೋಗಬಾರದೆಂದು ಕಾರಣವನ್ನು ಹುಡುಕುತ್ತಿದ್ದಾನೆ !’, ಎಂಬ ಮಾತುಗಳ ಸರಮಾಲೆಯನ್ನು ಕಟ್ಟುತ್ತಾರೆ.
೨. ಶಾಲಾ ಜೀವನದಲ್ಲಿ ಕಲಿಯುವಿಕೆಗೆ ಸಂಬಂಧಿಸಿದ ಮಕ್ಕಳ ಸಮಸ್ಯೆಗಳು !
ಶಾಲೆ ಕಲಿಯುವ ವಯಸ್ಸಿನ ಮಕ್ಕಳಿಗಿರುವ ಸಮಸ್ಯೆಗಳ ಮಾಹಿತಿಯು ಮುಂದಿನಂತೆ !
೨ ಅ. ‘ಸ್ಪೆಸಿಫಿಕ್ ಲರ್ನಿಂಗ್ ಡಿಸೆಬಿಲಿಟಿ (ವಿಶಿಷ್ಟ ಶಿಕ್ಷಣ ನ್ಯೂನ್ಯತೆ)
ಕೆಲವು ಶಾಲೆಯ ಮಕ್ಕಳು ಅಧ್ಯಯನದಲ್ಲಿ ಹಿಂದೆ ಬೀಳುವುದು ಕಂಡು ಬರುತ್ತದೆ. ಕೆಲವು ವಿಶಿಷ್ಟ ವಿಷಯಗಳನ್ನು ತಿಳಿದುಕೊಳ್ಳಲು ಮಕ್ಕಳಿಗೆ ತುಂಬಾ ಅಡಚಣೆ ಬರುತ್ತದೆ. ಇಂತಹ ಮಕ್ಕಳಿಗೆ ಯಾವುದಾದರೊಂದು ಕೆಲಸವನ್ನು ಕೊಟ್ಟರೆ ಅವರಿಗೆ ಆ ಕೆಲಸ ಮಾಡಲು ಇತರ ಮಕ್ಕಳಿಗಿಂತ ಹೆಚ್ಚು ಸಮಯ ತಗಲುಗುತ್ತದೆ. ತರಗತಿಯಲ್ಲಿ ವಿಷಯಗಳನ್ನು ಏಕಾಗ್ರತೆಯಿಂದ ಕೇಳುವುದು ಅವರಿಗೆ ಕಷ್ಟವಾಗುತ್ತದೆ. ಆದ ತಪ್ಪನ್ನೇ ಅವರು ಪದೇ ಪದೇ ಮಾಡುತ್ತಾರೆ. ಓದುವಾಗ ಮೇಲಿನ ಸಾಲಿನ ಕೆಳಗಿನ ಅಥವಾ ಕೆಳಗಿನ ಸಾಲಿನ ಅದರ ಕೆಳಗಿನ ಶಬ್ದವನ್ನು ಬಿಟ್ಟು ಓದುತ್ತಾರೆ. ಈ ರೀತಿಯ ತಪ್ಪುಗಳು ಅವರಿಂದ ಆಗುತ್ತವೆ. ಮೌಖಿಕವಾಗಿ ಹೇಳಿದ ವಾಕ್ಯ ಅಥವಾ ಶಬ್ದವನ್ನು ಬರೆಯುವುದು ಅವರಿಗೆ ಕಠಿಣವೇ ಇರುತ್ತದೆ. ಗಣಿತದ ಚಿಹ್ನೆಗಳನ್ನು ತಿಳಿದುಕೊಳ್ಳುವುದು ಕಠಿಣವಿರುತ್ತದೆ. ಕೆಲವು ಸೂಚನೆಗಳನ್ನು ಸತತವಾಗಿ ಹೇಳಿದರೆ ಅದಕ್ಕನುಸಾರ ಕೃತಿ ಮಾಡುವುದು ಅವರಿಗೆ ಕಠಿಣವಾಗುತ್ತದೆ. ಶಾಲೆಯ ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬರುತ್ತಿದ್ದರೆ ಅವರಿಗೆ ‘ಸ್ಪೆಸಿಫಿಕ್ ಲರ್ನಿಂಗ್ ಡಿಸೆಬಿಲಿಟಿ’ ಎಂಬ ಮಾನಸಿಕ ಸಮಸ್ಯೆಯು ಇರುವ ಸಾಧ್ಯತೆಯಿದೆ.
೨ ಆ. ‘ಸ್ಲೋ ಲರ್ನರ್ಸ್ (ವಿದ್ಯೆ ಗ್ರಹಿಸುವ ವೇಗ ಕಡಿಮೆಯಿರುವುದು)
ಇಂತಹ ಮಕ್ಕಳ ಬುಧ್ಯಾಂಕವು ೭೦ ರಿಂದ ೯೦ ರ ನಡುವೆ ಇರುವ ಸಾಧ್ಯತೆಯಿದೆ. ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಈ ಮಕ್ಕಳು ಇತರ ಮಕ್ಕಳ ತುಲನೆಯಲ್ಲಿ ನಿಧಾನ ಗತಿಯಲ್ಲಿ ಕಲಿಯುತ್ತಾರೆ. ಇವರಿಗೂ ತರಗತಿಯಲ್ಲಿ ಗಮನವಿಡಲು ಹಾಗೂ ಏಕಾಗ್ರತೆ ಬರಲು ಅಡಚಣೆಯಾಗುತ್ತದೆ. ನೀಡಿದ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತಗಲುತ್ತದೆ.
ಇಂತಹ ಮಕ್ಕಳ ಬರವಣಿಗೆಯು ಅವ್ಯವಸ್ಥಿತವಾಗಿರುವುದು ಕಂಡು ಬರುತ್ತದೆ. ಬರೆಯುವಾಗ ಅವರು ಆವಶ್ಯಕವಿರದ ವಿಷಯವನ್ನೂ ಬರೆಯುತ್ತಾರೆ. ಲಿಖಿತ ಪರೀಕ್ಷೆಗಿಂತ ಮೌಖಿಕ ಪರೀಕ್ಷೆಯಲ್ಲಿ ಅವರಿಗೆ ಉತ್ತಮ ಅಂಕಗಳು ಸಿಗುತ್ತವೆ. ಪ್ರಯೋಗ ಪರೀಕ್ಷೆಯಲ್ಲಿ ಮಾತ್ರ ನೀಡಿದ ಸೂಚನೆಯನ್ನು ಅವರಿಗೆ ಪುನಃ ಹೇಳಬೇಕಾಗುತ್ತದೆ. ಯಾವುದಾದರೂ ಮಕ್ಕಳಿಗೆ ಅವರ ಭೂತಕಾಲದಲ್ಲಿ ಫಿಟ್ಸ್‌ನ ತೊಂದರೆಯಿದ್ದರೆ ಅಥವಾ ತಲೆಗೆ ಹೊಡೆತ ಬಿದ್ದಿದ್ದರೆ, ಇಂತಹ ಮಕ್ಕಳಲ್ಲಿ ‘ಸ್ಲೋ ಲರ್ನಿಂಗ್’ನ ಸಮಸ್ಯೆಯು ಉದ್ಭವಿಸಬಹುದು.
೨ ಇ. ಆಟಿಝಮ್
ಶಾಲೆಗೆ ಹೋದ ನಂತರವೂ ಕೆಲವು ಮಕ್ಕಳು ಒಂಟಿಯಾಗಿರಲು ಇಷ್ಟಪಡುತ್ತಾರೆ. ಯಾರೊಂದಿಗೂ ಬೆರೆಯುವುದಿಲ್ಲ. ಈ ಮಕ್ಕಳಿಗೆ ಇತರರೊಂದಿಗೆ ಮಾತನಾಡುವಾಗ ದೃಷ್ಟಿಗೆ ದೃಷ್ಟಿ ನೋಡಿ ಮಾತನಾಡುವುದಿಲ್ಲ. ಆದುದರಿಂದ ಮಾತನಾಡುವಾಗ ಮಕ್ಕಳು ಆಚೆ ಈಚೆ ನೋಡಿ ಮಾತನಾಡುತ್ತಾರೆ. ಯಾವುದಾದರೊಂದು ಪ್ರಶ್ನೆಯನ್ನು ಕೇಳಿದರೆ ಅದರ ಉತ್ತರವನ್ನು ನೀಡುವ ಬದಲು ಈ ಮಕ್ಕಳು ಹೆಚ್ಚಾಗಿ ಅದೇ ಪ್ರಶ್ನೆಯನ್ನು ಪುನಃ ಉಚ್ಚರಿಸುತ್ತಾರೆ, ಉದಾ. ನನ್ನ ಹೆಸರು ಏನು ? ಎಂಬ ಪ್ರಶ್ನೆಗೆ ಉತ್ತರ ನೀಡುವಾಗ ಹೆಸರನ್ನು ಹೇಳುವ ಬದಲು ಹುಡುಗನು ‘ನಿನ್ನ ಹೆಸರೇನು ? ಎಂಬ ಪ್ರತಿಪ್ರಶ್ನೆ ಕೇಳುತ್ತಾನೆ. ಇತರ ಮಕ್ಕಳೊಂದಿಗೆ ಆಡುತ್ತಿರುವಾಗ ಈ ಮಕ್ಕಳು ತಮ್ಮ ಆಟವಾಡುವ ಸಮಯದ ದಾರಿಯನ್ನು ಕಾಯುವುದಿಲ್ಲ. ಅವರಿಗೆ ಅವರ ಹೆಸರಿನಿಂದ ಕರೆದರೆ ಪ್ರತಿ ಬಾರಿಗೆ ಆ ಕೂಗಿಗೆ ಓಗೊಡುವುದಿಲ್ಲ. ಈ ಮಕ್ಕಳಿಗೆ ಕಣ್ಣುಗಳನ್ನು ಮಿಟುಕಿಸುವುದು, ಭುಜ ಹಾರಿಸುವುದು, ವಿಶಿಷ್ಟ ವಸ್ತುಗಳ ವಾಸನೆ ತೆಗೆದುಕೊಳ್ಳುವುದು, ಇಂತಹ ರೂಢಿಗಳು ಇರುವ ಸಾಧ್ಯತೆಯಿರುತ್ತದೆ. ಈ ಸಮಸ್ಯೆಗಳಿಂದ ಕೂಡಿದ ಮಕ್ಕಳು ತರಗತಿಯಲ್ಲಿ ತಮ್ಮ ಕುಳಿತುಕೊಳ್ಳುವ ಸ್ಥಳದ ವಿಷಯದಲ್ಲಿ ವಿಚಿತ್ರ ಹಠವಿರುತ್ತದೆ. ತರಗತಿಯಲ್ಲಿ ಈ ಮಕ್ಕಳು ಅದೇ ಅದೇ ಪ್ರಶ್ನೆಯನ್ನು ಪುನಃ ಕೇಳುವ ಅಥವಾ ನಡೆದ ವಿಷಯಗಳೊಂದಿಗೆ ಸಂಬಂಧವಿಲ್ಲದ ಪ್ರಶ್ನೆಯನ್ನು ಕೇಳುವ ಸಾಧ್ಯತೆ ಇರುತ್ತದೆ. ಆದುದರಿಂದ ಶಿಕ್ಷಕರ ಅಥವಾ ಇತರ ಮಕ್ಕಳ ಮನಸ್ಸಿನಲ್ಲಿ ನಡೆದ ಕೆಲಸದಲ್ಲಿ ಅಡಚಣೆ ನಿರ್ಮಾಣವಾಗುತ್ತಿರುವ ಭಾವನೆಯು ನಿರ್ಮಾಣವಾಗಬಹುದು.
೨ ಈ. ‘ಲೋ ವಿಸನ್ (ಅಲ್ಪ ದೃಷ್ಟಿ)
ಶಾಲೆಯಲ್ಲಿ ಕೆಲವು ಮಕ್ಕಳು ಫಲಕದ ಮೇಲೆ ಬರೆದದ್ದು ಸರಿಯಾಗಿ ಕಾಣಿಸದ ಕಾರಣ ಅಧ್ಯಯನದಲ್ಲಿ ಹಿಂದೆ ಬೀಳುತ್ತಿರುತ್ತಾರೆ. ಈ ಮಕ್ಕಳಿಗೆ ‘ಲೋ ವಿಸನ್’, ಸಮಸ್ಯೆಯು ಇರುತ್ತದೆ. ಕೆಲವು ಮಕ್ಕಳಿಗೆ ಮೊದಲ ಬೆಂಚಿನಲ್ಲಿ ಕುಳಿತರೂ ಸರಿಯಾಗಿ ಕಾಣಿಸುವುದಿಲ್ಲ. ಶಾಲೆಯ ವಯಸ್ಸಿನಲ್ಲಿ ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸುತ್ತಿದ್ದರೆ. ಅದಕ್ಕೆ ‘ಲೋ ವಿಸನ್’ ಅಂದರೆ ದೃಷ್ಟಿಯು ಕಡಿಮೆಯಿರುವ ಸಮಸ್ಯೆಯು ಇರಬಹುದು.
೩. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ಬೇಕು !
ನನಗೆ ಇಂತಹ ಒಂದು ಸಮಸ್ಯೆಯಿದೆ, ಎಂದು ಮಗುವು ತನ್ನ ಬಾಯಿಯಿಂದ ಸಮಾಧಾನದಿಂದ ಹೇಳುತ್ತಿರುತ್ತದೆ ! ಅದರ ಸಮಸ್ಯೆಯನ್ನು ತಿಳಿದುಕೊಳ್ಳಬೇಕು. ಪಾಲಕರಿಗೆ ಹಾಗೂ ಮುಖ್ಯ ಅಂದರೆ ಶಾಲೆಯ ಶಿಕ್ಷಕರಿಗೆ ಇಂತಹುದೇ ಒಂದು ಸಮಸ್ಯೆಯೆಂದರೆ ‘ನಮ್ಮ ಮಗು ಸಾಮಾನ್ಯವಾಗಿಲ್ಲ (ನಾರ್ಮಲ್) ಇಲ್ಲ’, ಎಂದು ತಿಳಿದುಕೊಳ್ಳಲೇಬಾರದು. ಕೊನೆಗೆ ‘ನಾರ್ಮಲ್’ ಹಾಗೂ ‘ಅಬ್‌ನಾರ್ಮಲ್’ ವಿಷಯವನ್ನೂ ನಾವೇ ಅನಾವಶ್ಯಕವಾಗಿ ಸಿದ್ಧ ಮಾಡುತ್ತಿರುತ್ತೇವೆ ! ನಮ್ಮ ಮಗುವಿನ ಕೆಲವು ವಿಶೇಷ ಬೇಡಿಕೆ ಇರುವುದನ್ನು ಪಾಲಕರು ಗಮನದಲ್ಲಿಟ್ಟುಕೊಳ್ಳುವುದು ಆವಶ್ಯಕತೆಯಿದೆ. ಯೋಗ್ಯ ಮಾರ್ಗದರ್ಶನ ದೊರಕಿದರೆ ಈ ಮಕ್ಕಳು ಎಲ್ಲಿಯೂ ಹಿಂದೆ ಬೀಳುವುದಿಲ್ಲ. ಸರಿಯಾದ ಸಮಯಕ್ಕೆ ವೈದ್ಯಕೀಯ ತಜ್ಞರ ಸಲಹೆ ಹಾಗೂ ಯೋಗ್ಯ ಮಾರ್ಗದರ್ಶನ ಇವುಗಳು ಸಹ ಮಹತ್ವದ್ದಾಗಿದೆ.’
ಸಂಕಲನಕಾರರು – ಶ್ರೀಮತಿ ರೇಶ್ಮಾ ಭಾಯೀಪ, ಚಿಕಿತ್ಸಾಲಯದ ಮಾನಸಶಾಸ್ತ್ರಜ್ಞರು, ಜಿಲ್ಲಾ ಚಿಕಿತ್ಸಾಲಯ, ಸಿಂಧುದುರ್ಗ, ಮಹಾರಾಷ್ಟ್ರ.