‘ಅಶ್ವಗಂಧ’ದಿಂದ ನಿರ್ಮಿಸಿದ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು ! – ಐಐಟಿ ದೆಹಲಿಯ ತೀರ್ಮಾನ

ಪ್ರಾ. ಡಿ. ಸುಂದರ

ನವ ದೆಹಲಿ – ಐಐಟಿ ದೆಹಲಿಯ ‘ಬಯೋಕೆಮಿಕಲ್’ ಇಂಜಿನಿಯರಿಂಗ್‌ನ ಪ್ರಾ. ಡಿ. ಸುಂದರ ಇವರು ಮಾಡಿದಂತಹ ಶೋಧನೆಗನುಸಾರ ‘ಅಶ್ವಗಂಧ’ದಿಂದ ತಯಾರಿಸಿದ ನೈಸರ್ಗಿಕ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು. ಅಶ್ವಗಂಧದ ಒಂದು ರಾಸಾಯನಿಕ ಪದಾರ್ಥವು ಕೊರೋನಾದ ಜೀವಕೋಶವನ್ನು ಹೆಚ್ಚಾಗಿಸುವುದನ್ನು ತಡೆಗಟ್ಟಲು ಪರಿಣಾಮಕಾರಿಯಾಗಬಹುದು. ಅಶ್ವಗಂಧವನ್ನು ಭಾರತದಲ್ಲಿ ಹಿಂದಿನಿಂದಲೂ ಆಯುರ್ವೇದ ಚಿಕಿತ್ಸೆಗಾಗಿ ಉಪಯೋಗಿಲಾಗುತ್ತಿದೆ. ಪ್ರಾ. ಡಿ. ಸುಂದರ ಕಳೆದ ೧೫ ವರ್ಷಗಳಿಂದ ಅಶ್ವಗಂಧದ ಮೇಲೆ ಶೋಧನೆಯನ್ನು ಮಾಡಲು ಜಪಾನಿನ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದೆ.

ಪ್ರಾ. ಡಿ. ಸುಂದರ ತಮ್ಮ ಮಾತನ್ನು ಮುಂದುವರೆಸುತ್ತ,

೧. ನಾವು ಅಶ್ವಗಂಧದಿಂದ ಕೊರೋನಾದ ಮೇಲೆ ಔಷಧವನ್ನು ತಯಾರಿಸುವ ಕೆಲಸ ಮಾಡುವೆವು. ಅಶ್ವಗಂಧದಿಂದ ಕೊರೋನಾದ ಮೇಲೆ ಔಷಧವನ್ನು ತಯಾರಿಸಲು ಅನೇಕ ವೈದ್ಯಕೀಯ ಪರೀಕ್ಷಣೆ ಮಾಡುವುದು ಅಗತ್ಯವಿದೆ. ಆಧುನಿಕ ಪ್ರಯೋಗಶಾಲೆಯಲ್ಲಿ ಪ್ರಯತ್ನ ಮಾಡಬೇಕಿದೆ. ನಾವು ಅದರ ಬಗ್ಗೆಯೂ ಕೆಲಸವನ್ನು ಮಾಡುವೆವು.

೨. ಇಂದು ತಿಂಗಳ ಹಿಂದೆ ಕೇಂದ್ರ ಸರಕಾರವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಮ್.ಆರ್), ಆಯುಷ್ ಸಚಿವಾಲಯ, ಆರೋಗ್ಯ ಸಚಿವಾಯಲಯ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯವು ಒಟ್ಟು ಸೇರಿ ಒಂದು ಕೃತಿದಳವನ್ನು ನಿರ್ಮಿಸಿದ್ದಾರೆ. ಅದರಲ್ಲಿ ಅವರಿಗೆ ಕೊರೋನಾದ ಬಗ್ಗೆ ಅಶ್ವಗಂಧ, ಯಷ್ಟಿಮಧು, ಗುಡುಚಿ ಸಹಿತ ಪಿಪ್ಪಲಿ, ಆಯುಷ್-೬೪ (ಮಲೇರಿಯಾದ ಔಷಧ) ನಂತಹ ಆಯುರ್ವೇದ ಔಷಧಗಳ ಮೇಲೆ ಸಂಶೋಧನೆ ಮಾಡಲು ಹೇಳಿದ್ದರು. ಅಶ್ವಗಂಧ ಮೇಲಿನ ಸಂಶೋಧನೆಯು ನಮ್ಮ ಕಡೆಯಿಂದ ಸ್ವತಂತ್ರವಾಗಿ ಮಾಡಲಾಗಿದೆ. ಇತರ ಅನೇಕ ಸಂಶೋಧಕರು ಕೊರೋನಾದ ಮೇಲೆ ನಮ್ಮ ಸಂಶೋಧನೆಯನ್ನು ಉಪಯೋಗಿಸಬಹುದು.